ಹಿರಿಯ ನಾಗರೀಕರಿಗಾಗಿ ಸರ್ಕಾರದ ಅದ್ಭುತ ಯೋಜನೆ ! ವೃದ್ದಾಪ್ಯದಲ್ಲಿ ಇರುವುದಿಲ್ಲ ಹಣದ ಚಿಂತೆ

ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಪಿಂಚಣಿ ಮಾತ್ರವಲ್ಲದೆ ಪ್ರಯಾಣ, ಆರೋಗ್ಯ ರಕ್ಷಣೆ ಮತ್ತು ಇತರ ನಿವೃತ್ತಿ ಪ್ರಯೋಜನಗಳನ್ನು ಒದಗಿಸುತ್ತದೆ. 

Written by - Ranjitha R K | Last Updated : Sep 6, 2023, 09:07 AM IST
  • ಮಾರುಕಟ್ಟೆಯಲ್ಲಿ ಅನೇಕ ಪಿಂಚಣಿ ಯೋಜನೆಗಳಿವೆ.
  • ಕೆಲವು ಉತ್ತಮ ಯೋಜನೆಗಳು ಸರ್ಕಾರದ ವತಿಯಿಂದ ನಡೆಸಲ್ಪಡುತ್ತಿವೆ.
  • ಇದರಿಂದ ವೃದ್ದಾಪ್ಯದಲ್ಲಿ ಆಗುವುದು ಲಾಭ
ಹಿರಿಯ ನಾಗರೀಕರಿಗಾಗಿ ಸರ್ಕಾರದ ಅದ್ಭುತ ಯೋಜನೆ ! ವೃದ್ದಾಪ್ಯದಲ್ಲಿ ಇರುವುದಿಲ್ಲ ಹಣದ ಚಿಂತೆ  title=

ಬೆಂಗಳೂರು : ನಿವೃತ್ತಿಯ ನಂತರ  ಆರ್ಥಿಕವಾಗಿ ಸದೃಢ ಬದುಕು ಸಾಗಿಸುವಂತೆ ಮಾಡಲು ಮತ್ತು ನಿವೃತ್ತಿಯ ನಂತರವೂ ಆದಾಯಕ್ಕೆ ತಡೆಯಾಗದಂತೆ ನೋಡಿಕೊಳ್ಳಲು ಪಾವತಿಸುವ ಮೊತ್ತವೇ ಪಿಂಚಣಿ. ಇದನ್ನು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಒದಗಿಸುತ್ತವೆ. ಆದರೆ, ಸರ್ಕಾರ ನಾನಾ ರೀತಿಯ ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದಿದೆ. 

ಮಾರುಕಟ್ಟೆಯಲ್ಲಿ ಅನೇಕ ಪಿಂಚಣಿ ಯೋಜನೆಗಳಿವೆ. ಆದರೆ ಈ ಪೈಕಿ ಕೆಲವು ಉತ್ತಮ ಯೋಜನೆಗಳು ಸರ್ಕಾರದ ವತಿಯಿಂದ ನಡೆಸಲ್ಪಡುತ್ತಿವೆ.  ಅದರಲ್ಲಿ ಹೂಡಿಕೆ ಮಾಡುವುದರಿಂದ ದೊಡ್ಡ ಮಟ್ಟದ ಲಾಭವಾಗುವುದು.  ರಾಷ್ಟ್ರೀಯ ಪಿಂಚಣಿ ಯೋಜನೆಯೊಂದಿಗೆ , ನಾಗರಿಕರ ಭವಿಷ್ಯವನ್ನು ಸುರಕ್ಷಿತಗೊಳಿಸಲು ಇತರ ಯೋಜನೆಗಳು ಸಹ ಬಹಳ ಜನಪ್ರಿಯವಾಗಿವೆ. ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಪಿಂಚಣಿ ಮಾತ್ರವಲ್ಲದೆ ಪ್ರಯಾಣ, ಆರೋಗ್ಯ ರಕ್ಷಣೆ ಮತ್ತು ಇತರ ನಿವೃತ್ತಿ ಪ್ರಯೋಜನಗಳನ್ನು ಒದಗಿಸುತ್ತದೆ. 

ಇದನ್ನೂ ಓದಿ : Multibagger Stocks: ಹೂಡಿಕೆದಾರರಿಗೆ ಬಂಪರ್ ರಿಟರ್ನ್ ನೀಡಿದ ಷೇರುಗಳು

ಅಟಲ್ ಪಿಂಚಣಿ ಯೋಜನೆ : 
 ಖಾಸಗಿ ವಲಯದಲ್ಲಿ ಕೆಲಸ ಮಾಡುವ ನೌಕರರು, ಬಡವರನ್ನು   ಪರಿಗಣಿಸಿ ಅಟಲ್ ಪಿಂಚಣಿ ಯೋಜನೆ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಮಾಸಿಕ ಪಿಂಚಣಿ ನೀಡಲಾಗುತ್ತದೆ. 18 ರಿಂದ 40 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿ ಪ್ರತಿ ತಿಂಗಳು 1000 ರೂಪಾಯಿಯಿಂದ 5000 ರೂ.ವರೆಗೆ  ಪಿಂಚಣಿ ಪಡೆಯಬಹುದು. ತೆರಿಗೆ ಪಾವತಿದಾರರು ಈ ಯೋಜನೆಯಲ್ಲಿ ಭಾಗವಹಿಸುವಂತಿಲ್ಲ. 

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ : 
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು  (IGNOAPS)ಕೇಂದ್ರ ಸರ್ಕಾರವು ವೃದ್ಧರಿಗಾಗಿ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ವೃದ್ಧಾಪ್ಯದಲ್ಲಿ ಮಾಸಿಕ ಪಿಂಚಣಿ ಪಡೆಯಬಹುದು. ಇದರ ಪ್ರಕಾರ, 60 ವರ್ಷದಿಂದ 79 ವರ್ಷದೊಳಗಿನ ಪಿಪಿಎಲ್ ವರ್ಗಕ್ಕೆ ಸೇರಿದ ಹಿರಿಯ ನಾಗರಿಕರಿಗೆ ತಿಂಗಳಿಗೆ 300 ರೂ. ಪಿಂಚಣಿ ನೀಡಲಾಗುತ್ತದೆ. 80 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವರಿಗೆ 500 ರೂ. ಪಿಂಚಣಿ ನೀಡಲಾಗುತ್ತದೆ.

ಇದನ್ನೂ ಓದಿ : Multibagger Return: ವರ್ಷಕ್ಕೆ 200% ರಿಟರ್ನ್ ನೀಡಿದ ರೈಲ್ವೆ ಷೇರು!

ಎಲ್ಐಸಿ ಪಿಂಚಣಿ ಯೋಜನೆ :
ವರ್ಷಾಶನ ಖಾತರಿ ಪಿಂಚಣಿ ಯೋಜನೆಯನ್ನು ಎಲ್ಐಸಿ ನಡೆಸುತ್ತದೆ. ಇದರಲ್ಲಿ ಒಂದು ದೊಡ್ಡ ಮೊತ್ತವನ್ನು ಪಾವತಿಸಿದ ನಂತರ ಖಾತರಿ ಪಿಂಚಣಿಯನ್ನು ಪಡೆಯಬಹುದು. ಇದರಲ್ಲಿ ಹೂಡಿಕೆ ಮಾಡಿದ 15 ವರ್ಷಗಳ ನಂತರ ಮೊತ್ತವನ್ನು ಹಿಂಪಡೆಯಬಹುದು.  

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ : 
ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ನಡೆಸುತ್ತದೆ. ಇದರಲ್ಲಿ ಮೊದಲು ನಾವು ಹೂಡಿಕೆ ಮಾಡಬೇಕಾಗುತ್ತದೆ. ಅದರಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ನಿಯಂತ್ರಿತ ಮಾರುಕಟ್ಟೆ ಆಧಾರಿತ ಮತ್ತು ಸುರಕ್ಷಿತ ಆದಾಯವನ್ನು ನೀಡಲಾಗುತ್ತದೆ. ಇದನ್ನು PFRDA ಯಂತೆಯೇ ನಿರ್ವಹಿಸಲಾಗುತ್ತದೆ. ಯಾವುದೇ ಭಾರತೀಯ ಪ್ರಜೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅದರಲ್ಲಿ ಹೂಡಿಕೆ ಮಾಡುವ ಮೂಲಕ ವೃದ್ಧಾಪ್ಯವನ್ನು ಸುರಕ್ಷಿತವಾಗಿ ಇಡಬಹುದು. ಇದು ನಿಮ್ಮ ವೃದ್ಧಾಪ್ಯದಲ್ಲಿ ಆದಾಯದ ಪ್ರಮುಖ ಮೂಲವಾಗಲೂ ಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News