ಚಿನ್ನ ಬೆಳ್ಳಿ ದರ ತಿಳಿದುಕೊಂಡೇ ಖರೀದಿಗೆ ಮುಂದಾಗಿ : ಇಲ್ಲಿದೆ ಇಂದಿನ ಬೆಲೆ

Gold Silver Price Today :ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಖರೀದಿಸುವ ಮೊದಲು, ಖಂಡಿತವಾಗಿಯೂ ಇಂದಿನ  ಬೆಲೆಯನ್ನು ತಿಳಿದುಕೊಳ್ಳುವುದು ಸೂಕ್ತ.  

Written by - Ranjitha R K | Last Updated : Jan 8, 2024, 08:50 AM IST
  • ಚಿನ್ನದ ಬೆಲೆ ಸ್ಥಿರ
  • ಬೆಳ್ಳಿ ಬೆಲೆಯಲ್ಲಿಯೂ ಬದಲಾವಣೆ ಇಲ್ಲ
  • ಇಂದಿನ ಬೆಲೆ ತಿಳಿದುಕೊಳ್ಳಿ
 ಚಿನ್ನ ಬೆಳ್ಳಿ ದರ ತಿಳಿದುಕೊಂಡೇ ಖರೀದಿಗೆ ಮುಂದಾಗಿ : ಇಲ್ಲಿದೆ ಇಂದಿನ ಬೆಲೆ  title=

Gold Silver Price Today : ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳು ಕಂಡುಬರುತ್ತಲೇ ಇದೆ. ಕಳೆದ ವಾರದ ಆರಂಭದಲ್ಲಿ ಹೊಸ ದಾಖಲೆ ಬರೆದಿದ್ದ ಬಂಗಾರದ ವಾರಾಂತ್ಯದಲ್ಲಿ ಇಳಿಮುಖದತ್ತ ಸಾಗಿತ್ತು. ನೀವು ಸಹ ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಖರೀದಿಸುವ ಮೊದಲು, ಖಂಡಿತವಾಗಿಯೂ ಇಂದಿನ  ಬೆಲೆಯನ್ನು ತಿಳಿದುಕೊಳ್ಳುವುದು ಸೂಕ್ತ.

24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 63,270 ರೂಪಾಯಿ ಆಗಿದೆ.ಕಳೆದ ವಾರದ ಬೆಲೆಗೆ ಹೋಲಿಸಿದರೆ ಈ ಬೆಲೆ ಕಡಿಮೆ ಎಂದೇ ಹೇಳಬಹುದು.

22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ ) :
ಬೆಂಗಳೂರು - 58,000 ರೂ.
ದೆಹಲಿ - 58,150 ರೂ.
ಮುಂಬಯಿ -58,000 ರೂ.
ಹೈದರಾಬಾದ್ - 58,000 ರೂ.
ಕೇರಳ- 58,000 ರೂ.
ಚೆನ್ನೈ - 58,500 ರೂ.

ಇದನ್ನೂ ಓದಿ : Investment Tips: ಲೇಡೀಜ್ ಗಮನಕ್ಕೆ! ಎಫ್ಡಿ - ಚಿನ್ನಕ್ಕಿಂತ ಹೆಚ್ಚಿನ ಬಡ್ಡಿ ಬೇಕೆ?, ಹೆದರುವುದನ್ನು ಬಿಟ್ಟು ಇಲ್ಲಿ ಹೂಡಿಕೆ ಮಾಡಿ!

ಇನ್ನು ಬೆಳ್ಳಿ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಬೆಳ್ಳಿ ಬೆಲೆ ಸದ್ಯಕ್ಕೆ ಸ್ಥಿರಾವಾಗಿದ್ದು ಒಂದು ಕೆ.ಜಿಗೆ 76,600 ರೂಪಾಯಿ ಆಗಿದೆ. 

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ : (100 ಗ್ರಾಂ ಗಳಲ್ಲಿ )

ಬೆಂಗಳೂರು - 7,800 ರೂ.
ದೆಹಲಿ - 7,660 ರೂ.
ಮುಂಬಯಿ - 7,660 ರೂ.
ಹೈದರಾಬಾದ್ - 7,800 ರೂ.
ಕೇರಳ-7,800 ರೂ.
ಚೆನ್ನೈ - 7,800 ರೂ.

ನಿಮ್ಮ ನಗರದಲ್ಲಿನ ದರಗಳನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. 

ಇದನ್ನೂ ಓದಿ : Digital FD Tips: ಡಿಜಿಟಲ್ ಎಫ್ಡಿ ಕಾಲ, ನಿಮ್ಮ ಎಫ್ಡಿ ಮೇಲೆ ಸಿಗಲಿದೆ ಶೇ.0.25 ರಷ್ಟು ಹೆಚ್ಚು ಬಡ್ಡಿ ದರ!

ಈ ಮೇಲಿನ ದರವನ್ನು ಸುದ್ದಿ ಬರೆಯುವ ಸಮಯದ ಆಧಾರದ ಮೇಲೆ ನೀಡಲಾಗಿದೆ. ನಗರಗಳಿಗೆ ಅನುಸಾರವಾಗಿ ದರದಲ್ಲಿ ಬದಲಾವಣೆಯಾಗಬಹುದು.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News