ಬ್ಯಾಂಕಿಗಿಂತ ಹೆಚ್ಚು ಬಡ್ಡಿ... ಅಂಚೆ ಇಲಾಖೆಯ ಈ ಯೋಜನೆಯಲ್ಲಿ ಪ್ರತಿ ತಿಂಗಳು 5000 ರೂ ಆದಾಯ ಖಾತರಿ!

Post Office Saving Scheme: ಇದರಲ್ಲಿ ನೀವು ಹೂಡಿಕೆ ಮಾಡಿದ ಹಣದ ಭದ್ರತೆಯ ಜೊತೆಗೆ, ನೀವು ಉತ್ತಮ ಆದಾಯವನ್ನು ಸಹ ಪಡೆಯುತ್ತೀರಿ. ಇದು ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯಾಗಿದೆ.

Written by - Chetana Devarmani | Last Updated : Feb 18, 2024, 08:28 AM IST
  • ಅಂಚೆ ಇಲಾಖೆಯ ಅದ್ಭುತ ಯೋಜನೆ
  • ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆ
  • ಪ್ರತಿ ತಿಂಗಳು ಆದಾಯ ಫಿಕ್ಸ್‌
ಬ್ಯಾಂಕಿಗಿಂತ ಹೆಚ್ಚು ಬಡ್ಡಿ... ಅಂಚೆ ಇಲಾಖೆಯ ಈ ಯೋಜನೆಯಲ್ಲಿ ಪ್ರತಿ ತಿಂಗಳು 5000 ರೂ ಆದಾಯ ಖಾತರಿ!  title=

Post Office Monthly Income Scheme: ಪ್ರತಿ ವಯೋಮಾನ ಮತ್ತು ವರ್ಗದವರಿಗೂ ಅಂಚೆ ಕಛೇರಿಯಲ್ಲಿ ಅನೇಕ ಉಳಿತಾಯ ಯೋಜನೆಗಳಿವೆ. ಅವು ಬಹಳ ಜನಪ್ರಿಯವಾಗಿವೆ. ಇದರಲ್ಲಿ ನೀವು ಹೂಡಿಕೆ ಮಾಡಿದ ಹಣದ ಭದ್ರತೆಯ ಜೊತೆಗೆ, ನೀವು ಉತ್ತಮ ಆದಾಯವನ್ನು ಸಹ ಪಡೆಯುತ್ತೀರಿ. ಇದು ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯಾಗಿದೆ. ಇದು ಹೂಡಿಕೆದಾರರಿಗೆ ಪ್ರತಿ ತಿಂಗಳು ಆದಾಯವನ್ನು ಖಾತರಿಪಡಿಸುತ್ತದೆ.

ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿನ ಆದಾಯವೂ ಉತ್ತಮವಾಗಿದೆ. ಜುಲೈ 1, 2023 ರಿಂದ ಹೂಡಿಕೆಯ ಮೇಲಿನ ಬಡ್ಡಿಯನ್ನು ಶೇಕಡಾ 7.4 ಕ್ಕೆ ಹೆಚ್ಚಿಸಲಾಗಿದೆ. ಈ ಯೋಜನೆಯ ಪ್ರಮುಖ ವಿಷಯವೆಂದರೆ ಅದರಲ್ಲಿ ಹೂಡಿಕೆ ಮಾಡುವ ಮೂಲಕ, ಪ್ರತಿ ತಿಂಗಳು ಆದಾಯ ಗಳಿಸಬಹುದು. ಈ ಸರ್ಕಾರಿ ಯೋಜನೆಯ ಮೆಚ್ಯೂರಿಟಿ ಅವಧಿ 5 ವರ್ಷ. ಖಾತೆಯನ್ನು ತೆರೆದ ಒಂದು ವರ್ಷದವರೆಗೆ ಅದರಿಂದ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಇದರಲ್ಲಿ ನೀವು ಕೇವಲ 1000 ರೂಗಳಲ್ಲಿ ಖಾತೆಯನ್ನು ತೆರೆಯಬಹುದು.

ಇದನ್ನೂ ಓದಿ: ಈ ಸರ್ಕಾರಿ ಯೋಜನೆಯಲ್ಲಿ, ರೈತರು ತಿಂಗಳಿಗೆ 55 ರೂ. ಹೂಡಿಕೆ ಮಾಡಿ, ಮಾಸಿಕ 3000 ಪಿಂಚಣಿ ಪಡೆಯಬಹುದು! 

ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆ (POMIS) ಅಡಿಯಲ್ಲಿ ಹೂಡಿಕೆ ಮಾಡುವ ಖಾತೆದಾರರಿಗೆ ಹೂಡಿಕೆ ಮಿತಿಯನ್ನು ಸರ್ಕಾರ ಹೆಚ್ಚಿಸಿದೆ. ಈ ಮೊದಲು ವೈಯಕ್ತಿಕ ಖಾತೆದಾರರ ಹೂಡಿಕೆ ಮಿತಿ 4.5 ಲಕ್ಷ ರೂ.ಗಳಾಗಿದ್ದು, ಅದನ್ನು 9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಾಯಿಂಟ್‌ ಅಕೌಂಟ್‌ ಸಹ ತೆರೆಯಬಹುದಾಗಿದ್ದು, ಗರಿಷ್ಠ ಮಿತಿಯನ್ನು ಹಿಂದಿನ 9 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೂಡಿಕೆ ಮಿತಿಯಲ್ಲಿನ ಈ ಹೆಚ್ಚಳವು ಏಪ್ರಿಲ್ 1, 2023 ರಿಂದ ಜಾರಿಯಾಗಿದೆ. ಈ ಯೋಜನೆಯಡಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳು ಸ್ಥಿರ ಆದಾಯವನ್ನು ಗಳಿಸಬಹುದು.

ಐದು ವರ್ಷಗಳವರೆಗೆ ಈ ಯೋಜನೆಯಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದರೆ ಶೇಕಡಾ 7.4 ರ ಬಡ್ಡಿಯನ್ನು ಪಡೆಯುತ್ತೀರಿ. ಪ್ರತಿ ತಿಂಗಳು 3,084 ರೂ. ಆದಾಯ ದೊರೆಯುವುದು. ಆದರೆ ನಾವು ವೈಯಕ್ತಿಕ ಖಾತೆದಾರರ ಗರಿಷ್ಠ ಮಿತಿಯನ್ನು ನೋಡಿದರೆ ಅಂದರೆ ರೂ 9 ಲಕ್ಷ ಹೂಡಿಕೆಯಲ್ಲಿ, ಮಾಸಿಕ ಆದಾಯ ರೂ 5,550 ಆಗಿರುತ್ತದೆ. ಈ ಬಡ್ಡಿಯನ್ನು ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ತೆಗೆದುಕೊಳ್ಳಬಹುದು.

ಇದನ್ನೂ ಓದಿ: ಸರ್ಕಾರ ನೌಕರರು, ಪಿಂಚಣಿದಾರರಿಗೆ ಜಾಕ್‌ಪಾಟ್ ಸುದ್ದಿ, ತಿಂಗಳ ಕೊನೆಗೆ ಕೈ ಸೇರುವುದು ಇಷ್ಟು ಹಣ!

ಮಾಸಿಕ ಉಳಿತಾಯ ಯೋಜನೆ (MIS) ಅಡಿಯಲ್ಲಿ ಖಾತೆಯನ್ನು ತೆರೆಯುವುದು ತುಂಬಾ ಸುಲಭ. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಅಂಚೆ ಕಚೇರಿಗೆ ಸಲ್ಲಿಸಬಹುದು. ಅರ್ಜಿದಾರರು ಪೋಸ್ಟ್ ಆಫೀಸ್‌ನಿಂದ ಖಾತೆ ತೆರೆಯುವ ಫಾರ್ಮ್ ಅನ್ನು ಸಂಗ್ರಹಿಸಬಹುದು. ಅದನ್ನು KYC ಫಾರ್ಮ್ ಮತ್ತು ಪ್ಯಾನ್ ಕಾರ್ಡ್‌ನೊಂದಿಗೆ ಸಲ್ಲಿಸಬಹುದು. ಖಾತೆಯನ್ನು ತೆರೆಯುವ ಸಮಯದಲ್ಲಿ ಫಾರ್ಮ್ ಅನ್ನು ಭರ್ತಿ ಮಾಡುವಾಗ, ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು ಎಂಬುದನ್ನು ನೆನಪಿನಲ್ಲಿಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News