ಬಹಳ ದಿನಗಳ ಬಳಿಕ ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ ! ಬಂಗಾರ ಖರೀದಿಗೆ ಸರಿಯಾದ ಸಮಯ

Gold Price today : ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲೂ ಕಂಡು ಬರುತ್ತಿದೆ.   

Written by - Ranjitha R K | Last Updated : Aug 9, 2023, 08:41 AM IST
  • ಅಗ್ಗವಾಯಿತು ಚಿನ್ನ ಮತ್ತು ಬೆಳ್ಳಿ
  • ಆಭರಣ ಪ್ರಿಯರಿಗೆ ಸಿಹಿ ಸುದ್ದಿ
  • ಚಿನ್ನ ಖರೀದಿಸಲು ಬೆಸ್ಟ್ ಟೈಮ್
ಬಹಳ ದಿನಗಳ ಬಳಿಕ ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ ! ಬಂಗಾರ ಖರೀದಿಗೆ ಸರಿಯಾದ ಸಮಯ  title=

ಬೆಂಗಳೂರು : ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ನಿರಂತರ ಇಳಿಕೆ ಕಂಡುಬರುತ್ತಿದೆ. ವಾರದ ಎರಡನೇ ವಹಿವಾಟಿನ ದಿನವೂ ಚಿನ್ನ ಅಗ್ಗವಾಗಿದೆ. . ಇದಲ್ಲದೇ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲೂ ಕಂಡು ಬರುತ್ತಿದೆ. 

ಅಗ್ಗವಾಯಿತು ಚಿನ್ನ ಮತ್ತು ಬೆಳ್ಳಿ  :
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಶೇ.0.02 ಇಳಿಕೆಯೊಂದಿಗೆ  ಪ್ರತಿ 10 ಗ್ರಾಂಗೆ 59409 ರೂ. ಆಗಿದೆ. ಇದಲ್ಲದೇ ಬೆಳ್ಳಿಯ ಬೆಲೆಯಲ್ಲಿ ಶೇ.0.09ರಷ್ಟು ಇಳಿಕೆಯಾಗಿದ್ದು, ಪ್ರತಿ ಕೆಜಿಗೆ 71201 ರೂ. ಆಗಿದೆ. 

ಇದನ್ನೂ ಓದಿ : ಹಿರಿಯ ನಾಗರೀಕರ ಸ್ಥಿರ ಠೇವಣಿ ಯೋಜನೆಯ ಮೇಲೆ ಈ ಬ್ಯಾಂಕ್ ನೀಡುತ್ತಿದೆ ಶೇ.9.1 ರಷ್ಟು ಬಡ್ಡಿದರ!

ಫೆಡ್ ರಿಸರ್ವ್‌ನ ಹೇಳಿಕೆಯ ಪರಿಣಾಮ : 
ಫೆಡ್ ರಿಸರ್ವ್‌ನ ಗವರ್ನರ್ ಹೇಳಿಕೆಯ ನಂತರ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿಯುತ್ತಲೇ ಇದ್ದವು. ಫೆಡ್ ರಿಸರ್ವ್ ಬಡ್ಡಿದರಗಳಲ್ಲಿ ಹೆಚ್ಚಳವನ್ನು ಸೂಚಿಸಿದೆ. ಈ ಕಾರಣದಿಂದಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಅಗ್ಗವಾಗುತ್ತಿದೆ. ಹಣದುಬ್ಬರವನ್ನು ನಿಗ್ರಹಿಸುವ ಸಲುವಾಗಿ ಬಡ್ಡಿದರಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಎಂದು ಫೆಡ್ ರಿಸರ್ವ್‌ ಹೇಳಿತ್ತು. 

ಜಾಗತಿಕ ಮಾರುಕಟ್ಟೆಯಲ್ಲೂ ಬೆಲೆ ಇಳಿಕೆ : 
ಜಾಗತಿಕ ಮಾರುಕಟ್ಟೆಯ ಬಗ್ಗೆ ಮಾತನಾಡುವುದಾದರೆ, ಇಲ್ಲಿನ ಬುಲಿಯನ್ ಬೆಲೆಯಲ್ಲಿ ಮಂದಗತಿ ಕಂಡು ಬರುತ್ತಿದೆ. Comax ನಲ್ಲಿ ಚಿನ್ನದ ಬೆಲೆಯು ಕುಸಿದಿದ್ದು, 1970 ಡಾಲರ್ ಗಿಂತ ಕಡಿಮೆಯಾಗಿದೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ದಾಖಲಾಗಿದೆ.

ಇದನ್ನೂ ಓದಿ : ಕೈ ತುಂಬಾ ಹಣ ನೀಡುವ ಕಪ್ಪು ಅರಿಶಿನ

 ಇಲ್ಲಿ ಇಂದಿನ ದರಗಳನ್ನು ಪರಿಶೀಲಿಸಿ: 
ಈಗ ಮನೆಯಲ್ಲಿಯೇ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ,  8955664433 ಗೆ ಮಿಸ್ಡ್ ಕಾಲ್ ನೀಡುವ ಮನಿಮ್ಮ ನಗರದಲ್ಲಿ ಇಂದು ಚಿನ್ನದ ದರ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಯಾವ ಸಂಖ್ಯೆಯಿಂದ ಮಿಸ್ಡ್ ಕಾಲ್ ಕೊಡುತ್ತಿರೋ ಅದೇ ಸಂಖ್ಯೆಗೆ ಮೆಸೇಜ್ ಕಳುಹಿಸಲಾಗುವುದು. 

ಆ್ಯಪ್‌ ಮೂಲಕ ಚಿನ್ನದ ಶುದ್ಧತೆ ಪರಿಶೀಲಿಸಿ :
ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಸರ್ಕಾರಿ ಅಪ್ಲಿಕೇಶನ್ ಅನ್ನು ಬಳಸಬಹುದು. 'ಬಿಐಎಸ್ ಕೇರ್ ಆ್ಯಪ್' ಮೂಲಕ ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು. ಇದಲ್ಲದೇ ಈ ಆಪ್ ಮೂಲಕ ದೂರು ಕೂಡಾ ನೀಡಬಹುದು.

ಇದನ್ನೂ ಓದಿ : Harley Davidson X440: ಹಾರ್ಲೆ ಡೇವಿಡ್‌ಸನ್‌ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News