ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಇಂದೇ ಕೊನೆಯ ಅವಕಾಶ

ಒಂದು ಗ್ರಾಂ ಚಿನ್ನಕ್ಕೆ 4777 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಅಂದರೆ ಹತ್ತು ಗ್ರಾಂ ಚಿನ್ನದ ಬೆಲೆ 47,770 ರೂಪಾಯಿಗಳು.  ಆನ್ ಲೈನ್ ಮೂಲಕ ಡಿಜಿಟಲ್ ಪೇಮೆಂಟ್  ಮಾಡಿ ಖರೀಸಿದರೆ, ಪ್ರತಿ ಗ್ರಾಮ್‍ಗೆ 50 ರೂಪಾಯಿ ಡಿಸ್ಕೌಂಟ್ ಕೂಡಾ ಸಿಗಲಿದೆ.  

Written by - Ranjitha R K | Last Updated : May 21, 2021, 10:49 AM IST
  • ಕಡಿಮೆ ಬೆಲೆಯಲ್ಲಿ ಚಿನ್ನ ಖರೀದಿಗೆ ಇಂದೇ ಕೊನೆಯ ಅವಕಾಶ
  • ಸಾವರಿನ್ ಗೋಲ್ಡ್ ಬಾಂಡ್ ಖರೀದಿ ಇಂದಿಗೆ ಮುಕ್ತಾಯವಾಗಲಿದೆ
  • ಮೊದಲ ಕಂತಿನ ಖರೀದಿ ಮೇ 17ಕ್ಕೆ ಆರಂಭವಾಗಿತ್ತು
ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಇಂದೇ ಕೊನೆಯ ಅವಕಾಶ title=
ಕಡಿಮೆ ಬೆಲೆಯಲ್ಲಿ ಚಿನ್ನ ಖರೀದಿಗೆ ಇಂದೇ ಕೊನೆಯ ಅವಕಾಶ (file photo)

ನವದೆಹಲಿ : ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಇಂದೇ ಕೊನೆಯ ಅವಕಾಶ. ಕೇಂದ್ರ ಸರ್ಕಾರವು 2021-22ರ ಸಾಲಿನ ಸಾವರಿನ್ ಗೋಲ್ಡ್ ಬಾಂಡಿನ (Sovereign Gold Bond) ಮೊದಲ ಸೀರಿಸ್ ಇಶ್ಯೂ ಪ್ರೈಸ್ ಜಾರಿ ಮಾಡಿದೆ. ಇಂದಿಗೆ ಈ ಖರೀದಿ ಮುಕ್ತಾಯವಾಗಲಿದೆ. ಮೇ-ಸೆಪ್ಟಂಬರ್ ಅವಧಿಯಲ್ಲಿ ಆರು ಕಂತುಗಳಲ್ಲಿ ಸಾವರಿನ್ ಗೋಲ್ಡ್ ಬಾಂಡ್ (Sovereign Gold Bond) ಅನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತದೆ. ಇದರ ಮೊದಲ ಕಂತಿನ ಖರೀದಿ ಮೇ 17ರಂದು ಆರಂಭವಾಗಿತ್ತು. ಮೇ 25, 2021ರಂದು ಅದರ ಸೆಟಲ್ ಮೆಂಟ್ ಆಗುತ್ತದೆ. 

ಕಡಿಮೆ ಬೆಲೆಗೆ ಸಿಗಲಿದೆ ಚಿನ್ನ : 
ಒಂದು ಗ್ರಾಂ ಚಿನ್ನಕ್ಕೆ 4777 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಅಂದರೆ ಹತ್ತು ಗ್ರಾಂ ಚಿನ್ನದ ಬೆಲೆ 47,770 ರೂಪಾಯಿಗಳು.  ಆನ್ ಲೈನ್ (Online) ಮೂಲಕ ಡಿಜಿಟಲ್ ಪೇಮೆಂಟ್ (Digital payment) ಮಾಡಿ ಖರೀಸಿದರೆ, ಪ್ರತಿ ಗ್ರಾಮ್‍ಗೆ 50 ರೂಪಾಯಿ ಡಿಸ್ಕೌಂಟ್ ಕೂಡಾ ಸಿಗಲಿದೆ. ಅಂದರೆ ಹತ್ತು ಗ್ರಾಂ ಚಿನ್ನ 47270ರೂ ಗೆ ಸಿಗಲಿದೆ. ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 48,500 ರೂಗಳಷ್ಟಿದೆ. ಹಾಗಾದರೆ, ಸಾವರಿನ್ ಗೋಲ್ಡ್ ಬಾಂಡಿನ (Sovereign Gold Bond) ಮೂಲಕ ಚಿನ್ನ ಖರೀದಿ ಮಾಡಿದರೆ 1,230 ರೂಗಳ ಲಾಭವಾಗಲಿದೆ. 

ಇದನ್ನೂ ಓದಿ : Bank Alert‌ : 3 ದಿನ 'SBI ಇಂಟರ್ನೆಟ್ ಬ್ಯಾಂಕಿಂಗ್ UPI, YONO ಬಂದ್ : ಇಲ್ಲಿದೆ ಸಂಪೂರ್ಣ ಮಾಹಿತಿ

ಎಲ್ಲಿಂದ ಖರೀಸಬಹುದು ?
ನೀವು ಕೂಡಾ ಸಾವರಿನ್ ಗೋಲ್ಡ್ ಬಾಂಡಿನ ಮೇಲೆ ಹೂಡಿಕೆ ಮಾಡುವುದಾದರೆ ಎಲ್ಲಾ ಬ್ಯಾಂಕ್ (Bank), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ  (SHCIL), ಅಂಚೆ ಕಚೇರಿ, ಮಾನ್ಯತೆ ಪಡೆದ ಷೇರು ಪೇಟೆಗಳು, ಬಿಎಸ್‍ಇ (BSE ) ಮತ್ತು ಎನ್‍ಎಸ್‍ಇ ಗಳಲ್ಲಿ (NSE) ಈ ಬಾಂಡ್ ಗಳು ಲಭ್ಯ ಇದೆ.  ಸಣ್ಣ ಫೈನಾನ್ಸ್ ಬ್ಯಾಂಕ್ ಮತ್ತು ಪೇಮೆಂಟ್ ಬ್ಯಾಂಕ್ ಗಳಲ್ಲಿ ಇದರ ಮಾರಾಟ ನಡೆಯುವುದಿಲ್ಲ. 

ಹೂಡಿಕೆ ಮಿತಿ ಎಷ್ಟು..?
ಸಾವರಿನ್ ಗೋಲ್ಡ್ ಬಾಂಡ್ ಅವಧಿ ಎಂಟು ವರ್ಷಗಳದ್ದಾಗಿದೆ.  ಒಂದು ವಿತ್ತೀಯ ವರ್ಷದಲ್ಲಿ ಓರ್ವ ವ್ಯಕ್ತಿ ಅಥವಾ ಅವಿಭಜಿತ ಕುಟುಂಬ ಕನಿಷ್ಠ 1 ಗ್ರಾಂ ಮತ್ತು ಗರಿಷ್ಠ ನಾಲ್ಕು ಕಿಲೋ ಗ್ರಾಂ ಚಿನ್ನದ ಮೇಲೆ ಹೂಡಿಕೆ (Investment) ಮಾಡಬಹುದಾಗಿದೆ. ಟ್ರಸ್ಟ್ ಮುಂತಾದ ಸಂಸ್ಥೆಗಳು 20 ಕೆಜಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದಾಗಿದೆ. ಈ ಬಾಂಡ್ ಖರೀದಿಸಲು ಕೆವೈಸಿ ಇರುವುದು ಅಗತ್ಯ. 

ಇದನ್ನೂ ಓದಿ : Work from home ನಿಂದ ಬೇಸತ್ತಿದ್ದರೆ IRCTC ನೀಡುತ್ತಿದೆ ವರ್ಕ್ ಫ್ರಮ್ ಹೊಟೇಲ್ ಆಫರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News