Post Office Scheme: ಪೋಸ್ಟ್ ಆಫೀಸ್‌ನ ಈ ಸರ್ಕಾರಿ ಯೋಜನೆ ನಿಮ್ಮ ಹಣವನ್ನು ದ್ವಿಗುಣಗೊಳಿಸುತ್ತದೆ!

Post Office KVP Scheme: ‘ಕಿಸಾನ್ ವಿಕಾಸ್ ಪತ್ರ’ವು ಗ್ಯಾರಂಟಿಯೊಂದಿಗೆ ಹಣ ದ್ವಿಗುಣಗೊಳಿಸುವ ಏಕೈಕ ಸರ್ಕಾರಿ ಯೋಜನೆಯಾಗಿದೆ. ಈ ಪೋಸ್ಟ್ ಆಫೀಸ್ ಸ್ಕೀಮ್‍ನಡಿ ಹೂಡಿಕೆ ಮಾಡುವ ಮೂಲಕ ನೀವು ಡಬಲ್ ಹಣ ಮರಳಿ ಪಡೆಯುತ್ತೀರಿ.

Written by - Puttaraj K Alur | Last Updated : Apr 29, 2023, 12:41 PM IST
  • ‘ಕಿಸಾನ್ ವಿಕಾಸ್ ಪತ್ರ’ವು ಗ್ಯಾರಂಟಿಯೊಂದಿಗೆ ಹಣ ದ್ವಿಗುಣಗೊಳಿಸುವ ಏಕೈಕ ಸರ್ಕಾರಿ ಯೋಜನೆ
  • ಈ ಪೋಸ್ಟ್ ಆಫೀಸ್ ಸ್ಕೀಮ್‍ನಡಿ ಹೂಡಿಕೆ ಮಾಡಿದ್ರೆ ನೀವು ಡಬಲ್ ಹಣ ಮರಳಿ ಪಡೆಯುತ್ತೀರಿ
  • ಪ್ರಸ್ತುತ ‘ಕಿಸಾನ್ ವಿಕಾಸ್ ಪತ್ರ’ಕ್ಕೆ ಶೇ.7.5ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ
Post Office Scheme: ಪೋಸ್ಟ್ ಆಫೀಸ್‌ನ ಈ ಸರ್ಕಾರಿ ಯೋಜನೆ ನಿಮ್ಮ ಹಣವನ್ನು ದ್ವಿಗುಣಗೊಳಿಸುತ್ತದೆ! title=
ಹಣ ದ್ವಿಗುಣಗೊಳಿಸುವ ಸರ್ಕಾರಿ ಯೋಜನೆ!

ನವದೆಹಲಿ: ನಿಮ್ಮ ಹಣವನ್ನು ಉತ್ತಮವಾಗಿ ಹೂಡಿಕೆ ಮಾಡಬಯಸಿದ್ರೆ, ಇಲ್ಲಿ ನೀವು ಡಬಲ್ ಹಣ ಪಡೆಯಬಹುದು. ಇದು ಕೂಡ ಯಾವುದೇ ಅಪಾಯವಿಲ್ಲದೆ. ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ. ‘ಕಿಸಾನ್ ವಿಕಾಸ್ ಪತ್ರ’ವು ಗ್ಯಾರಂಟಿಯೊಂದಿಗೆ ಹಣ ದ್ವಿಗುಣಗೊಳಿಸುವ ಏಕೈಕ ಸರ್ಕಾರಿ ಯೋಜನೆಯಾಗಿದೆ. ಈ ಪೋಸ್ಟ್ ಆಫೀಸ್ ಸ್ಕೀಮ್‍ನಡಿ ಹೂಡಿಕೆ ಮಾಡುವ ಮೂಲಕ ನೀವು ಡಬಲ್ ಹಣ ಮರಳಿ ಪಡೆಯುತ್ತೀರಿ. ನಿಮ್ಮ ಹತ್ತಿರದ ಅಂಚೆ ಕಚೇರಿಯಿಂದ ನೀವು ಕಿಸಾನ್ ವಿಕಾಸ್ ಪತ್ರವನ್ನು (KVP) ಖರೀದಿಸಬಹುದು.

ಹಣ ದ್ವಿಗುಣಗೊಳ್ಳುತ್ತದೆ

ನೀವು ಕನಿಷ್ಠ 1,000 ರೂ.ಗಳಿಂದ ಹೂಡಿಕೆ ಮಾಡಬಹುದು. ಇದರಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಪ್ರಸ್ತುತ ‘ಕಿಸಾನ್ ವಿಕಾಸ್ ಪತ್ರ’ಕ್ಕೆ ಶೇ.7.5ರ ದರದಲ್ಲಿ ಬಡ್ಡಿ ನೀಡಲಾಗುತ್ತಿದೆ. ಇದರ ಮೇಲಿನ ಬಡ್ಡಿಯನ್ನು ಸಂಯುಕ್ತ ರೂಪದಲ್ಲಿ ಲೆಕ್ಕ ಹಾಕಲಾಗುತ್ತದೆ. ಈ ಯೋಜನೆಯಡಿ ನೀವು 100 ರೂ. multiplesನಂತೆ ಹೂಡಿಕೆ ಮಾಡಬೇಕು. ಪೋಸ್ಟ್ ಆಫೀಸ್ ಪ್ರಕಾರ ಈ ಸಮಯದಲ್ಲಿ ಲಭ್ಯವಿರುವ ಬಡ್ಡಿದರದ ಪ್ರಕಾರ ಹೂಡಿಕೆದಾರರ ಹಣವು 115 ತಿಂಗಳುಗಳಲ್ಲಿ ಅಂದರೆ 9 ವರ್ಷ ಮತ್ತು 7 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ.

ಇದನ್ನೂ ಓದಿ: Government Portal: ಆಧಾರ್-ಪ್ಯಾನ್ ಲಿಂಕ್, ಜನ್ಮ ಪ್ರಮಾಣಪತ್ರ ಒಂದೇ ವೆಬ್‌ಸೈಟ್‌ನಲ್ಲಿ ಲಭ್ಯ!

ಯಾವುದೇ ವ್ಯಕ್ತಿ ಕೆವಿಪಿ ಕಿಸಾನ್ ವಿಕಾಸ್ ಪತ್ರವನ್ನು ಎಷ್ಟಾದರೂ ಖರೀದಿಸಬಹುದು . ನೀವು KVP ಪ್ರಮಾಣಪತ್ರಗಳನ್ನು ಸಣ್ಣ ಮೊತ್ತಕ್ಕೆ ಖರೀದಿಸಬಹುದು. ಏಕೆಂದರೆ ಅಗತ್ಯವಿದ್ದಲ್ಲಿ ಅವುಗಳನ್ನು ಅಕಾಲಿಕವಾಗಿ ಪಡೆದುಕೊಳ್ಳಲು ಸುಲಭವಾಗುತ್ತದೆ. ಇದರಲ್ಲಿ ಕೆವಿಪಿಯನ್ನು 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಲ್ಲೂ ಹೂಡಿಕೆ ಮಾಡಬಹುದು.

KVPಯಲ್ಲೂ ಈ ಸೌಲಭ್ಯವಿದೆ

ಹಣದ ಅವಶ್ಯಕತೆ ಇದ್ದಲ್ಲಿ ಈ ಪ್ರಮಾಣ ಪತ್ರಗಳನ್ನೂ ಅಡಮಾನ ಇಡಬಹುದು. ಕೆಲಸವು ಅಗತ್ಯದ ಮೇಲೆ ಈ ಸೌಲಭ್ಯ ನಿಮಗೆ ದೊರೆಯಲಿದೆ ಮತ್ತು ನಿಮ್ಮ ಮೊತ್ತವು ದ್ವಿಗುಣಗೊಳ್ಳುತ್ತದೆ, ನೀವು ಅದನ್ನು ಮರಳಿ ಪಡೆಯಬಹುದು. KVPಯ ಬಡ್ಡಿ ಪ್ರತಿ 3 ತಿಂಗಳಿಗೊಮ್ಮೆ ಬದಲಾಗುತ್ತದೆ, ಆದರೆ ಹೂಡಿಕೆದಾರರು ಅವುಗಳನ್ನು ಖರೀದಿಸಿದಾಗ ಆ ಸಮಯದಲ್ಲಿನ ಬಡ್ಡಿಯು ಮುಕ್ತಾಯದವರೆಗೆ ಲಭ್ಯವಿರುತ್ತದೆ.

ಇದನ್ನೂ ಓದಿ: India Most Expensive Cars: ಇವು ಭಾರತದ ಅಂತ್ಯತ ದುಬಾರಿ ಕಾರುಗಳು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News