Post Office Schemes: FD v/s NSC ಯಾವುದು ಹೆಚ್ಚು ಲಾಭದಾಯಕ?

Post Office Schemes: ಸಾಮಾನ್ಯವಾಗಿ ಬ್ಯಾಂಕ್‌ಗಳು ಮತ್ತು ಪೋಸ್ಟ್ ಆಫೀಸ್‌ಗಳಲ್ಲಿ ಎಫ್‌ಡಿ ಹೂಡಿಕೆ ಸುರಕ್ಷಿತ ಹೂಡಿಕೆ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಕೆಲವರು  ಪೋಸ್ಟ್ ಆಫೀಸ್‌ನಲ್ಲಿ ಎನ್‌ಎಸ್‌ಸಿ ಯೋಜನೆಯಲ್ಲೂ ಕೂಡ ಹೂಡಿಕೆ ಮಾಡುತ್ತಾರೆ.   

Written by - Yashaswini V | Last Updated : Mar 19, 2024, 10:05 AM IST
  • ಸ್ಥಿರ ಠೇವಣಿಯಲ್ಲಿ ಎಂದರೆ ಎಫ್‌ಡಿಯಲ್ಲಿ ಒಂದು ವರ್ಷದವರೆಗೆ ಹೂಡಿಕೆ ಮಾಡಿದರೆ 6.9% ಬಡ್ಡಿದರ ಲಭ್ಯವಿದೆ
  • ಎನ್‌ಎಸ್‌ಸಿಯಲ್ಲಿ ಪ್ರಸ್ತುತ 7.7% ಬಡ್ಡಿ ಸೌಲಭ್ಯ ಲಭ್ಯವಿದೆ.
  • ಐದು ವರ್ಷಗಳವರೆಗೆ ಎನ್‌ಎಸ್‌ಸಿ ಹೂಡಿಕೆಯಲ್ಲಿ ಎಷ್ಟು ಬಡ್ಡಿ ಲಭ್ಯವಾಗಲಿದೆ
Post Office Schemes:  FD v/s NSC ಯಾವುದು ಹೆಚ್ಚು ಲಾಭದಾಯಕ?  title=

Post Office Schemes FD vs NSC: ಸುರಕ್ಷಿತ ಹೂಡಿಕೆಯ ವಿಷಯದಲ್ಲಿ ಸ್ಥಿರ ಠೇವಣಿ (ಎಫ್‌ಡಿ) ಅನ್ನು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಎಫ್‌ಡಿಯಲ್ಲಿ 7 ದಿನಗಳಿಂದ 10 ವರ್ಷಗಳವರೆಗೆ ಅಧಿಕಾರಾವಧಿಯನ್ನು ಆಯ್ಕೆ ಮಾಡಬಹುದು. ಒಂದೊಮ್ಮೆ ನೀವು ಐದು ವರ್ಷಗಳವರೆಗೆ ಎಫ್‌ಡಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ, ಸ್ಥಿರ ಠೇವಣಿಗಿಂತ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಉತ್ತಮ ಆಯ್ಕೆಯಾಗಿದೆ. ಹಾಗಿದ್ದರೆ. ಎಫ್‌ಡಿ v/s ಎನ್‌ಎಸ್‌ಸಿಗಳಲ್ಲಿ ಯಾವುದು ಉತ್ತಮ, ಇವೆರಡರಲ್ಲಿ ಯಾವುದು ಹೆಚ್ಚು ಲಾಭದಾಯಕ ಎಂದು ತಿಳಿಯಿರಿ. 

ಸಾಮಾನ್ಯವಾಗಿ ಬ್ಯಾಂಕ್‌ಗಳು ಮತ್ತು ಪೋಸ್ಟ್ ಆಫೀಸ್‌ಗಳಲ್ಲಿ ಎಫ್‌ಡಿ ಹೂಡಿಕೆ ಸುರಕ್ಷಿತ ಹೂಡಿಕೆ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಕೆಲವರು  ಪೋಸ್ಟ್ ಆಫೀಸ್‌ನಲ್ಲಿ ಎನ್‌ಎಸ್‌ಸಿ ಯೋಜನೆಯಲ್ಲೂ ಕೂಡ ಹೂಡಿಕೆ ಮಾಡುತ್ತಾರೆ. ಪ್ರಸ್ತುತ, 5 ವರ್ಷಗಳವರೆಗೆ ಎನ್‌ಎಸ್‌ಸಿ ಹೂಡಿಕೆಯಲ್ಲಿ7.7% ಬಡ್ಡಿ ಲಭ್ಯವಿದೆ. ಮಾತ್ರವಲ್ಲ, ಇದು ತೆರಿಗೆ ಪ್ರಯೋಜನಗಳನ್ನು ಕೂಡ ಒಳಗೊಂಡಿದೆ. 

ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ ಬಡ್ಡಿದರ: 
ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ ಒಂದು ವರ್ಷದ ಎಫ್‌ಡಿಯಲ್ಲಿ 6.9%, ಎರಡು ವರ್ಷದ ಎಫ್‌ಡಿಯಲ್ಲಿ 7.0%, ಮೂರು ವರ್ಷದ ಎಫ್‌ಡಿಯಲ್ಲಿ 7.1% ಮತ್ತು 5 ವರ್ಷದ ಎಫ್‌ಡಿಯಲ್ಲಿ 7.5% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. 

ಇದನ್ನೂ ಓದಿ- EPF Balance: ನಿಮ್ಮ ಪಿ‌ಎಫ್ ಬ್ಯಾಲೆನ್ಸ್ ಪರಿಶೀಲಿಸಲು ಇಲ್ಲಿವೆ ನಾಲ್ಕು ಸುಲಭ ಮಾರ್ಗ

ಈ ಲೆಕ್ಕಾಚಾರದ ಪ್ರಕಾರ, ನೀವು ಸ್ಥಿರ ಠೇವಣಿಯಲ್ಲಿ ಎಂದರೆ ಎಫ್‌ಡಿಯಲ್ಲಿ 1 ಲಕ್ಷ ರೂ. ಹಣವನ್ನು ಒಂದು ವರ್ಷದವರೆಗೆ ಹೂಡಿಕೆ ಮಾಡಿದರೆ 6.9% ಬಡ್ಡಿದರದಲ್ಲಿ ಮೆಚ್ಯೂರಿಟಿ ಮೊತ್ತವಾಗಿ 1,07,081 ರೂ.ಗಳನ್ನು ಗಳಿಸುತ್ತೀರಿ. ಎರಡು ವರ್ಷಗಳಲ್ಲಿ 7% ಬಡ್ಡಿ ದರದಲ್ಲಿ 1,14,888ರೂ.ಗಳನ್ನು ಪಡೆಯುತ್ತೀರಿ. ಮೂರು ವರ್ಷಗಳಲ್ಲಿ 7.1% ಬಡ್ಡಿದರದಲ್ಲಿ  1,23,508 ರೂ. ಹಣವನ್ನು ಹಾಗೂ  5 ವರ್ಷಗಳಲ್ಲಿ ಶೇಕಡಾ 7.5 ಬಡ್ಡಿದರದಂತೆ  1,44,995 ರೂ.ಗಳನ್ನು ಪಡೆಯುತ್ತೀರಿ. 

ಐದು ವರ್ಷಗಳವರೆಗೆ ಎನ್‌ಎಸ್‌ಸಿ ಹೂಡಿಕೆಯಲ್ಲಿ ಎಷ್ಟು ಬಡ್ಡಿ ಲಭ್ಯವಾಗಲಿದೆ? 
ಮೊದಲೇ ತಿಳಿಸಿದಂತೆ ಎನ್‌ಎಸ್‌ಸಿಯಲ್ಲಿ ಪ್ರಸ್ತುತ 7.7% ಬಡ್ಡಿ ಸೌಲಭ್ಯ ಲಭ್ಯವಿದೆ. ಎನ್‌ಎಸ್‌ಸಿಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡುವ ಮೂಲಕ, ಐದು ವರ್ಷಗಳಲ್ಲಿ  44,903 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯಬಹುದು. ಎಂದರೆ, ಮೆಚ್ಯೂರಿಟಿ ಅವಧಿಯಲ್ಲಿ ಒಟ್ಟು 1,44,903 ರೂ. ಲಭ್ಯವಾಗಲಿದೆ. ಮಾತ್ರವಲ್ಲ, ಇದರಲ್ಲಿ ಹೂಡಿಮೆ ಮಾಡುವ ಮೂಲಕ 80C ಅಡಿಯಲ್ಲಿ ತೆರಿಗೆ ಪ್ರಯೋಜನವೂ ಲಭ್ಯವಿದೆ. 

ಇದನ್ನೂ ಓದಿ- New sim card rules: ಜುಲೈ 1ರಿಂದ ಸಿಮ್ ಕಾರ್ಡ್‌ಗೆ ಸಂಬಂಧಿಸಿದ ಈ ನಿಯಮದಲ್ಲಿ ಬದಲಾವಣೆ!

ಎನ್‌ಎಸ್‌ಸಿಯಲ್ಲಿ ಯಾರು ಹೂಡಿಕೆ ಮಾಡಬಹುದು?
ಯಾವುದೇ ಭಾರತೀಯ ನಾಗರೀಕರು ಎನ್‌ಎಸ್‌ಸಿಯಲ್ಲಿ ಸುಲಭವಾಗಿ ಖಾತೆ ತೆರೆಯಬಹುದು. ಒಂದೊಮ್ಮೆ ನೀವು ನಿಮ್ಮ ಮಕ್ಕಳ ಹೆಸರಿನಲ್ಲಿ ಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡಬೇಕಾದರೆ ಪೋಷಕರೇ ಅವರ ಹೆಸರಿನಲ್ಲಿ ಖರೀದಿಸಬಹುದು. ಆದಾಗ್ಯೂ, 10 ವರ್ಷಕ್ಕಿಂತ ಮೇಲ್ಪಟ್ಟ ಮಗು ಅವನ/ಅವಳ ಸ್ವಂತ ಹೆಸರಿನಲ್ಲಿ ಹೆಸರಿನಲ್ಲಿ ಎನ್‌ಎಸ್‌ಸಿ ಖಾತೆಯನ್ನು ತೆರೆಯಬಹುದು. ಇದರ ಮತ್ತೊಂದು ವಿಶೇಷತೆ ಎಂದರೆ ಎನ್‌ಎಸ್‌ಸಿಯಲ್ಲಿ . ಎರಡರಿಂದ ಮೂರು ಜನರು ಜಂಟಿ ಖಾತೆಯನ್ನು ಸಹ ತೆರೆಯಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News