ಚಿನ್ನದ ಬೆಲೆಯಲ್ಲಿ ಮತ್ತೆ ಭರ್ಜರಿ ಇಳಿಕೆ! ಸಾರ್ವಕಾಲಿಕ ಕುಸಿತದ ಬಳಿಕ ಇವತ್ತೆಷ್ಟಿದೆ ಗೊತ್ತಾ 10 ಗ್ರಾಂ ಬಂಗಾರದ ದರ?

Gold Price Today: ಇಂದು 1 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,365 ರೂ ಆಗಿದ್ದರೆ, ಕಳೆದ ದಿನ ಇದೇ ಚಿನ್ನಕ್ಕೆ 5,390 ರೂ ಇತ್ತು. ಈ ಮೂಲಕ ಕಳೆದ ದಿನಕ್ಕೆ ಹೋಲಿಸಿದರೆ ಇಂದು 25 ರೂ. ಇಳಿಕೆಯಾಗಿದೆ.

Written by - Bhavishya Shetty | Last Updated : Sep 30, 2023, 09:34 AM IST
    • ಕಳೆದ ಒಂದು ವಾರದಿಂದ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ
    • ಸದ್ಯ ತಿಂಗಳಾಂತ್ಯಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ
    • ಇಂದು 1 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,365 ರೂ ಆಗಿದೆ
ಚಿನ್ನದ ಬೆಲೆಯಲ್ಲಿ ಮತ್ತೆ ಭರ್ಜರಿ ಇಳಿಕೆ! ಸಾರ್ವಕಾಲಿಕ ಕುಸಿತದ ಬಳಿಕ ಇವತ್ತೆಷ್ಟಿದೆ ಗೊತ್ತಾ 10 ಗ್ರಾಂ ಬಂಗಾರದ ದರ? title=
10 gram gold price

Gold Price Today: ಕಳೆದ ಒಂದು ವಾರದಿಂದ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ, ಇಂದೂ ಕೂಡ ಭರ್ಜರಿ ಕುಸಿತ ಕಂಡಿದೆ. ಸದ್ಯ ತಿಂಗಳಾಂತ್ಯಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಅಂದಹಾಗೆ ಇಂದು ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡಿದೆ. 1 ಗ್ರಾಂ ಚಿನ್ನದ ದರ 5,365 ರೂ ಆಗಿದೆ.

ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ ಪಾಕ್ ತಂಡ ಸೇರಿದ ಭಾರತದ ಸ್ಟಾರ್ ಬೌಲರ್! ಗಂಟೆಗೆ 130 ಕಿ,ಮೀ ವೇಗದ ಬೌಲಿಂಗ್

ಇಂದು 1 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,365 ರೂ ಆಗಿದ್ದರೆ, ಕಳೆದ ದಿನ ಇದೇ ಚಿನ್ನಕ್ಕೆ 5,390 ರೂ ಇತ್ತು. ಈ ಮೂಲಕ ಕಳೆದ ದಿನಕ್ಕೆ ಹೋಲಿಸಿದರೆ ಇಂದು 25 ರೂ. ಇಳಿಕೆಯಾಗಿದೆ.

ಇನ್ನೊಂದೆಡೆ 24 ಕ್ಯಾರೆಟ್‌ ಚಿನ್ನದ ದರವನ್ನು ನೋಡುವುದಾದರೆ ಇಂದು ಒಂದು ಗ್ರಾಂ ಚಿನ್ನದ ದರ 5,853 ರೂ. ಇದೆ. ಕಳೆದ ದಿನ 5,880 ರೂ.ಗೆ ಇತ್ತು, ಈ ಮೂಲಕ ನಿನ್ನೆಗಿಂತ ಇಂದು 27 ರೂ. ಇಳಿಕೆಯಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ಚಿನ್ನದ ದರ (10 ಗ್ರಾಂ)

  • ಚೆನ್ನೈ 53,900 ರೂ.
  • ಮುಂಬೈ 53,650 ರೂ.
  • ದೆಹಲಿ 53,800 ರೂ.
  • ಕೊಲ್ಕತಾ 53,650 ರೂ.
  • ಹೈದರಾಬಾದ್‌ 53,650 ರೂ.
  • ಕೇರಳ 53,650 ರೂ.
  • ಪುಣೆ 53,650 ರೂ.
  • ಅಹಮದಾಬಾದ್‌ 53,700 ರೂ.
  • ಜೈಪುರ 53,800 ರೂ

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು 58,530 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಇದೇ ದರ ಇದೆ.

ಇಂದು ಬೆಳ್ಳಿ ದರ ಹೇಗಿದೆ?

ಬಂಗಾರದ ಬೆಲೆಯ ಜೊತೆ ಬೆಳ್ಳಿ ಬೆಲೆಯೂ ಕುಸಿತ ಕಂಡಿದ್ದು, ಇಂದು ಒಂದು ಗ್ರಾಂ ಬೆಳ್ಳಿಗೆ 72.50 ರೂ. ಇದೆ. ಕಳೆದ ದಿನ 73 ರೂ. ಇತ್ತು. ಅಂದರೆ ಇಂದು 0.50 ಪೈಸೆ ಕಡಿಮೆಯಾಗಿದೆ.

ಇದನ್ನೂ ಓದಿ: 1 ವರ್ಷದ ಬಳಿಕ ಈ ರಾಶಿಗೆ ಕೋಟ್ಯಾಧೀಶ್ವರ ಯೋಗ: ಕೈ ತುಂಬಾ ದುಡ್ಡು, ಹಗಲಿರುಳೆನ್ನದೆ ಹರಸುವಳು ತಾಯಿ ವಿಜಯಲಕ್ಷ್ಮೀ

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾದುದಲ್ಲ. ಬೆಳಗ್ಗೆ 9ರ ಸಮಯದಲ್ಲಿ ಇದ್ದ ಬೆಲೆಯನ್ನು ನೀಡಲಾಗಿದೆ. ಜೊತೆಗೆ ಈ ದರದ ಮೇಲೆ ಜಿಎಸ್​’ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News