Home Loan ತೆಗೆದುಕೊಳ್ಳುವಾಗ ಈ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ!

Home Loan: ನೀವು ಮನೆ ಕೊಳ್ಳಲು ಅಥವಾ ಮನೆ ಕಟ್ಟಿಸಲು ಗೃಹಸಾಲ ಪಡೆಯಲು ಹೊರಟಿದ್ದರೆ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಇವು ಭವಿಷ್ಯದಲ್ಲಿ ನಿಮ್ಮ ತೊಂದರೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. 

Written by - Yashaswini V | Last Updated : Feb 15, 2024, 11:55 AM IST
  • ಹೋಂ ಲೋನ್ ಪಡೆಯುವಾಗ ಸಾಲದ ಮೊತ್ತವನ್ನು ಕಂತುಗಳಲ್ಲಿ ಮರುಪಾವತಿ ಮಾಡುವ ಆಯ್ಕೆ ಗ್ರಾಹಕರಿಗೆ ಲಭ್ಯವಿದೆ.
  • ಹೋಮ್ ಲೋನ್ ಅಥವಾ ಇನ್ನಾವುದೇ ಲೋನ್ ಆಗಿರಲಿ, ಮಾಸಿಕ ಇಎಂಐ ಪಾವತಿಸುವ ಮೂಲಕ ನೀವು ಸಾಲವನ್ನು ಮರುಪಾವತಿಸಬೇಕಾಗುತ್ತದೆ.
  • ಇದಕ್ಕಾಗಿ, ನಿಗದಿತ ದಿನಾಂಕದಂದು ಇಎಂಐ ಪಾವತಿಸುವುದು ಅವಶ್ಯಕ.
Home Loan ತೆಗೆದುಕೊಳ್ಳುವಾಗ ಈ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ! title=

Home Loan: ಪ್ರಸ್ತುತ ದಿನಗಳಲ್ಲಿ ಒಂದು ಸರಳವಾದ ಮನೆ ಖರೀದಿಸಲು ಕೂಡ ಲಕ್ಷ ಲಕ್ಷ ಹಣ ಪಾವತಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗೃಹ ಸಾಲದ ಆಯ್ಕೆಯು ಸೂಕ್ತವಾಗಿದೆ. ಹೋಮ್ ಲೋನ್ ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸುತ್ತದೆ. ಆದರೆ, ಗೃಹ ಸಾಲ ಎಂದರೆ ಹೋಂ ಲೋನ್ ಒಂದು ಜವಾಬ್ದಾರಿಯಾಗಿದೆ. ಹಾಗಾಗಿ, ಗೃಹ ಸಾಲವನ್ನು ತೆಗೆದುಕೊಳ್ಳುವಾಗ ಕೆಲವು ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುವುದು ತುಂಬಾ ಅಗಾಯ್ತವಾಗಿದೆ. ಇಲ್ಲದಿದ್ದರೆ, ಭವಿಷ್ಯದಲ್ಲಿ ಇದರಿಂದ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. 

ನೀವು ಮನೆ ಕೊಳ್ಳಲು ಅಥವಾ ಮನೆ ಕಟ್ಟಿಸಲು ಗೃಹಸಾಲ ಪಡೆಯಲು ಹೊರಟಿದ್ದರೆ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಹಾಗಿದ್ದರೆ, ಗೃಹ ಸಾಲ/ಹೋಂ ಲೋನ್ ತೆಗೆದುಕೊಳ್ಳುವಾಗ ಯಾವ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಅಗತ್ಯವಾಗಿದೆ ಎಂದು ತಿಳಿಯೋಣ... 

* ಇಎಂಐ ಡೇಟ್:
ಹೋಂ ಲೋನ್ ಪಡೆಯುವಾಗ ಸಾಲದ ಮೊತ್ತವನ್ನು ಕಂತುಗಳಲ್ಲಿ ಮರುಪಾವತಿ ಮಾಡುವ ಆಯ್ಕೆ ಗ್ರಾಹಕರಿಗೆ ಲಭ್ಯವಿದೆ. ಹೋಮ್ ಲೋನ್ ಅಥವಾ ಇನ್ನಾವುದೇ ಲೋನ್ ಆಗಿರಲಿ, ಮಾಸಿಕ ಇಎಂಐ ಪಾವತಿಸುವ ಮೂಲಕ ನೀವು ಸಾಲವನ್ನು ಮರುಪಾವತಿಸಬೇಕಾಗುತ್ತದೆ. ಇದಕ್ಕಾಗಿ, ನಿಗದಿತ ದಿನಾಂಕದಂದು ಇಎಂಐ ಪಾವತಿಸುವುದು ಅವಶ್ಯಕ. ಕೆಲವೊಮ್ಮೆ ನೀವು ನಿಗದಿಗೊಳಿಸಿದ ದಿನಾಂಕದಂದು ಇಎಂಐ ಕಟ್ಟಲು ಅಗತ್ಯವಿರುವಷ್ಟು ಹಣ ನಿಮ್ಮ ಖಾತೆಯಲ್ಲಿ ಇಲ್ಲದೆ ಇರಬಹುದು. ಇದನ್ನು ತಪ್ಪಿಸಲು ನೀವು ಇಎಂಐ ಪಾವತಿ ದಿನಾಂಕವನ್ನು ಯೋಚಿಸಿ ಆರಿಸಿ. ಉದಾಹರಣೆಗೆ: ಪ್ರತಿ ತಿಂಗಳು ನೀವು 5ನೇ ತಾರೀಖಿನಂದು ವೇತನ ಪಡೆಯುತ್ತೀರಿ ಎಂದಾದರೆ, ಇಎಂಐ ಕಡಿತದ ದಿನಾಂಕವನ್ನು 10ನೇ ತಾರೀಕಿನವರೆಗೆ ಇರಿಸಿ. ಒಂದೊಮ್ಮೆ ಯಾವುದೇ ತಿಂಗಳಿನಲ್ಲಿ ನಿಮ್ಮ ವೇತನ ಒಂದೆರಡು ದಿನ ತಡವಾದರೆ ಇಎಂಐ ಬೌನ್ಸ್ ಆಗುವುದನ್ನು ತಪ್ಪಿಸಬಹುದು. 

ಇದನ್ನೂ ಓದಿ- Debit-Credit Cards: ಈ ಸ್ಥಳಗಳಲ್ಲಿ ಮಿಸ್ ಆಗಿಯೂ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬೇಡಿ

* ಇಎಂಐ ಬೌನ್ಸ್ ಸಂದರ್ಭದಲ್ಲಿ ಲಭ್ಯವಿರುವ ಆಯ್ಕೆಗಳ ಬಗ್ಗೆ ಇರಲಿ ಗಮನ: 
ನಿಮ್ಮ ಇಎಂಐ ಬೌನ್ಸ್ ಆಗಿದ್ದರೆ ಮತ್ತು ನೀವು ಇದಕ್ಕೆ ಸರಿಯಾದ ಕಾರಣವನ್ನು ಹೊಂದಿದ್ದರೆ, ಅಂತಹ ಸಂದರ್ಭದಲ್ಲಿ ಭಯಪಡುವ ಅಗತ್ಯವಿಲ್ಲ. ನೀವು ಬ್ಯಾಂಕ್‌ನಿಂದ ಸೂಚನೆಯನ್ನು ಪಡೆಯುತ್ತೀರಿ, ಅದು ಜ್ಞಾಪನೆ ಸೂಚನೆಯಾಗಿದೆ. ನೋಟಿಸ್ ಸ್ವೀಕರಿಸಿದ ನಂತರ, ಸಾಲವನ್ನು ಮರುಪಾವತಿಸಲು ನಿಮಗೆ 60 ದಿನಗಳ ಕಾಲಾವಕಾಶವಿದೆ. ಈ ಅವಧಿಯೊಳಗೆ ನೀವು ಸಾಲವನ್ನು ಮರುಪಾವತಿ ಮಾಡದಿದ್ದಾಗ, ಬ್ಯಾಂಕ್ ನಿಮಗೆ ಅಂತಿಮ ಸೂಚನೆಯನ್ನು ಕಳುಹಿಸುತ್ತದೆ, ಅದರ ಅವಧಿಯು 30 ದಿನಗಳು. ಇದರ ನಂತರವೂ, ನೀವು ಸಾಲವನ್ನು ಮರುಪಾವತಿ ಮಾಡದಿದ್ದರೆ, SARFAESI ಕಾಯಿದೆಯ ಅಡಿಯಲ್ಲಿ ನಿಮ್ಮ ಆಸ್ತಿಯನ್ನು ಹರಾಜು ಮಾಡುವ ಪ್ರಕ್ರಿಯೆಯನ್ನು ಬ್ಯಾಂಕ್ ಪ್ರಾರಂಭಿಸಬಹುದು.

* ಬಿಲ್ಡರ್‌ನೊಂದಿಗೆ ಮನೆ ಒಪ್ಪಂದಕ್ಕೆ ಸಹಿ ಹಾಕಿದ್ದರೆ... 
ನೀವು ಗೃಹ ಸಾಲ ಪಡೆಯುವಾಗ ಬಿಲ್ಡರ್‌ನೊಂದಿಗೆ ಮನೆ ಒಪ್ಪಂದಕ್ಕೆ ಸಹಿ ಹಾಕಿದ್ದರೆ ಬ್ಯಾಂಕ್‌ಗೆ ನೀಡಿದ ಚೆಕ್‌ನಲ್ಲಿ ನಿಮ್ಮ ಸಹಿಯನ್ನು ಪರಿಶೀಲಿಸಿ. ಚೆಕ್‌ನಲ್ಲಿ ಸಹಿ ಮಾಡದಿರುವುದು, ಸ್ವೀಕೃತಿ ಮಾಡದಿರುವುದು ಮತ್ತು ಚೆಕ್‌ನ ವಾಪಸಾತಿಗೆ ದಂಡವನ್ನು ಸಹ ಹೊಂದಿರುವವರು ಭರಿಸಬೇಕಾಗುತ್ತದೆ. ನೀವು ಬಿಲ್ಡರ್‌ನೊಂದಿಗೆ ಮನೆ ಒಪ್ಪಂದ ಮಾಡಿಕೊಂಡಿದ್ದರೆ, ಸಾಲವನ್ನು ತೆಗೆದುಕೊಳ್ಳುವ ಮೊದಲು, ಖಂಡಿತವಾಗಿಯೂ ಬಿಲ್ಡರ್‌ನ ಜಮೀನು ದಾಖಲೆಗಳನ್ನು ಪರಿಶೀಲಿಸಿ. ನಂತರ, ಯಾವುದೇ ಸಮಸ್ಯೆಯ ಸಂದರ್ಭದಲ್ಲಿ, ಬ್ಯಾಂಕ್ ಸಾಲದ ಮೊತ್ತವನ್ನು ಮಧ್ಯದಲ್ಲಿ ನಿಲ್ಲಿಸಬಹುದು ಮತ್ತು ನೀವು ಬ್ಯಾಂಕ್ ನೀಡಿದ ಮೊತ್ತವನ್ನು ಪಾವತಿಸಬೇಕಾಗುತ್ತದೆ.

* ಗೃಹ ಸಾಲವನ್ನು ತ್ವರಿತವಾಗಿ ಮುಗಿಸುವುದು ಹೇಗೆ? 
ಹೋಂ ಲೋನ್ ಹೊಣೆಗಾರಿಕೆಯು ದೀರ್ಘಕಾಲದವರೆಗೆ ಇರುವುದರಿಂದ, ಅದನ್ನು ಸಮಯಕ್ಕೆ ಮರುಪಾವತಿ ಮಾಡುವುದು ಮುಖ್ಯವಾಗಿದೆ. ಇದಕ್ಕಾಗಿ ನೀವು ಸಾಲದ ಪೂರ್ವಪಾವತಿಯನ್ನು ಮಾಡಬಹುದು. ನೀವು ಎಲ್ಲಿಂದಲಾದರೂ ಹೆಚ್ಚುವರಿ ಆದಾಯವನ್ನು ಪಡೆದರೆ, ನೀವು ಆ ಮೊತ್ತವನ್ನು ಪೂರ್ವಪಾವತಿಯಾಗಿ ವ್ಯವಸ್ಥೆಗೊಳಿಸಬಹುದು. ಇದರೊಂದಿಗೆ ನೀವು ಸಾಲದ ಅವಧಿಯನ್ನು ಕಡಿಮೆ ಮಾಡಬಹುದು ಅಥವಾ ಇಎಂಐ ಅನ್ನು ಕಡಿಮೆ ಮಾಡಬಹುದು. ಇದನ್ನು ಖಚಿತಪಡಿಸಿಕೊಳ್ಳಲು ನೀವು ಹೋಂ ಲೋನ್ ಪಡೆಯುವಾಗ ಬ್ಯಾಂಕ್ ಅಧಿಕಾರಿಗಳಿಂದ ಈ ಬಗೆಗೆ ಸ್ಪಷ್ಟನೆ ಪಡೆಯಿರಿ. 

ಇದನ್ನೂ ಓದಿ- Home Loan: ಹೋಂ ಲೋನ್ ಮುಚ್ಚುವ ಸಂದರ್ಭದಲ್ಲಿ ಈ ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ

* ಬಡ್ಡಿ ದರದಲ್ಲಿ ವ್ಯತ್ಯಯ: 
ನೀವು ಹೋಂ ಲೋನ್ ಕೊಳ್ಳುವಾಗ ಇರುವ ಬಡ್ಡಿದರವು ಭವಿಷ್ಯದಲ್ಲಿಯೂ ಹಾಗೆಯೇ ಇರುತ್ತದೆ ಎಂಬ ನಿಖರತೆ ಇರುವುದಿಲ್ಲ.  ಬ್ಯಾಂಕ್ ಬಡ್ಡಿದರಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಆದರೆ ನಿಮ್ಮ ಬ್ಯಾಂಕ್ ಹೆಚ್ಚು ಬಡ್ಡಿಯನ್ನು ವಿಧಿಸುತ್ತಿದೆ ಮತ್ತು ನೀವು ಇನ್ನೊಂದು ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿಗೆ ಸಾಲವನ್ನು ಪಡೆಯುತ್ತಿದ್ದೀರಿ ಎಂದು ನೀವು ಭಾವಿಸಿದರೆ, ನಂತರ ನೀವು ಸಾಲದ ಮರುಹಣಕಾಸು ಆಯ್ಕೆಯನ್ನು ಆರಿಸಿಕೊಳ್ಳಬಹುದು. ಈ ಬಗ್ಗೆಯೂ ಸಹ ನೀವು ಮಾಹಿತಿ ಹೊಂದಿರುವುದು ಅಗತ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News