PM Free Silai Machine Yojana: ಸರ್ಕಾರದಿಂದ ಉಚಿತವಾಗಿ ಹೊಲಿಗೆ ಯಂತ್ರ ಪಡೆಯಲು ಇಲ್ಲಿದೆ ಸುಲಭ ಮಾರ್ಗ

Pradhanmantri Free Silai Machine Yojana 2022: ಮಹಿಳೆಯರು ಮನೆಯಲ್ಲಿಯೇ ಕುಳಿತು ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಸರ್ಕಾರದಿಂದ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆಯಬಹುದು. ಇದರಿಂದ ಅವರು ಉತ್ತಮ ಆದಾಯವನ್ನು ಗಳಿಸಬಹುದು.  

Written by - Yashaswini V | Last Updated : Apr 5, 2022, 11:35 AM IST
  • ನಗರ ಮತ್ತು ಗ್ರಾಮೀಣ ಪ್ರದೇಶಗಳ ಆರ್ಥಿಕವಾಗಿ ದುರ್ಬಲ ಮಹಿಳೆಯರು ಮತ್ತು ಕಾರ್ಮಿಕ ಮಹಿಳೆಯರಿಗೆ ಈ ಸಹಾಯವನ್ನು ನೀಡಲಾಗುತ್ತದೆ.
  • ಈ ಯೋಜನೆಯಡಿ ಪ್ರತಿ ರಾಜ್ಯದ 50,000 ಮಹಿಳೆಯರು ಅನುಕೂಲವನ್ನು ಪಡೆಯಬಹುದು.
  • ಈ ಯೋಜನೆಯ ಪ್ರಯೋಜನವನ್ನು ಪಡೆಯಲು, ಮಹಿಳೆಯರು ಕೆಲವು ವಿಷಯಗಳನ್ನು ನೆನಪಿಡಬೇಕು.
PM Free Silai Machine Yojana: ಸರ್ಕಾರದಿಂದ ಉಚಿತವಾಗಿ ಹೊಲಿಗೆ ಯಂತ್ರ ಪಡೆಯಲು ಇಲ್ಲಿದೆ ಸುಲಭ ಮಾರ್ಗ  title=
Free Silai Machine Yojana

Pradhanmantri Free Silai Machine Yojana 2022: ದೇಶದ ಬಡ ಮತ್ತು ಕಾರ್ಮಿಕ ಮಹಿಳೆಯರಿಗೆ ಅನುಕೂಲವಾಗುವಂತೆ ಸರ್ಕಾರವು ಉಚಿತ ಹೊಲಿಗೆ ಯಂತ್ರಗಳನ್ನು ನೀಡುತ್ತಿದೆ. ಕಳೆದ ವರ್ಷಗಳಂತೆ ಈ ವರ್ಷವೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆಯಡಿ ಪ್ರಯೋಜನ ಪಡೆಯಲಿದ್ದಾರೆ. 

ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಹೊಲಿಗೆ ಯಂತ್ರವನ್ನು (Pradhanmantri Free Silai Machine Yojana) ಪಡೆದು ಮಹಿಳೆಯರು ಮನೆಯಲ್ಲಿಯೇ ಕುಳಿತು ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಉತ್ತಮ ಆದಾಯ ಗಳಿಸಬಹುದು. ವಾಸ್ತವವಾಗಿ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಆರ್ಥಿಕವಾಗಿ ದುರ್ಬಲ ಮಹಿಳೆಯರು ಮತ್ತು ಕಾರ್ಮಿಕ ಮಹಿಳೆಯರಿಗೆ ಸರ್ಕಾರದಿಂದ ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆಯಡಿ  ಈ ಸಹಾಯವನ್ನು ನೀಡಲಾಗುತ್ತದೆ. 

ಇದನ್ನೂ ಓದಿ- Mahindra: ಹೊಸ ಎಲೆಕ್ಟ್ರಿಕ್ ಆಲ್ಫಾ ಸಿಎನ್‌ಜಿ ಆಟೋ ಬಿಡುಗಡೆ ಮಾಡಿದ ಮಹೀಂದ್ರಾ

ಯೋಜನೆಯ ಲಾಭವನ್ನು ಯಾರು ಪಡೆಯಬಹುದು ಎಂದು ತಿಳಿಯಿರಿ:
ಈ ಯೋಜನೆಯಡಿ ಪ್ರತಿ ರಾಜ್ಯದ 50,000 ಮಹಿಳೆಯರು ಅನುಕೂಲವನ್ನು ಪಡೆಯಬಹುದು. ಈ ಯೋಜನೆಯ ಪ್ರಯೋಜನವನ್ನು ಪಡೆಯಲು, ಮಹಿಳೆಯರು ಕೆಲವು ವಿಷಯಗಳನ್ನು ನೆನಪಿಡಬೇಕು. 
>> ಉಚಿತ ಹೊಲಿಗೆ ಯಂತ್ರ (Free Sewing Machine) ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರ ವಯಸ್ಸು 20 ರಿಂದ 40 ವರ್ಷಗಳಾಗಿರಬೇಕು. 
>> ಈ ವಯಸ್ಸಿನ ಮಹಿಳೆಯರು ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. 
>> ಇದಲ್ಲದೆ, ಯೋಜನೆಯ ಲಾಭ ಪಡೆಯಲು ಉದ್ದೇಶಿಸಿರುವ ಮಹಿಳೆಯರ ಪತಿಯ ವಾರ್ಷಿಕ ಆದಾಯವು ರೂ. 12000 ಮೀರಿರಬಾರದು.

ಈ ರೀತಿ ಅರ್ಜಿ ಸಲ್ಲಿಸಬಹುದು:
* ಭಾರತ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮಹಿಳೆಯರು ಇದಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. 
* ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಅದರಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. 
* ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ,  ಅರ್ಜಿ ನಮೂನೆಯ ಫೋಟೊಕಾಪಿಯನ್ನು ಲಗತ್ತಿಸುವ ಮೂಲಕ ದಾಖಲೆಗಳನ್ನು ಸರ್ಕಾರಿ ಕಚೇರಿಗೆ ಸಲ್ಲಿಸಬೇಕು. 
* ಇದಾದ ಬಳಿಕ ಸರ್ಕಾರದ ವತಿಯಿಂದ ಅರ್ಜಿ ಪರಿಶೀಲಿಸಲಾಗುವುದು. ನೀವು ಒದಗಿಸಿರುವ ಎಲ್ಲಾ ಮಾಹಿತಿಗಳು ಸರಿಯಾಗಿದ್ದರೆ, ಸರ್ಕಾರದಿಂದ ನಿಮಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲಾಗುತ್ತದೆ.

ಇದನ್ನೂ ಓದಿ- Electricity Bill: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ, ಜನರ ಜೇಬಿಗೆ ಮತ್ತಷ್ಟು ಹೊರೆ

ಯೋಜನೆಯ ಲಾಭ ಪಡೆಯಲು ಈ ದಾಖಲೆಗಳು ಅವಶ್ಯಕ:
>> ಸಮುದಾಯ ಪ್ರಮಾಣಪತ್ರ
>> ಅರ್ಜಿದಾರ ಮಹಿಳೆಯ ಆಧಾರ್ ಕಾರ್ಡ್
>> ವಯಸ್ಸಿನ ಪ್ರಮಾಣಪತ್ರ
>> ಮೊಬೈಲ್ ಸಂಖ್ಯೆ
>> ಪಾಸ್‌ಪೋರ್ಟ್ ಗಾತ್ರದ ಫೋಟೋ
>> ಕುಟುಂಬದ ಆದಾಯ ಪ್ರಮಾಣಪತ್ರ
>> ಗುರುತಿನ ಚೀಟಿ
>> ಮಹಿಳೆ ಅಂಗವಿಕಲರಾಗಿದ್ದರೆ ಅಂಗವೈಕಲ್ಯದ ವೈದ್ಯಕೀಯ ಪ್ರಮಾಣಪತ್ರ
>> ಮಹಿಳೆ ವಿಧವೆಯಾಗಿದ್ದರೆ ಆಕೆಯ ನಿರ್ಗತಿಕ ವಿಧವೆ ಪ್ರಮಾಣಪತ್ರ
>> ಹೊಲಿಗೆ ತರಬೇತಿ ಪಡೆದಿರುವ ಪ್ರಮಾಣ ಪತ್ರ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News