ತಿಂಗಳಿಗೆ ಸಿಗುವುದು 50 ಸಾವಿರ ರೂ. ಪಿಂಚಣಿ ! ಭದ್ರವಾಗಿರುವುದು ವೃದ್ದಾಪ್ಯ ಜೀವನ

ತಿಂಗಳಿಗೆ  50,000 ರೂಪಾಯಿ ಮಾಸಿಕ ಪಿಂಚಣಿ ಪಡೆಯಬೇಕಾದರೆ ಹೂಡಿಕೆ ಹೇಗಿರಬೇಕು ಎನ್ನುವುದನ್ನು ಇಲ್ಲಿ ಮೊದಲು ಅರ್ಥ ಮಾಡಿಕೊಳ್ಳಬೇಕು.

Written by - Ranjitha R K | Last Updated : Oct 4, 2023, 12:49 PM IST
  • ನಿವೃತ್ತಿ ಮತ್ತು ನಿವೃತ್ತಿ ನಂತರದ ಜೀವನ ಬಹಳ ಮುಖ್ಯ
  • ಜನರು ನಿವೃತ್ತಿಯ ಯೋಜನೆಗಳತ್ತ ಗಮನ ಹರಿಸುತ್ತಾರೆ
  • ಸರಿಯಾಗಿ ಯೋಜನೆ ಹಾಕಿಕೊಳ್ಳದೆ ಹೋದರೆ ದೈನಂದಿನ ಜೀವನ ಕಷ್ಟ
ತಿಂಗಳಿಗೆ ಸಿಗುವುದು 50 ಸಾವಿರ ರೂ. ಪಿಂಚಣಿ ! ಭದ್ರವಾಗಿರುವುದು ವೃದ್ದಾಪ್ಯ ಜೀವನ  title=

ಬೆಂಗಳೂರು : ಪ್ರತಿಯೊಬ್ಬರ ಜೀವನದಲ್ಲಿ ನಿವೃತ್ತಿ ಮತ್ತು ನಿವೃತ್ತಿ ನಂತರದ ಜೀವನ ಬಹಳ ಮುಖ್ಯವಾಗಿರುತ್ತದೆ. ಈ ವಯಸ್ಸಿನಲ್ಲಿ ಯೌವನದಲ್ಲಿ ಇದ್ದಷ್ಟು ಮಾನಸಿಕ ಮತ್ತು ದೈಹಿಕವಾಗಿ ದೃಢವಾಗಿರಲು ಸಾಧ್ಯವಿಲ್ಲ. ಆದ್ದರಿಂದ, ಪ್ರತಿಯೊಬ್ಬರೂ ಮುಂಚಿತವಾಗಿ ನಿವೃತ್ತಿಯ ಯೋಜನೆಗಳತ್ತ ಗಮನ ಹರಿಸುತ್ತಾರೆ. ವೃದ್ದಾಪ್ಯಕ್ಕಾಗಿ ಈಗಲೇ ಸರಿಯಾಗಿ ಯೋಜನೆ ಹಾಕಿಕೊಳ್ಳದೆ ಹೋದರೆ, ದೈನಂದಿನ ಅಥವಾ ಇತರ ಖರ್ಚುಗಳನ್ನು ನಿಭಾಯಿಸುವುದು ಸವಾಲಾಗಿ ಪರಿಣಮಿಸಿ ಬಿಡುತ್ತದೆ. ಇದಕ್ಕಾಗಿ ಪಿಂಚಣಿ ಯೋಜನೆಗಳು ಸೇರಿದಂತೆ ವಿವಿಧ ಆಯ್ಕೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ನಿವೃತ್ತಿ ಪ್ರಯೋಜನಗಳಿಗಾಗಿ ಅತ್ಯಂತ ಜನಪ್ರಿಯ ಸರ್ಕಾರಿ ಬೆಂಬಲಿತ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದೆ.  ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ನಿರ್ವಹಿಸುತ್ತದೆ. ಇದು ಪಿಂಚಣಿ ಸೌಲಭ್ಯದ ಹೊರತಾಗಿ ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತದೆ.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಸರ್ಕಾರದ ಭರ್ಜರಿ ಗಿಫ್ಟ್ ! ವೇತನ ಹೆಚ್ಚಳ, ಡಿಎ ಅರಿಯರ್ಸ್ ಸೇರಿ ಮೂರು ಗುಡ್ ನ್ಯೂಸ್

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ಎಂದರೇನು? : 
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ಎಲ್ಲಾ ಭಾರತೀಯ ನಾಗರಿಕರು ಸೇರಬಹುದಾದ ಸ್ವಯಂಪ್ರೇರಿತ ಉಳಿತಾಯ ಯೋಜನೆಯಾಗಿದೆ. 2004 ರಲ್ಲಿ ಪರಿಚಯಿಸಲಾದ ಈ ಯೋಜನೆಯು ಆರಂಭದಲ್ಲಿ ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿತ್ತು.  ನಂತರ ಇದನ್ನು 18 ರಿಂದ 70 ವರ್ಷದೊಳಗಿನ ಎಲ್ಲಾ ನಾಗರಿಕರಿಗೆ ವಿಸ್ತರಿಸಲಾಯಿತು. NPS ಹೂಡಿಕೆಗಳು ಪ್ರಸ್ತುತ 9 ಪ್ರತಿಶತದಿಂದ 12 ಪ್ರತಿಶತದಷ್ಟು ವಾರ್ಷಿಕ ಆದಾಯವನ್ನು ನೀಡುತ್ತವೆ. ಹೆಚ್ಚುವರಿಯಾಗಿ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80 CCD(1) ಮತ್ತು 80 CCD 1(B) ಅಡಿಯಲ್ಲಿ, ವರ್ಷಕ್ಕೆ 2 ಲಕ್ಷದವರೆಗಿನ ತೆರಿಗೆ ಪ್ರಯೋಜನಗಳನ್ನು  ನೀಡುತ್ತದೆ. 

NPS ಹೂಡಿಕೆಗಳ ಮೂಲಕ  50,000 ರೂ. ಮಾಸಿಕ ಪಿಂಚಣಿ ಪಡೆಯುವುದು ಹೇಗೆ? : 
ತಿಂಗಳಿಗೆ  50,000 ರೂಪಾಯಿ ಮಾಸಿಕ ಪಿಂಚಣಿ ಪಡೆಯಬೇಕಾದರೆ ಹೂಡಿಕೆ ಹೇಗಿರಬೇಕು ಎನ್ನುವುದನ್ನು ಇಲ್ಲಿ ಮೊದಲು ಅರ್ಥ ಮಾಡಿಕೊಳ್ಳಬೇಕು. ಒಬ್ಬ ವ್ಯಕ್ತಿಯು ತನ್ನ 40 ನೇ ವಯಸ್ಸಿನಲ್ಲಿ NPS ಖಾತೆಯಲ್ಲಿ ಹೂಡಿಕೆ ಆರಂಭಿಸಬೇಕು. ಆ ವ್ಯಕ್ತಿ 60 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುವುದಾದರೆ,  ಒಟ್ಟು 20 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ ನಿವೃತ್ತಿಯ ನಂತರ ಮಾಸಿಕ 50,000 ರೂಪಾಯಿ ಪಿಂಚಣಿ ಪಡೆಯಲು, 20 ವರ್ಷಗಳವರೆಗೆ ತಿಂಗಳಿಗೆ 33,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ಇದನ್ನೂ ಓದಿ : ಪಾತಾಳಕ್ಕೆ ಇಳಿಯುತ್ತಿದೆ ಚಿನ್ನದ ಬೆಲೆ ! ಇನ್ನು ಭಾರ ಅಲ್ಲ ಬಂಗಾರ

ಹೀಗೆ ಹೂಡಿಕೆ ಮಾಡುತ್ತಾ ಬಂದರೆ 20 ವರ್ಷಗಳಲ್ಲಿ ಒಟ್ಟು ಮಾಡುವ  ಹೂಡಿಕೆ 79.2 ಲಕ್ಷಗಳಾಗಿರುತ್ತದೆ. ಅಲ್ಲದೆ, ಹೂಡಿಕೆಯ ಮೇಲೆ ಶೇಕಡಾ 10 ರಂತೆ ವಾರ್ಷಿಕ  ರಿಟರ್ನ್ ಕೂಡಾ ಸಿಗುತ್ತದೆ. ಅಂದರೆ 1.73 ಕೋಟಿ. 20 ವರ್ಷಗಳ ನಂತರ ನಿಮ್ಮ ಬಳಿ 2.52 ಕೋಟಿ ಕಾರ್ಪಸ್ ಫಂಡ್  ಉಳಿಯುತ್ತದೆ. 

ಎನ್‌ಪಿಎಸ್ ಹೂಡಿಕೆಗಳು ಪರಿಪಕ್ವವಾದಂತೆ ಪಿಂಚಣಿ ನಿಧಿಯ 60 ಪ್ರತಿಶತ ಅಂದರೆ 1.51 ಕೋಟಿ ರೂ.ಯನ್ನು ತೆಗೆದುಕೊಂಡರೆ,  ಪಿಂಚಣಿ ಮೊತ್ತದ ಉಳಿದ 40 ಪ್ರತಿಶತ  ಅಂದರೆ 1.01 ಕೋಟಿಯನ್ನು ವರ್ಷಾಶನ ಆಯ್ಕೆಗೆ ಬಳಸಬಹುದು.  ಅಂದರೆ ನಿವೃತ್ತಿಯ ವರ್ಷಗಳಲ್ಲಿ ತಿಂಗಳಿಗೆ 50,536 ರೂಪಾಯಿಗಳನ್ನು ಪಿಂಚಣಿಯಾಗಿ ಪಡೆಯಬಹುದು. 

ಇದನ್ನೂ ಓದಿ : Stock Market: ಮಾರುಕಟ್ಟೆ ಕುಸಿತದ ನಡುವೆಯೂ ರಾಕೆಟ್‍ನಂತೆ ಏರಿಕೆ ಕಂಡ ಈ ಷೇರು, ಕಾರಣವೇನು ಗೊತ್ತಾ?

ಇನ್ನು ಯಾರಾದರೂ ಚಿಕ್ಕ ವಯಸ್ಸಿನಲ್ಲೇ NPS ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಸಣ್ಣ ಮೊತ್ತದ ಮೂಲಕ ಹೆಚ್ಚಿನ ಕಾರ್ಪಸ್ ಅನ್ನು  ಸೇರಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News