ಈ ಮೂರು ರೀತಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಸಿಗಲಿದೆ ಭಾರೀ ಲಾಭ..! ನಿಮಗೆ ಸರಿ ಹೊಂದುವ ಆಯ್ಕೆ ಯಾವುದು ತಿಳಿಯಿರಿ

ಕಮಾಡಿಟಿ  ವಿಶೇಷ ತಜ್ಞರ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನದ ಬೆಲೆ 55 ಸಾವಿರದಿಂದ 60 ಸಾವಿರದವರೆಗೆ ತಲುಪಬಹುದು. 45,000 ರಿಂದ 47,000  ರೂಪಾಯಿಗಳ ಮಟ್ಟವು ಖರೀದಿಗೆ ಬಹಳಷ್ಟು ಒಳ್ಳೆಯದು.

Written by - Ranjitha R K | Last Updated : Sep 16, 2021, 01:31 PM IST
  • ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನದ ಬೆಲೆಗಳು ಹೆಚ್ಚಾಗುತ್ತವೆ
  • ಚಿನ್ನದಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ
  • ಈ ರೀತಿಯಲ್ಲಿ ನೀವು ಚಿನ್ನವನ್ನು ಖರೀದಿಸಬಹುದು
ಈ ಮೂರು ರೀತಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಸಿಗಲಿದೆ ಭಾರೀ ಲಾಭ..! ನಿಮಗೆ ಸರಿ ಹೊಂದುವ ಆಯ್ಕೆ  ಯಾವುದು ತಿಳಿಯಿರಿ  title=
ಚಿನ್ನದಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ (file photo)

ನವದೆಹಲಿ : ಚಿನ್ನದ ಮೇಲೆ ಹೂಡಿಕೆ ಮಾಡುವುದು ಭವಿಷ್ಯದ ದೃಷ್ಟಿಯಿಂದ ಸುರಕ್ಷಿತವಾಗಿರುತ್ತದೆ. ನೀವು ಕೂಡ ಚಿನ್ನದ ಮೇಲೆ ಹೂಡಿಕೆ (Gold investment) ಮಾಡಲು ಯೋಜಿಸುತ್ತಿದ್ದರೆ, ಈ ಸಮಯವು ಉತ್ತಮವಾಗಿರುತ್ತದೆ. ಪ್ರಸ್ತುತ, ಚಿನ್ನದ ಬೆಲೆಗಳು ನಾಲ್ಕು ತಿಂಗಳ ಕನಿಷ್ಠ ಮಟ್ಟದಲ್ಲಿದ್ದು, ದೀರ್ಘಾವಧಿಗೆ ನೋಡಿದರೂ ಚಿನ್ನದ ಧನಾತ್ಮಕ ಪ್ರವೃತ್ತಿ ಕಂಡು ಬರುತ್ತದೆ.  ಮಾರುಕಟ್ಟೆ ತಜ್ಞರು ಕೂಡ ಚಿನ್ನದಲ್ಲಿ ಹೂಡಿಕೆ ಮಾಡಲು  (Best way to gold investment) ಸಲಹೆ ನೀಡುತ್ತಾರೆ.  

ಚಿನ್ನದ ಮೇಲೆ ಏಕೆ ಹೂಡಿಕೆ ಮಾಡಬೇಕು ? :
ಸಾಂಪ್ರದಾಯಿಕ ಹೂಡಿಕೆದಾರರು ಬಯಸುವ ಎಲ್ಲಾ ಗುಣಗಳನ್ನು ಚಿನ್ನ ಹೊಂದಿದೆ. ಚಿನ್ನದ ಮೇಲೆ ಮಾಡುವ ಹೂಡಿಕೆ (Gold investment) ಯಾವಾಗಲೂ ಹಣದುಬ್ಬರವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ಭವಿಷ್ಯದಲ್ಲಿ ತುರ್ತು ಪರಿಸ್ಥಿತಿ ಇದ್ದರೆ ಮತ್ತು ಹಣದ ಅಗತ್ಯವಿದ್ದರರೂ, ಇದು ಉಪಯೋಗಕ್ಕೆ ಬರುತ್ತದೆ. ಏಕೆಂದರೆ ಅವಶ್ಯಕತೆಯಿದ್ದಾಗ, ಅದನ್ನು ಮಾರುಕಟ್ಟೆಯಲ್ಲಿ ತ್ವರಿತವಾಗಿ ಮಾರಾಟ ಮಾಡಬಹುದು.

ಇದನ್ನೂ ಓದಿ : PM Jan dhan Account: ಖಾತೆಯಲ್ಲಿ ಹಣ ಇಲ್ಲದೇ ಇದ್ದರೂ 10,000 ರೂ.ಗಳನ್ನು ಹಿಂಪಡೆಯಬಹುದು, ತಕ್ಷಣವೇ ಈ ಖಾತೆಯನ್ನು ತೆರೆಯಿರಿ

ಕಮಾಡಿಟಿ  ವಿಶೇಷ ತಜ್ಞರ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನದ ಬೆಲೆ 55 ಸಾವಿರದಿಂದ 60 ಸಾವಿರದವರೆಗೆ ತಲುಪಬಹುದು. 45,000 ರಿಂದ 47,000  ರೂಪಾಯಿಗಳ ಮಟ್ಟವು ಖರೀದಿಗೆ ಬಹಳಷ್ಟು ಒಳ್ಳೆಯದು. ಇಂತಹ ಪರಿಸ್ಥಿತಿಯಲ್ಲಿ, ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ನಿಮಗೆ ಲಾಭವಾಗಲಿದೆ. ಚಿನ್ನವನ್ನು ಖರೀದಿಸಲು ಅಥವಾ ಹೂಡಿಕೆ (investment) ಮಾಡಲು 3 ಉತ್ತಮ ಆಯ್ಕೆಗಳು ಯಾವುವು ನೋಡೋಣ.. 

1. ಭೌತಿಕ ಚಿನ್ನವನ್ನು ಖರೀದಿಸುವುದು (Physical Gold) :
ಯಾವುದೇ ಆಭರಣ ಮಳಿಗೆಗೆ ಭೇಟಿ ನೀಡುವ ಮೂಲಕ ಗ್ರಾಹಕರು ಭೌತಿಕ ಚಿನ್ನವನ್ನು  (Physical Gold) ಖರೀದಿಸಬಹುದು. ಚಿನ್ನದ ಶುದ್ಧತೆಗಾಗಿ, ಗ್ರಾಹಕರು ಸರ್ಕಾರವು ನಿಗದಿಪಡಿಸಿದ ಮಾನದಂಡಗಳನ್ನು ನೋಡಿಕೊಳ್ಳಬೇಕು. ಭೌತಿಕ ಚಿನ್ನವನ್ನು ಕೊಳ್ಳುವ ಒಂದು ಅನಾನುಕೂಲವೆಂದರೆ ಅದನ್ನು ಕದಿಯುವ ಭಯ. ಅದೇ ಸಮಯದಲ್ಲಿ, ಅದನ್ನು ಬ್ಯಾಂಕ್ ಲಾಕರ್‌ನಲ್ಲಿ (Bank locker) ಇರಿಸಿದರೆ, ಅದಕ್ಕೂ ಪಾವತಿಸಬೇಕಾಗುತ್ತದೆ. ದೇಶದ ಹೆಚ್ಚಿನ ಜನರು ಭೌತಿಕ ಚಿನ್ನವನ್ನು ಮಾತ್ರ ಖರೀದಿಸಲು ಬಯಸುತ್ತಾರೆ.

2. ಗೋಲ್ಡ್ ETFಗಳಲ್ಲಿ ಹೂಡಿಕೆ :
ನೀವು ಗೋಲ್ಡ್ ಇಟಿಎಫ್‌ಗಳಲ್ಲಿ (Gold ETF) ಹೂಡಿಕೆ ಮಾಡಬಹುದು. ಗೋಲ್ಡ್ ಇಟಿಎಫ್ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಹಣಕಾಸು ಗುರಿಗಳನ್ನು ಸಾಧಿಸಲು ಬಳಸಬಹುದಾದ ಹೂಡಿಕೆಯಾಗಿದೆ. ಗೋಲ್ಡ್ ಇಟಿಎಫ್‌ ಮೇಲೆ ಹೂಡಿಕೆ ಮಾಡಿದರೆ ಯಾವುದೇ ಅಪಾಯ ಇರುವುದಿಲ್ಲಾ ಅಥವಾ ಅದನ್ನು ಸ್ಟೋರೇಜ್ ಮಾಡುವ ಚಿಂತೆಯೂ ಇರುವುದಿಲ್ಲ.  

ಇದನ್ನೂ ಓದಿ : EPFO ಚಂದಾದಾರರಿಗೆ ಮಹತ್ವದ ಸುದ್ದಿ! ಉದ್ಯೋಗಿಗಳು ತಮ್ಮ ಇಕ್ವಿಟಿ ಹೂಡಿಕೆ ನಿರ್ಧರಿಸಬಹುದೇ? ಇಲ್ಲಿದೆ ವಿವರ

3. ಸಾವರಿನ್ ಗೋಲ್ಡ್ ಬಾಂಡ್‌ : 
ಸಾವರಿನ್ ಗೋಲ್ಡ್ ಬಾಂಡ್ (SGB) ಅನ್ನು ಸರ್ಕಾರದಿಂದ ನೀಡಲಾಗುತ್ತದೆ. ಹಾಗಾಗಿ, ಸಾವರಿನ್ ಗೋಲ್ಡ್ ಬಾಂಡ್ (sovereign gold bond ) ಸುರಕ್ಷಿತವಾಗಿರುತ್ತದೆ. ಸಾವರಿನ್ ಗೋಲ್ಡ್ ಬಾಂಡ್‌ನ ಅತಿದೊಡ್ಡ ಪ್ರಯೋಜನವೆಂದರೆ, ಆರಂಭಿಕ ಹೂಡಿಕೆಯ ಮೊತ್ತದ ಮೇಲೆ ವಾರ್ಷಿಕ 2.50 ಪ್ರತಿಶತದಷ್ಟು ಸ್ಥಿರ ಬಡ್ಡಿದರದೊಂದಿಗೆ ಬರುತ್ತದೆ. ಈ ಬಡ್ಡಿಯನ್ನು ಅರ್ಧ ವಾರ್ಷಿಕ ಆಧಾರದ ಮೇಲೆ ಹೂಡಿಕೆದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. 

ಇನ್ನೊಂದು ಆಯ್ಕೆ ಎಂದರೆ 
ಡಿಜಿಟಲ್ ಗೋಲ್ಡ್ :  ಆನ್‌ಲೈನ್ ಪ್ಲಾಟ್‌ಫಾರ್ಮ್ (Online platform) ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಲು ಇರುವ ಮತ್ತೊಂದು ಮಾರ್ಗವಾಗಿದೆ. ಇದನ್ನು ಭೌತಿಕ ಚಿನ್ನವಾಗಿ ರಿಡೀಮ್ ಮಾಡಬಹುದು ಅಥವಾ ಮಾರಾಟಗಾರರಿಗೆ ಮರುಮಾರಾಟ ಮಾಡಬಹುದು.

ಗೋಲ್ಡ್ ಮ್ಯೂಚುವಲ್ ಫಂಡ್ : ಚಿನ್ನದಲ್ಲಿ ಹೂಡಿಕೆ ಮಾಡಲು ಇದು ಸುರಕ್ಷಿತ ಆಯ್ಕೆಯಾಗಿದೆ. ಇಲ್ಲಿ ಗ್ರಾಹಕರು ಹೆಚ್ಚಿನ ಆದಾಯವನ್ನು ಪಡೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News