ರೇಷನ್ ಕಾರ್ಡ್ ಇದ್ದರೆ ಉಚಿತ ರೇಷನ್ ಮಾತ್ರವಲ್ಲ, ಈ ಪ್ರಯೋಜನವೂ ಸಿಗುವುದು

Ration Card extra benefits : ಪಡಿತರ ಚೀಟಿ ಮೂಲಕ ಉಚಿತ ಮತ್ತು ಅಗ್ಗದ ದರದಲ್ಲಿ ಪಡಿತರ ಪಡೆಯುವುದು ಮಾತ್ರವಲ್ಲದೆ, ಅನೇಕ ಸೌಲಭ್ಯಗಳನ್ನು ಕೂಡಾ ಪಡೆಯಬಹುದಾಗಿದೆ.   ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಒಳಗೊಂಡಂತೆ ಅನೇಕ ಲಾಭ ಪಡೆಯಬಹುದಾಗಿದೆ. 

Written by - Ranjitha R K | Last Updated : Apr 20, 2023, 10:43 AM IST
  • ರೇಶನ್ ಕಾರ್ಡ್ ಮೂಲಕ ಉಚಿತ ಮತ್ತು ಅಗ್ಗದ ದರದಲ್ಲಿ ಆಹಾರ ಧಾನ್ಯ
  • ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಕೂಡಾ ಪಡೆಯಬಹುದು
  • ಜನರಿಗೆ ಸಿಗುತ್ತವೆ ಅನೇಕ ಸೌಲಭ್ಯಗಳು
ರೇಷನ್ ಕಾರ್ಡ್ ಇದ್ದರೆ ಉಚಿತ ರೇಷನ್ ಮಾತ್ರವಲ್ಲ,  ಈ ಪ್ರಯೋಜನವೂ  ಸಿಗುವುದು title=

Ration Card News : ನಿಮ್ಮಲ್ಲಿಯೂ ಪಡಿತರ ಚೀಟಿಯಿದ್ದು,  ಸರ್ಕಾರದಿಂದ ಪ್ರತಿ ತಿಂಗಳು ಉಚಿತ ರೇಷನ್ ಪಡೆಯುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ. ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ರೇಶನ್ ಕಾರ್ಡ್ ಮೂಲಕ ಬಡವರಿಗೆ ಉಚಿತ ಮತ್ತು ಅಗ್ಗದ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುತ್ತವೆ. ಆದರೆ ಪಡಿತರ ಚೀಟಿ ಮೂಲಕ ಉಚಿತ ಪಡಿತರ ಪಡೆಯುವುದು ಮಾತ್ರವಲ್ಲ, ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಒಳಗೊಂಡಂತೆ ಅನೇಕ ಲಾಭ ಪಡೆಯಬಹುದಾಗಿದೆ. 

ಜನರಿಗೆ  ಸಿಗುತ್ತವೆ ಅನೇಕ ಸೌಲಭ್ಯಗಳು :
ಪಡಿತರ ಚೀಟಿ ಮೂಲಕ ಉಚಿತ ಮತ್ತು ಅಗ್ಗದ ದರದಲ್ಲಿ ಪಡಿತರ ಪಡೆಯುವುದು ಮಾತ್ರವಲ್ಲದೆ, ಅನೇಕ ಸೌಲಭ್ಯಗಳನ್ನು ಕೂಡಾ ಪಡೆಯಬಹುದಾಗಿದೆ. ರೇಷನ್ ಕಾರ್ಡ್ ಅನ್ನು ವಿಳಾಸ ಪುರಾವೆಯಾಗಿ ಬಳಸಬಹುದು. ಬ್ಯಾಂಕ್ ಸಂಬಂಧಿತ ಕೆಲಸ ಅಥವಾ ಗ್ಯಾಸ್ ಸಂಪರ್ಕವನ್ನು ಪಡೆಯಬೇಕಾದರೆ ಪಡಿತರ ಚೀಟಿಯನ್ನು ಬಳಸಬಹುದು. ಮತದಾರರ ಗುರುತಿನ ಚೀಟಿ ಮಾಡುವ ಸಮಯದಲ್ಲಿಯೂ ಗುರುತಿನ ಚೀಟಿ ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ರೇಷನ್ ಕಾರ್ಡ್ ಬಳಸಿದರೆ ಸಾಕು.  

ಇದನ್ನೂ ಓದಿ : ದೇಶದಾದ್ಯಂತ ಹೂಡಿಕೆ ಮಾಡಲು ಆಪಲ್ ಬದ್ಧ- ಪ್ರಧಾನಿ ಮೋದಿಗೆ ಟೀಮ್ ಕುಕ್ ಭರವಸೆ

ಪಡಿತರ ಚೀಟಿಯನ್ನು ಯಾರು ಪಡೆಯಬಹುದು? : 
ನಿಮ್ಮ ಕುಟುಂಬದ ಆದಾಯವು 27 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿದ್ದರೆ, ನೀವು ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಅರ್ಹತೆಯ ಆಧಾರದ ಮೇಲೆ ಬಡತನ ರೇಖೆಗಿಂತ ಮೇಲಿನ (ಎಪಿಎಲ್), ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡ್‌ಗಳು ಮತ್ತು ಅಂತ್ಯೋದಯ ಪಡಿತರ ಚೀಟಿಗಳನ್ನು (ಎಎವೈ) ಸರ್ಕಾರದಿಂದ ಪಡೆಯಬಹುದು. 

ಆನ್‌ಲೈನ್ ಮೂಲಕ  ಪಡಿತರ ಚೀಟಿ ಪಡೆಯಬೇಕಾದಲ್ಲಿhttps://ahara.kar.nic.in ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲಿ, ಅರ್ಜಿ ಸಲ್ಲಿಸಿದ ಕೆಲವು ದಿನಗಳ ನಂತರ, ಪಡಿತರ ಚೀಟಿ ನಿಮ್ಮ ವಿಳಾಸಕ್ಕೆ ತಲುಪುತ್ತದೆ. ಪಡಿತರ ಚೀಟಿ ಮಾಡಲು ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್‌ಪೋರ್ಟ್ ಮತ್ತು ಯಾವುದೇ ಐ ಕಾರ್ಡ್, ಹೆಲ್ತ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅನ್ನು ನೀಡಬಹುದು.

ಇದನ್ನೂ ಓದಿ : Akshaya Tritiya 2023: ಅಕ್ಷಯ ತೃತೀಯಾ ದಿನ ಖರೀದಿಸಿದ ಚಿನ್ನದಿಂದ ನೀವು ಹೇಗೆ ಲಾಭ ಪಡೆಯಬಹುದು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News