ಉಚಿತ ಪಡಿತರ ಲಾಭಾರ್ಥಿಗಳಿಗೆ ಬಂಪರ್ ಲಾಟರಿ, ಉಚಿತ ಗೋದಿ-ಅಕ್ಕಿಯ ಜೊತೆಗೆ ಇದನ್ನು ಮನೆಗೆ ಕೊಂಡೊಯ್ಯಿರಿ!

Ration Card Update: ಪಡಿತರ ಚೀಟಿ ಫಲಾನುಭವಿಗಳಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟವಾಗಿದೆ. ನೀವೂ ಕೂಡ ಉಚಿತ ಪಡಿತರ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದರೆ,  ಇದೀಗ ಸರಕಾರ ನಿಮಗಾಗಿ ಮತ್ತೊಂದು ವಿಶೇಷ ಯೋಜನೆಯನ್ನು ರೂಪಿಸುತ್ತಿದ್ದು, ಇದರ ಅಡಿಯಲ್ಲಿ ಉಚಿತ ಗೋಧಿ, ಅಕ್ಕಿ ಹೊರತುಪಡಿಸಿ ಇತರೆ ಸರಕುಗಳನ್ನು ಕೂಡ ಉಚಿತವಾಗಿ ನೀಡಲಾಗುವುದು ಎನ್ನಲಾಗಿದೆ.  

Written by - Nitin Tabib | Last Updated : Mar 11, 2023, 04:52 PM IST
  • ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಆಹಾರ ಸಚಿವರು,
  • 2023 ರಲ್ಲಿ ದೇಶಾದ್ಯಂತ ಕುಟುಂಬಗಳಿಗೆ ಉಚಿತ ಪಡಿತರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
  • ಈ ವರ್ಷ ಪೂರ್ತಿ ಫಲಾನುಭವಿಗಳಿಗೆ ಉಚಿತ ಪಡಿತರ ಸೌಲಭ್ಯ ದೊರೆಯಲಿದೆ.
ಉಚಿತ ಪಡಿತರ ಲಾಭಾರ್ಥಿಗಳಿಗೆ ಬಂಪರ್ ಲಾಟರಿ, ಉಚಿತ ಗೋದಿ-ಅಕ್ಕಿಯ ಜೊತೆಗೆ ಇದನ್ನು ಮನೆಗೆ ಕೊಂಡೊಯ್ಯಿರಿ! title=
ಉಚಿತ ಪಡಿತರ ಫಲಾನುಭವಿಗಳಿಗೆ ಬಂಪರ್ ಲಾಟರಿ !

Free Ration Scheme Update: ಉಚಿತ ಪಡಿತರ ಚೀಟಿ ಫಲಾನುಭವಿಗಳಿಗೊಂದು ಭಾರಿ  ಸಂತಸದ ಸುದ್ದಿ ಪ್ರಕಟವಾಗಿದೆ. ಉಚಿತ ಪಡಿತರ ಯೋಜನೆಯ ಲಾಭವನ್ನು ನೀವೂ ಪಡೆದುಕೊಳ್ಳುತ್ತಿದ್ದರೆ, ಇದೀಗ ಸರ್ಕಾರ ನಿಮಗಾಗಿ ಮತ್ತೊಂದು ವಿಶೇಷ ಯೋಜನೆಯನ್ನು ರೂಪಿಸುತ್ತಿದ್ದು, ಇದರ ಅಡಿಯಲ್ಲಿ ಉಚಿತ ಗೋಧಿ, ಅಕ್ಕಿ, ಇತರೆ  ವಸ್ತುಗಳನ್ನು ಉಚಿತವಾಗಿ ನಿಮಗೆ ನೀಡಲಾಗುವುದು ಎನ್ನಲಾಗಿದೆ. ಅರ್ಥಾತ್, ನೀವು ಇತರ ವಸ್ತುಗಳನ್ನು ಸಹ ಕಡಿಮೆ ಬೆಲೆಗೆ ಪಡೆಯಬಹುದು.

23 ಲಕ್ಷ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ
ಆಹಾರ ಸಚಿವಾಲಯದಿಂದ ಬಂದಿರುವ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಹಿನ್ನೆಲೆ, ಇದೀಗ ಉತ್ತರಾಖಂಡ ಸರ್ಕಾರವು 23 ಲಕ್ಷ ಕುಟುಂಬಗಳಿಗೆ ಉಚಿತ ಗೋಧಿ ಮತ್ತು ಅಕ್ಕಿಯ ಜೊತೆಗೆ ಕಡಿಮೆ ಬೆಲೆಯಲ್ಲಿ ಸಕ್ಕರೆ ಮತ್ತು ಉಪ್ಪನ್ನು ಸಹ ನೀಡಲು ಯೋಜಿಸುತ್ತಿದೆ.

65 ಲಕ್ಷ ಕೋಟಿ ಹೆಚ್ಚುವರಿ ವೆಚ್ಚ ಬರಲಿದೆ
ಮಾಹಿತಿ ನೀಡಿದ ಉತ್ತರಾಖಂಡದ ಆಹಾರ ಸಚಿವರು, ಇಲಾಖೆಯು ಈ ಯೋಜನೆಗೆ ಬಜೆಟ್ ಪ್ರಸ್ತಾವನೆಯನ್ನು ಸಹ ಸಿದ್ಧಪಡಿಸಲಾಗಿದೆ  ಎಂದು ಹೇಳಿದ್ದಾರೆ. ಅದನ್ನು ಸಚಿವ ಸಂಪುಟದಲ್ಲಿ ಮಂಡಿಸಲಾಗುವುದು. ಈ ಯೋಜನೆಯನ್ನು ಜಾರಿಗೊಳಿಸಿದ ನಂತರ, ರಾಜ್ಯವು ಸುಮಾರು 65 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ ಪಕ್ಕಾ! ಈ ದಿನ ಘೋಷಣೆ ಸಾಧ್ಯತೆ

ಬಡವರಿಗೆ ಎಲ್ಲ ಅಗತ್ಯ ವಸ್ತುಗಳು ಸಿಗಬೇಕು
ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಆಹಾರ ಸಚಿವರು, 2023 ರಲ್ಲಿ ದೇಶಾದ್ಯಂತ ಕುಟುಂಬಗಳಿಗೆ ಉಚಿತ ಪಡಿತರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಈ ವರ್ಷ ಪೂರ್ತಿ ಫಲಾನುಭವಿಗಳಿಗೆ ಉಚಿತ ಪಡಿತರ ಸೌಲಭ್ಯ ದೊರೆಯಲಿದೆ. ಪ್ರತಿ ಅಡುಗೆಮನೆಯಲ್ಲಿ ಗೋಧಿ ಮತ್ತು ಅಕ್ಕಿ ಜೊತೆಗೆ ಸಕ್ಕರೆ ಮತ್ತು ಉಪ್ಪಿನಂತಹ ಅಗತ್ಯ ವಸ್ತುಗಳು ಲಭ್ಯವಿರಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.

ಇದನ್ನೂ ಓದಿ-7th CPC: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಹಬ್ಬದ ಉಡುಗೊರೆ ಪ್ರಕಟಿಸಿದ ಮೋದಿ ಸರ್ಕಾರ!

ಸಕ್ಕರೆ ಮೇಲೆ ಸಹಾಯಧನ ನೀಡಲಾಗುವುದು
ಸಕ್ಕರೆ ಮೇಲೆ ಕೆಜಿಗೆ 10 ರೂಪಾಯಿ ಸಹಾಯಧನ ನೀಡುವಂತೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಅಷ್ಟೇ ಅಲ್ಲ ಇದನ್ನು ರೂ.15ಕ್ಕೆ ಹೆಚ್ಚಿಸುವ ಪ್ರಸ್ತಾವನೆಯೂ ಇದೆ ಎಂದಿದ್ದಾರೆ. ಇದರೊಂದಿಗೆ ಕಳೆದ 6 ತಿಂಗಳಿಂದ ಪಡಿತರ ಚೀಟಿ ಪಡೆಯದೇ ಇರುವ ಎಲ್ಲ ಕಾರ್ಡ್‌ದಾರರ ಕಾರ್ಡ್‌ಗಳನ್ನು ರದ್ದುಗೊಳಿಸುವ ಪ್ರಸ್ತಾವನೆ ಕೂಡ ಇದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News