ಶೀಘ್ರದಲ್ಲಿಯೇ 65 ಲಕ್ಷ ಪೆನ್ಷನ್ ಧಾರಕರಿಗೆ ಸಿಗಲಿದೆ Modi Govt ನೀಡಲಿದೆಯೇ ಈ ಗಿಫ್ಟ್

ದೇಶದ ಸುಮಾರು 65 ಲಕ್ಷ ಪಿಂಚಣಿದಾರರಿಗೆ ಶೀಘ್ರದಲ್ಲಿಯೇ ಒಂದು ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಒಂದು ವೇಳೆ BJP ಸಂಸದರ ಈ ಪ್ರಸ್ತಾವನೆಯನ್ನು ಕಾರ್ಮಿಕ ಸಚಿವಾಲಯ ಒಪ್ಪಿಕೊಂಡರೆ ಈ ಪಿಂಚಣಿದಾರರ ಮೂಲ ಪಿಂಚಣಿಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

Last Updated : Sep 26, 2020, 10:11 AM IST
  • ದೇಶದ ಸುಮಾರು 65 ಲಕ್ಷ ಪಿಂಚಣಿದಾರರಿಗೆ ಶೀಘ್ರದಲ್ಲಿಯೇ ಒಂದು ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ.
  • BJP ಸಂಸದೆಯ ಪ್ರಸ್ತಾವನೆಗೆ ಕಾರ್ಮಿಕ ಸಚಿವಾಲಯದ ಅಂಗೀಕಾರ ದೊರೆತರೆ ಪಿಂಚಣಿ ಹೆಚ್ಚಳ.
  • ಈ ಕುರಿತು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರಿಗೆ ಪತ್ರ ಬರೆದ ಹೇಮಾ ಮಾಲಿನಿ.
ಶೀಘ್ರದಲ್ಲಿಯೇ 65 ಲಕ್ಷ ಪೆನ್ಷನ್ ಧಾರಕರಿಗೆ ಸಿಗಲಿದೆ Modi Govt ನೀಡಲಿದೆಯೇ ಈ ಗಿಫ್ಟ್  title=

ನವದೆಹಲಿ: ದೇಶದ ಸುಮಾರು 65 ಲಕ್ಷ ಪಿಂಚಣಿದಾರರಿಗೆ ಶೀಘ್ರದಲ್ಲಿಯೇ ಒಂದು ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಒಂದು ವೇಳೆ BJP ಸಂಸದರ ಈ ಪ್ರಸ್ತಾವನೆಯನ್ನು ಕಾರ್ಮಿಕ ಸಚಿವಾಲಯ ಒಪ್ಪಿಕೊಂಡರೆ ಈ ಪಿಂಚಣಿದಾರರ ಮೂಲ ಪಿಂಚಣಿಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ನೌಕರರ ಭವಿಷ್ಯ ನಿಧಿ ಸಂಘಟನೆಯ (EPFO) ನೌಕರರ ಪಿಂಚಣಿ ನಿಧಿ (EPS)ಅಡಿ ಬರುವ 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ಮತ್ತು ಇತರ ಸೌಲಭ್ಯಗಳ ಪ್ರಯೋಜನಗಳನ್ನು ವಿಸ್ತರಿಸುವಂತೆ ಲೋಕಸಭಾ ಸದಸ್ಯೆ ಹೇಮಾ ಮಾಲಿನಿ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರಿಗೆ ಪತ್ರ ಬರೆದಿದ್ದಾರೆ. 

ಇದನ್ನು ಓದಿ- ದೇಶಾದ್ಯಂತ ಸುಮಾರು 65 ಲಕ್ಷ ಖಾತೆದಾರರಿಗೆ ಭಾರಿ ನೆಮ್ಮದಿಯ ಸುದ್ದಿ ನೀಡಿದ EPFO

EPS-95 ರಾಷ್ಟ್ರೀಯ ಸಂಘರ್ಷ ಸಮಿತಿ (NAC) ಪಿಂಚಣಿದಾರರ ತುಟ್ಟಿ ಭತ್ಯೆ (DA)ಸೇರಿದಂತೆ ಮೂಲ  ಮಾಸಿಕ ಪಿಂಚಣಿಯನ್ನು  7,500 ರೂ.ಗಳಿಗೆ ಹೆಚ್ಚಿಸಬೇಕು  ಹಾಗೂ ಪಿಂಚಣಿದಾರರ ಸಂಗಾತಿಗೆ (ಪತಿ ಅಥವಾ ಪತ್ನಿ ) ಉಚಿತ ಆರೋಗ್ಯ ಸೇವೆ ಸೇರಿದಂತೆ ಇದಾರೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೋರಿದೆ.

ಇದನ್ನು ಓದಿ-EPFO ಚಂದಾದಾರರಿಗೊಂದು Good News

ನಿವೃತ್ತಿಯ ನಂತರ, ಇಪಿಎಸ್ -95 ರ ಪಿಂಚಣಿ ಹೊಂದಿರುವವರು ಬಹಳ ನಾಮಮಾತ್ರ ಪಿಂಚಣಿ ಪಡೆಯುತ್ತಿದ್ದಾರೆ. ಇಂತಹ ಹಣದುಬ್ಬರದ ಸಮಯದಲ್ಲಿ ಇಷ್ಟು ಕಡಿಮೆ ಹಣದಿಂದ ಬದುಕುವುದು ತುಂಬಾ ಕಷ್ಟ ಎಂದು ಸಂಸದೆ ಹೇಮಾಮಾಲಿನಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ- EPFO ಚಂದಾದಾರರಿಗೆ Alert: ಈ ರೀತಿ ಪಡೆಯಿರಿ ರೂ.50 ಸಾವಿರವರೆಗೆ ರಿಟೈರ್ ಮೆಂಟ್ ಗಿಫ್ಟ್

ಇಪಿಎಸ್ -95, ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPS) ನೌಕರರ ಪಿಂಚಣಿ ಯೋಜನೆಯಾಗಿದೆ. EPS-95 ಅಡಿಯಲ್ಲಿ ಬರುವ ನೌಕರರ ಮೂಲ ವೇತನ (Basic)ದ ಶೇ.12 ರಷ್ಟು ಭಾಗ ಭವಿಷ್ಯ ನಿಧಿ ಅಂದರೆ ಪ್ರಾವಿಡೆಂಟ್ ಫಂಡ್ ಗೆ ಹೋಗುತ್ತದೆ. ಇನ್ನೊಂದೆಡೆ ನೌಕರಿದಾತರ ಶೇ.12 ರಷ್ಟು ಕೊಡುಗೆಯ ಶೇ.8.33 ಭಾಗ EPS ಗೆ ಸೇರುತ್ತದೆ.

Trending News