ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 20,500 ರೂಪಾಯಿ ! ಕೇಂದ್ರ ಹಣಕಾಸು ಸಚಿವರ ಘೋಷಣೆ

Senior Citizen Saving Scheme :ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಜುಲೈನಿಂದ ಸೆಪ್ಟೆಂಬರ್ ವರೆಗೆ ಬಡ್ಡಿದರವನ್ನು ಶೇಕಡಾ 8.2 ಕ್ಕೆ ನಿಗದಿಪಡಿಸಲಾಗಿದೆ. ಇಲ್ಲಿ ಮಾಡುವ ಹೂಡಿಕೆ ಮೇಲೆ ಮಾಸಿಕವಾಗಿ ಮಾಸಿಕ ಆಧಾರದಲ್ಲಿ ನೋಡಿದರೆ 20, 500 ರೂಪಾಯಿ ಬಡ್ಡಿ ಸಿಗುತ್ತದೆ. 

Written by - Ranjitha R K | Last Updated : Jul 21, 2023, 08:56 AM IST
  • FD ಮತ್ತು ಸಣ್ಣ ಉಳಿತಾಯ ಯೋಜನೆಗಳು ಕಡಿಮೆ ಅಪಾಯದ ಹೂಡಿಕೆ ಆಯ್ಕೆ
  • ಹೂಡಿಕೆ ಮಿತಿ 15 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ
  • ಈಗ ದೊರೆಯಲಿದೆ 20500 ರೂ. ಲಾಭ
ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 20,500 ರೂಪಾಯಿ ! ಕೇಂದ್ರ ಹಣಕಾಸು ಸಚಿವರ ಘೋಷಣೆ  title=

Senior Citizen Saving Scheme : ಬ್ಯಾಂಕ್ FD ಮತ್ತು ಸಣ್ಣ ಉಳಿತಾಯ ಯೋಜನೆಗಳು ಎರಡು ಕಡಿಮೆ ಅಪಾಯದ ಹೂಡಿಕೆ ಆಯ್ಕೆಗಳಾಗಿವೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಲಭ್ಯವಿರುವ ಬಡ್ಡಿ ದರವು ಪ್ರಸ್ತುತ ದಾಖಲೆ ಮಟ್ಟದಲ್ಲಿದೆ. ಹೂಡಿಕೆಗಾಗಿ ಈ ಆಯ್ಕೆಯನ್ನು ಪರಿಗಣಿಸುವ ಮೂಲಕ  ಹೆಚ್ಚಿನ ಲಾಭವನ್ನು ಪಡೆಯಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಜುಲೈನಿಂದ ಸೆಪ್ಟೆಂಬರ್ ವರೆಗೆ ಬಡ್ಡಿದರವನ್ನು ಶೇಕಡಾ 8.2 ಕ್ಕೆ ನಿಗದಿಪಡಿಸಲಾಗಿದೆ.

ಹೂಡಿಕೆ ಮಿತಿ 15 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ : 
ಈ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಿರಿಯ ನಾಗರಿಕರಿಗೆ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತರುವುದರೊಂದಿಗೆ ದೊಡ್ಡ ಘೋಷಣೆ ಮಾಡಿದ್ದರು. ಇದರ ಅಡಿಯಲ್ಲಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (ಎಸ್‌ಸಿಎಸ್‌ಎಸ್) ಹೂಡಿಕೆ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಬದಲಾವಣೆಯಿಂದ ಹಿರಿಯ ನಾಗರಿಕರಿಗೆ ಮೊದಲಿಗಿಂತ ಹೆಚ್ಚಿನ ಹೂಡಿಕೆಯ ಲಾಭ ಸಿಗುತ್ತಿದೆ. ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಬಡ್ಡಿದರವನ್ನು ಶೇಕಡಾ 8.2 ಕ್ಕೆ ಹೆಚ್ಚಿಸಲಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದು ಶೇ 8ರಷ್ಟಿತ್ತು. ಅದಕ್ಕೂ ಮೊದಲು ಅದರ ಬಡ್ಡಿ ದರ ಶೇ.7.6ರಷ್ಟಿದ್ದು, ಹೂಡಿಕೆಯ ಮಿತಿ 15 ಲಕ್ಷ ರೂ.ವಾಗಿತ್ತು. 

ಇದನ್ನೂ ಓದಿ : Indian Railways: ಇನ್ಮುಂದೆ ರೈಲಿನಲ್ಲಿ ಸಿಗಲಿದೆ 20 ರೂ.ಗೆ ಊಟ, ತಿಂಡಿ, 3 ರೂ.ಗೆ ನೀರು!

ಮೊದಲು ಪ್ರತಿ ತಿಂಗಳು 9,500 ಲಾಭ :
ಗರಿಷ್ಠ ಹೂಡಿಕೆ ಮಿತಿಯನ್ನು ಹೆಚ್ಚಿಸಿ ಬಡ್ಡಿದರವನ್ನು ಹೆಚ್ಚಿಸಿದ್ದರಿಂದ ಹಿರಿಯ ನಾಗರಿಕರು ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಗಳಿಸುವ ಆದಾಯವು ಮೊದಲಿಗಿಂತ ದುಪ್ಪಟ್ಟಾಗಿದೆ. ಈ ಮೊದಲು, ಯೋಜನೆಯಲ್ಲಿ 15 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದಾಗ, 7.6 ಪ್ರತಿಶತ ಬಡ್ಡಿಯಂತೆ ಮೆಚ್ಯುರಿಟಿ ವೇಳೆ 20.70 ಲಕ್ಷ ರೂ. ಸಿಗುತ್ತಿತ್ತು.  ಅಂದರೆ ವಾರ್ಷಿಕವಾಗಿ ಲೆಕ್ಕ ಹಾಕಿದರೆ  1.14 ಲಕ್ಷ ಮತ್ತು ಮಾಸಿಕವಾಗಿ ನೋಡಿದರೆ  9500 ರೂ.

ಈಗ ದೊರೆಯಲಿದೆ 20500 ರೂ. ಲಾಭ  : 
ಹೂಡಿಕೆಯ ಮಿತಿಯನ್ನು 30 ಲಕ್ಷಕ್ಕೆ ಹೆಚ್ಚಿಸಿ ಮತ್ತು ಬಡ್ಡಿದರವನ್ನು ಶೇ.8.2ಕ್ಕೆ ಏರಿಸಿದ ಪರಿಣಾಮ   ಐದು ವರ್ಷಗಳ ಮೆಚ್ಯೂರಿಟಿ ಅವಧಿಯಲ್ಲಿ 12.30 ಲಕ್ಷದ ಬಡ್ಡಿಯೊಂದಿಗೆ ಒಟ್ಟು 42.30 ಲಕ್ಷ ರೂಪಾಯಿ ಸಿಗಲಿದೆ. ಇದನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕ ಹಾಕಿದರೆ, 2 ಲಕ್ಷ 46 ಸಾವಿರ ರೂಪಾಯಿ ಮತ್ತು ಮಾಸಿಕ ಆಧಾರದಲ್ಲಿ ನೋಡಿದರೆ 20, 500 ರೂಪಾಯಿ ಆಗುತ್ತದೆ. 

ಇದನ್ನೂ ಓದಿ : ಜುಲೈ ಅಂತ್ಯಕ್ಕೂ ಮುನ್ನವೇ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಈ ದಿನ ಹೆಚ್ಚಾಗಲಿದೆ ವೇತನ!

ಏನಿದು 'ಹಿರಿಯ ನಾಗರಿಕ ಉಳಿತಾಯ ಯೋಜನೆ'  ? :
ನಿವೃತ್ತಿಯ ನಂತರ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ದೇಶದ ಹಿರಿಯ ನಾಗರಿಕರಿಗಾಗಿ ಆರಂಭಿಸಲಾಗಿದೆ. ಈ ಯೋಜನೆಯಡಿ, ಹಿರಿಯ ನಾಗರಿಕರು ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. 

1.5 ಲಕ್ಷದವರೆಗಿನ ತೆರಿಗೆ ರಿಯಾಯಿತಿ : 
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ, ಸರ್ಕಾರವು ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ ದರವನ್ನು ಪರಿಷ್ಕರಿಸುತ್ತದೆ. ಇದರಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ  ಬೇರೆ ಬೇರೆ ಖಾತೆ ಅಥವಾ ಜಂಟಿ ಖಾತೆಯನ್ನು ತೆರೆಯಬಹುದು. ವಿಶೇಷವೆಂದರೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ, ಇದರಲ್ಲಿ ಹೂಡಿಕೆಯ ಮೇಲೆ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News