ಇನ್ಮುಂದೆ ಈ ಜನರಿಗೆ ಸಿಗಲ್ಲ ಉಚಿತ ಪಡಿತರ, ಸರ್ಕಾರದ ಮಹತ್ವದ ಘೋಷಣೆ!

Free Ration Update: ಉಚಿತ ಪಡಿತರ ಪಡೆಯುವವರಿಗೆ ಸರ್ಕಾರ ಮತ್ತೊಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇನ್ಮುಂದೆ ಲಕ್ಷಾಂತರ ಪಡಿತರ ಚೀಟಿ ಧಾರಕರಿಗೆ ಉಚಿತ ಪಡಿತರ ಕೊಡುವುದಿಲ್ಲ ಎಂದು ಸರ್ಕಾರ ಹೇಳಿದೆ (Business News In Kannada)  

Written by - Nitin Tabib | Last Updated : Oct 30, 2023, 06:46 PM IST
  • ಎನ್‌ಎಫ್‌ಎಸ್‌ಎಯಿಂದ ಪಡೆದ ಮಾಹಿತಿಯ ಪ್ರಕಾರ, ಆದಾಯ ತೆರಿಗೆ ಪಾವತಿಸುವ ಅಥವಾ ಇತರ ಕಾರ್ಡ್‌ದಾರರು ಉಚಿತ ಪಡಿತರ ಪಡೆಯಲು ಅರ್ಹರಾಗಿರುವುದಿಲ್ಲ.
  • ಇವರೆಲ್ಲರಿಗೂ ಉಚಿತ ಪಡಿತರ ಸೌಲಭ್ಯದ ಪ್ರಯೋಜನ ಸಿಗುವುದಿಲ್ಲ.
  • ಸರ್ಕಾರದ ಮಾಹಿತಿಯ ಪ್ರಕಾರ, 10 ಬಿಘಾಗಳಿಗಿಂತ ಹೆಚ್ಚು ಭೂಮಿ ಹೊಂದಿರುವ ಜನರು ಉಚಿತ ಪಡಿತರ ಪ್ರಯೋಜನವನ್ನು ಪಡೆಯುವುದಿಲ್ಲ.
ಇನ್ಮುಂದೆ ಈ ಜನರಿಗೆ ಸಿಗಲ್ಲ ಉಚಿತ ಪಡಿತರ, ಸರ್ಕಾರದ ಮಹತ್ವದ ಘೋಷಣೆ! title=

ನವದೆಹಲಿ: ನೀವು ಕೂಡ ಸರ್ಕಾರ ನೀಡುವ ಉಚಿತ ಪಡಿತರದ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ ಈ ಸುದ್ದಿ ನಿಮಗಾಗಿ. ಉಚಿತ ಪಡಿತರ ಪಡೆಯುವವರಿಗೆ ಸರ್ಕಾರ ಮತ್ತೊಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದರಿಂದ ಉಚಿತ ಪಡಿತರ ಪಡೆಯುವ ಲಕ್ಷಾಂತರ ಜನರು ಉಚಿತ ಪಡಿತರದಿಂದ ವಂಚಿತರಾಗಲಿದ್ದಾರೆ. ಇದಕ್ಕೆ ಕಾರಣವನ್ನೂ ಕೂಡ ಸರ್ಕಾರ ನೀಡಿದೆ. ಸರ್ಕಾರದ ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಶಾಮಿಲಾಗಿದೆಯೇ ಎಂಬುದನ್ನು ನೀವೂ ಕೂಡ ಖಂಡಿತ ತಿಳಿದುಕೊಳ್ಳಿ. (Business News In Kannada)

ಉಚಿತ ಪಡಿತರ ಯೋಜನೆಯ ಲಾಭ ಪಡೆಯುತ್ತಿರುವ ಎಲ್ಲಾ ಅನರ್ಹ ಪಡಿತರ ಚೀಟಿದಾರರನ್ನು ಈ ಯೋಜನೆಯಿಂದ ತಕ್ಷಣವೇ ತೆಗೆದುಹಾಕಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಉಚಿತ ಪಡಿತರ ಸೌಲಭ್ಯವು ಬಡವರು ಮತ್ತು ನಿರ್ಗತಿಕರಿಗೆ ಮಾತ್ರ ಇದೆ ಹಾಗೂ  ಎಲ್ಲಾ ವರ್ಗದವರಿಗೆ ಅಲ್ಲ ಎಂದು ಸರ್ಕಾರ ಹೇಳಿದೆ. ಪ್ರಸ್ತುತ, ಉಚಿತ ಪಡಿತರ ಪ್ರಯೋಜನವನ್ನು ಪಡೆಯದ ಲಕ್ಷಾಂತರ ಜನರನ್ನು ಸರ್ಕಾರ ಗುರುತಿಸಿದೆ.

ಪ್ರಸ್ತುತ 10 ಲಕ್ಷ ಜನರನ್ನು ಗುರುತಿಸಲಾಗಿದೆ
ಉತ್ತರ ಪ್ರದೇಶ ಮತ್ತು ಬಿಹಾರ ಒಂದರಲ್ಲೇ ಸುಮಾರು 10 ಲಕ್ಷ ಅನರ್ಹ ಕಾರ್ಡುದಾರರ ಹೆಸರನ್ನು ಗುರುತಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅನರ್ಹರು ಮತ್ತು ಇನ್ನೂ ಉಚಿತ ಪಡಿತರ ಪ್ರಯೋಜನವನ್ನು ಪಡೆಯುತ್ತಿರುವ ಎಲ್ಲರ ಪಡಿತರ ಚೀಟಿಗಳನ್ನು ಸರ್ಕಾರವು ರದ್ದುಗೊಳಿಸುತ್ತದೆ. ದೇಶಾದ್ಯಂತ ಈ ಕುರಿತು ತನಿಖೆ ನಡೆಯುತ್ತಿದೆ.

ಉಚಿತ ಪಡಿತರ ಯಾರಿಗೆ ಸಿಗುವುದಿಲ್ಲ?
ಎನ್‌ಎಫ್‌ಎಸ್‌ಎಯಿಂದ ಪಡೆದ ಮಾಹಿತಿಯ ಪ್ರಕಾರ, ಆದಾಯ ತೆರಿಗೆ ಪಾವತಿಸುವ ಅಥವಾ ಇತರ ಕಾರ್ಡ್‌ದಾರರು ಉಚಿತ ಪಡಿತರ ಪಡೆಯಲು ಅರ್ಹರಾಗಿರುವುದಿಲ್ಲ. ಇವರೆಲ್ಲರಿಗೂ ಉಚಿತ ಪಡಿತರ ಸೌಲಭ್ಯದ ಪ್ರಯೋಜನ ಸಿಗುವುದಿಲ್ಲ. ಸರ್ಕಾರದ ಮಾಹಿತಿಯ ಪ್ರಕಾರ, 10 ಬಿಘಾಗಳಿಗಿಂತ ಹೆಚ್ಚು ಭೂಮಿ ಹೊಂದಿರುವ ಜನರು ಉಚಿತ ಪಡಿತರ ಪ್ರಯೋಜನವನ್ನು ಪಡೆಯುವುದಿಲ್ಲ.

ಇದನ್ನೂ ಓದಿ-ಪಿಂಚಣಿದಾರರಿಗೊಂದು ಮಹತ್ವದ ಅಪ್ಡೇಟ್, ಹಣ ಹಿಂಪಡೆಯುವ ಈ ನಿಯಮದಲ್ಲಾಗಿದೆ ಬದಲ್ಲವಣೆ!

ಪಡಿತರ ಚೀಟಿಗಳು ರದ್ದಾಗಲಿವೆ
ಇದಲ್ಲದೆ, ಉತ್ತಮ ವ್ಯಾಪಾರವನ್ನು ನಡೆಸುತ್ತಿರುವ ಜನರು. ಅಂದರೆ ಪ್ರತಿ ವರ್ಷ 3 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿರುವವರಿಗೂ ಕೂಡ ಇದರ ಲಾಭ ಸಿಗುವುದಿಲ್ಲ. ಅಂದರೆ ಈ ಜನರಿಗೆ ಸರ್ಕಾರದ ಪಡಿತರ ಪ್ರಯೋಜನವೂ ಸಿಗುವುದಿಲ್ಲ. ಉಚಿತ ಪಡಿತರ ಸೌಲಭ್ಯದ ಲಾಭ ಪಡೆಯುತ್ತಿರುವ ಅಂತಹ ಎಲ್ಲ ಅನರ್ಹ ಪಡಿತರ ಚೀಟಿದಾರರ ಕಾರ್ಡ್ ರದ್ದುಪಡಿಸಲು ಸಿದ್ಧತೆ ನಡೆಸಲಾಗಿದೆ.

ಇದನ್ನೂ ಓದಿ-ಸಿಬಿಲ್ ಸ್ಕೋರ್ ಗೆ ಸಂಬಂಧಿಸಿದಂತೆ 5 ಹೊಸ ನಿಯಮಗಳನ್ನು ರೂಪಿಸಿದೆ ಆರ್ಬಿಐ, ಸಾಲ ಪಡೆಯುವ ಮುನ್ನ ತಿಳಿದುಕೊಳ್ಳಿ!

ಈ ಯೋಜನೆಯನ್ನು ಕರೋನಾ ಅವಧಿಯಲ್ಲಿ ಆರಂಭಿಸಲಾಗಿತ್ತು
ಕೊರೊನಾ ಅವಧಿಯಲ್ಲಿ ಬಡವರ ನೆರವಿಗಾಗಿ ಸರ್ಕಾರ ಉಚಿತ ಪಡಿತರ ಸೌಲಭ್ಯವನ್ನು ಆರಂಭಿಸಿತ್ತು. ಯಾವುದೇ ವ್ಯಕ್ತಿ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಸರ್ಕಾರ ಉಚಿತ ಪಡಿತರ ಸೌಲಭ್ಯವನ್ನು ಆರಂಭಿಸಿದೆ. ದೇಶಾದ್ಯಂತ ಸುಮಾರು 80 ಕೋಟಿ ಜನರು ಉಚಿತ ಪಡಿತರ ಸೌಲಭ್ಯದ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಸ್ತುತ, ಸರ್ಕಾರವು ಉಚಿತ ಪಡಿತರ ದಿನಾಂಕವನ್ನು 31 ಡಿಸೆಂಬರ್ 2023 ಕ್ಕೆ ವಿಸ್ತರಿಸಿದೆ, ಆದರೆ ಅದನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News