ಎಫ್‌ಡಿ ಮೇಲೆ ಲೋನ್ ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ ಈ 7 ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ

Loan On FD: ತುರ್ತು ಹಣದ ಅಗತ್ಯತೆ ಎದುರಾದಾಗ ಬೇರೆಡೆ ಸಾಲ ಸೌಲಭ್ಯ ಲಭ್ಯವಿಲ್ಲದಿದ್ದಾಗ ಎಫ್‌ಡಿ ಇಟ್ಟಿರುವವರು ತಮ್ಮ ಸ್ಥಿರ ಠೇವಣಿ ಮೇಲೆ ಸಾಲ ತೆಗೆದುಕೊಳ್ಳಲು ಯೋಚಿಸುತ್ತಾರೆ. ಆದರೆ, ಈ ಸಂದರ್ಭದಲ್ಲಿ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ವಹಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ನಷ್ಟ ಅನುಭವಿಸಬೇಕಾಗಬಹುದು.  

Written by - Yashaswini V | Last Updated : Feb 8, 2024, 10:46 AM IST
  • ಎಫ್‌ಡಿ/ ಸ್ಥಿರ ಠೇವಣಿಯು ಜನರಿಗೆ ಹೂಡಿಕೆಯ ವಿಶ್ವಾಸಾರ್ಹ ಸಾಧನವಾಗಿದೆ.
  • ಇತ್ತೀಚಿನ ದಿನಗಳಲ್ಲಿ, ಅನೇಕ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮೇಲೆ ಉತ್ತಮ ಬಡ್ಡಿ ಸೌಲಭ್ಯವೂ ಲಭ್ಯವಿದೆ.
  • ಆದರೆ ಇದನ್ನು ಹೊರತುಪಡಿಸಿ, ಎಫ್‌ಡಿಯಲ್ಲಿ ಇನ್ನೂ ಅನೇಕ ಸೌಲಭ್ಯಗಳು ಲಭ್ಯವಿದೆ.
ಎಫ್‌ಡಿ ಮೇಲೆ ಲೋನ್ ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ ಈ 7 ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ  title=

Loan On FD: ಸುರಕ್ಷಿತ ಮತ್ತು ಖಾತರಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುವ ಜನರು ಖಂಡಿತವಾಗಿಯೂ ತಮ್ಮ ಪೋರ್ಟ್‌ಫೋಲಿಯೊದಲ್ಲಿ  ಸ್ಥಿರ ಠೇವಣಿಯನ್ನು ಆಯ್ಕೆ ಮಾಡುತ್ತಾರೆ. ಎಫ್‌ಡಿ/ ಸ್ಥಿರ ಠೇವಣಿಯು  ಜನರಿಗೆ ಹೂಡಿಕೆಯ ವಿಶ್ವಾಸಾರ್ಹ ಸಾಧನವಾಗಿದೆ.  ಇತ್ತೀಚಿನ ದಿನಗಳಲ್ಲಿ, ಅನೇಕ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮೇಲೆ ಉತ್ತಮ ಬಡ್ಡಿ ಸೌಲಭ್ಯವೂ ಲಭ್ಯವಿದೆ. ಆದರೆ ಇದನ್ನು ಹೊರತುಪಡಿಸಿ, ಎಫ್‌ಡಿಯಲ್ಲಿ ಇನ್ನೂ ಅನೇಕ ಸೌಲಭ್ಯಗಳು ಲಭ್ಯವಿದೆ. ಅವುಗಳಲ್ಲಿ ಎಫ್‌ಡಿ ಮೇಲೆ ಸಾಲ ತೆಗೆದುಕೊಳ್ಳುವುದು ಕೂಡ ಒಂದಾಗಿದೆ. 

ಸ್ಥಿರ ಠೇವಣಿದಾರರಿಗೆ ತುರ್ತು ಹಣದ ಅಗತ್ಯತೆ ಎದುರಾದಾಗ ಅಂತಹ ಸಂದರ್ಭದಲ್ಲಿ ಬೇರೆಡೆ ಸಾಲ ಸೌಲಭ್ಯ ಲಭ್ಯವಿಲ್ಲದಿದ್ದಾಗ ಅವರು ತಮ್ಮ ಎಫ್‌ಡಿ ಮೇಲೆ ಲೋನ್ ತೆಗೆದುಕೊಳ್ಳುವುದನ್ನು ಪರಿಗಣಿಸುತ್ತಾರೆ.  ಆದರೆ ಎಫ್‌ಡಿ ವಿರುದ್ಧ ಸಾಲ ತೆಗೆದುಕೊಳ್ಳುವ ಮೊದಲು ಕೆಲವು ವಿಷಯಗಳನ್ನು ತಿಳಿದಿರಬೇಕು. ಇದರಿಂದ ನೀವು ಭವಿಷ್ಯದಲ್ಲಿ ಯಾವುದೇ ರೀತಿಯ ನಷ್ಟದಿಂದ ನಿಮ್ಮನ್ನು ಉಳಿಸಿಕೊಳ್ಳಬಹುದು. 

ಆರ್ಥಿಕ ತಜ್ಞರ ಪ್ರಕಾರ, ಎಫ್‌ಡಿ ಮೇಲೆ ಲೋನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಠೇವಣಿದಾರರು ಏಳು ಪ್ರಮುಖ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಆ ಪ್ರಮುಖ ವಿಷಯಗಳು ಯಾವುವು ಎಂದು ನೋಡುವುದಾದರೆ... 

ಎಫ್‌ಡಿ ಮೇಲೆ ಲೋನ್ ತೆಗೆದುಕೊಳ್ಳುವ ಮೊದಲು ಈ 7 ವಿಷಯಗಳ ಬಗ್ಗೆ ವಿಶೇಷ ಕಾಳಜಿವಹಿಸಿ:- 
* ಸಾಲದ ಮೊತ್ತ: 

ನೀವು ಎಫ್‌ಡಿ ಮೇಲೆ ಲೋನ್ ತೆಗೆದುಕೊಳ್ಳಲು ಬಯಸಿದರೆ ನಿಮ್ಮ ಠೇವಣಿಯ ಒಟ್ಟು ಮೊತ್ತದಲ್ಲಿ 85%ಹಣವನ್ನು ಸಾಲವಾಗಿ ಪಡೆಯಬಹುದು ಎಂಬುದನ್ನು ನೆನಪಿಡಿ. 

ಇದನ್ನೂ ಓದಿ- Pension Scheme: ರೈತರ ಮೇಲೆ ಕೃಪೆ ತೋರಿದ ಈ ರಾಜ್ಯ ಸರ್ಕಾರ, ಪ್ರತಿತಿಂಗಳು ನೀಡಲಿದೆ 3000 ಪಿಂಚಣಿ!

* ಬಡ್ಡಿ ದರ: 
ನೀವು ಬ್ಯಾಂಕ್‌ನಿಂದ ಎಫ್‌ಡಿಯಲ್ಲಿ ಪಡೆಯುವ ಶೇಕಡಾವಾರು ಸಾಲಕ್ಕಿಂತ ಗರಿಷ್ಠ 1.5% ರಿಂದ 2% ರಷ್ಟು ಹೆಚ್ಚಿನ ಬಡ್ಡಿ ದರದಲ್ಲಿ ಸಾಲವನ್ನು ಪಡೆಯುತ್ತೀರಿ. ನೀವು ಎಫ್‌ಡಿಯಲ್ಲಿ ಶೇಕಡಾ 7 ಬಡ್ಡಿಯನ್ನು ಪಡೆಯುತ್ತಿದ್ದೀರಿ ಎಂದು ಭಾವಿಸೋಣ. ನೀವು ಎಫ್‌ಡಿ ಮೇಲೆ ಪಡೆಯುವ ಸಾಲದ ಮೇಲೆ  ಗರಿಷ್ಠ 9 ಶೇಕಡಾ ಬಡ್ಡಿಯನ್ನು ವಿಧಿಸಬಹುದು. 

* ಖಾತರಿದಾರರ ಅಗತ್ಯವಿಲ್ಲ: 
ಎಫ್‌ಡಿ ಸಾಲವು ಸುರಕ್ಷಿತ ಸಾಲದ ವರ್ಗದಲ್ಲಿ ಬರುತ್ತದೆ. ಏಕೆಂದರೆ ಅದನ್ನು ತೆಗೆದುಕೊಳ್ಳುವಾಗ, ಬ್ಯಾಂಕ್‌ಗಳು ನಿಮ್ಮ ಎಫ್‌ಡಿಯನ್ನು ಭದ್ರತೆ/ಖಾತರಿಯಾಗಿ ಪ್ರತಿಜ್ಞೆ ಮಾಡುತ್ತವೆ. ಆದರೆ ನೀವು ಎಫ್‌ಡಿ ಮೇಲೆ ಸಾಲ ಪಡೆಯುವಾಗ ಯಾವುದೇ ರೀತಿಯ ಖಾತರಿದಾರರ ಅಗತ್ಯವಿಲ್ಲ. ನೀವು ಸಾಲವನ್ನು ಸಮಯಕ್ಕೆ ಮರುಪಾವತಿಸಲು ಸಾಧ್ಯವಾಗದಿದ್ದರೆ, ಆ ಸಾಲವು ನಿಮ್ಮ ಎಫ್‌ಡಿ ಮೊತ್ತದೊಂದಿಗೆ ಕಡಿತಗೊಳ್ಳುತ್ತದೆ. 

* ಪ್ರಕ್ರಿಯೆ ಶುಲ್ಕವಿಲ್ಲ: 
ಎಫ್‌ಡಿಯಲ್ಲಿ ನೀವು ಎಷ್ಟೇ ಮೊತ್ತವನ್ನು ಸಾಲವಾಗಿ ಪಡೆದರೂ ಕೂಡ ಯಾವುದೇ ರೀತಿಯ ಪ್ರಕ್ರಿಯೆ ಶುಲ್ಕವನ್ನು ಪಾವತಿಸಬೇಕಾಗಿಲ್ಲ.  ಸಾಲವಾಗಿ ತೆಗೆದುಕೊಂಡ ಮೊತ್ತಕ್ಕೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ನೀವು ಎಫ್‌ಡಿ ವಿರುದ್ಧ ಸಾಲವನ್ನು ತೆಗೆದುಕೊಳ್ಳಲು ಹೋದರೆ ಇದನ್ನು ನೆನಪಿನಲ್ಲಿಡಿ. 

ಇದನ್ನೂ ಓದಿ- RBI MPC Meeting: ಇನ್ನೆರಡು ದಿನಗಳಲ್ಲಿ RBI ತಿಳಿಸಲಿದೆ ತನ್ನ ನಿರ್ಧಾರ ! ಕಡಿಮೆಯಾಗುವುದೇ EMI ಹೊರೆ ?

* ಎಫ್‌ಡಿ ಅವಧಿ: 
ನೀವು ಎಫ್‌ಡಿ ಮೇಲೆ ತೆಗೆದುಕೊಳ್ಳುವ ಲೋನ್ ಅವಧಿಯು ನಿಮ್ಮ ಎಫ್‌ಡಿ ಅವಧಿಯನ್ನು 
ಅವಲಂಬಿಸಿರುತ್ತದೆ. ಎಫ್‌ಡಿ ವಿರುದ್ಧ ನೀವು ಯಾವುದೇ ಸಾಲವನ್ನು ತೆಗೆದುಕೊಂಡಿದ್ದರೂ, ಅದನ್ನು ಸ್ಥಿರ ಠೇವಣಿಯ ಮುಕ್ತಾಯದ ಅವಧಿಗೂ ಮೊದಲೇ ಮರುಪಾವತಿ ಮಾಡುವುದನ್ನು ಪರಿಗಣಿಸಿ. 

* ಇಂತಹ ಎಫ್‌ಡಿಗಳ ಮೇಲೆ ಸಾಲ ಸೌಲಭ್ಯ ಲಭ್ಯವಿಲ್ಲ: 
ಹಿರಿಯ ನಾಗರಿಕರು ಸೇರಿದಂತೆ ಯಾವುದೇ ಎಫ್‌ಡಿ ಖಾತೆದಾರರು ಸ್ಥಿರ ಠೇವಣಿ ವಿರುದ್ಧ ಸಾಲದ ಸೌಲಭ್ಯವನ್ನು ಪಡೆಯಬಹುದು. ಆದರೆ ಅಪ್ರಾಪ್ತರ ಹೆಸರಿನಲ್ಲಿ ಸಾಲದ ಮೊತ್ತವನ್ನು ಹಿಂಪಡೆಯುವಂತಿಲ್ಲ. ಇದಲ್ಲದೆ, 5 ವರ್ಷಗಳ ಅವಧಿಯೊಂದಿಗೆ ತೆರಿಗೆ ಉಳಿಸುವ ಸ್ಥಿರ ಠೇವಣಿಗಳಲ್ಲಿ ಹಣವನ್ನು ಠೇವಣಿ ಮಾಡುವ ಹೂಡಿಕೆದಾರರು ಸಹ ಈ ಸಾಲವನ್ನು ಪಡೆಯಲು ಸಾಧ್ಯವಿಲ್ಲ.

* ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ:
ಸಾಮಾನ್ಯವಾಗಿ, ಎಫ್‌ಡಿ ವಿರುದ್ಧ ತೆಗೆದುಕೊಂಡ ಸಾಲದ ಆರಂಭಿಕ ಮರುಪಾವತಿಗೆ ಯಾವುದೇ ಶುಲ್ಕವನ್ನು ತೆಗೆದುಕೊಳ್ಳಲಾಗುವುದಿಲ್ಲ. ಆದರೆ ಇನ್ನೂ, ಸಾಲವನ್ನು ತೆಗೆದುಕೊಳ್ಳುವಾಗ, ನೀವು ಷರತ್ತುಗಳನ್ನು ಎಚ್ಚರಿಕೆಯಿಂದ ಓದಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News