Best Selling Car: ಫೆಬ್ರವರಿಯಲ್ಲಿ ಅತಿಹೆಚ್ಚು ಮಾರಾಟವಾಗಿರುವ ಟಾಪ್ 10 ಕಾರುಗಳು

ಹೆಚ್ಚು ಮಾರಾಟವಾಗುವ ಕಾರುಗಳು: ಫೆಬ್ರವರಿ 2023ರಲ್ಲಿ ಮಾರಾಟವಾದ ಟಾಪ್-10 ಕಾರುಗಳಲ್ಲಿ ಮಾರುತಿ ಸುಜುಕಿಯೇ 7 ಮಾದರಿಗಳನ್ನು ಹೊಂದಿದೆ. ದೇಶದಲ್ಲಿ ಅತಿಹೆಚ್ಚು ಮಾರಾಟವಾದ 10 ಕಾರುಗಳ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Mar 22, 2023, 08:31 AM IST
  • 2023ರ ಫೆಬ್ರವರಿಯಲ್ಲಿ ದೇಶದಲ್ಲಿಯೇ ಅತಿಹೆಚ್ಚು ಮಾರಾಟವಾದ ಟಾಪ್-10 ಕಾರುಗಳು
  • ಅತಿಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪೈಕಿ ಮಾರುತಿ ಸುಜುಕಿ 7 ಮಾದರಿಗಳನ್ನು ಹೊಂದಿದೆ
  • ಟಾಟಾ ನೆಕ್ಸಾನ್, ಟಾಟಾ ಪಂಚ್ ಮತ್ತು ಹ್ಯುಂಡೈ ಕ್ರೆಟಾಗೂ ಟಾಪ್ 10ನಲ್ಲಿ ಸ್ಥಾನ
Best Selling Car: ಫೆಬ್ರವರಿಯಲ್ಲಿ ಅತಿಹೆಚ್ಚು ಮಾರಾಟವಾಗಿರುವ ಟಾಪ್ 10 ಕಾರುಗಳು title=
ಟಾಪ್-10 ಕಾರುಗಳು

ನವದೆಹಲಿ: 2023ರ ಫೆಬ್ರವರಿಯಲ್ಲಿ ಮಾರಾಟವಾದ ಟಾಪ್-10 ಕಾರುಗಳ ಪೈಕಿ ಮಾರುತಿ ಸುಜುಕಿ 7 ಮಾದರಿಗಳನ್ನು ಹೊಂದಿದೆ. ಟಾಪ್-10 ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಟಾಪ್ 6 ಕಾರುಗಳು ಮಾರುತಿ ಸುಜುಕಿಯದ್ದೇ ಆಗಿವೆ. ಇದರ ನಂತರ ಟಾಟಾದ ನೆಕ್ಸಾನ್ 7ನೇ ಸ್ಥಾನದಲ್ಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: BIG Update: ದೇಶದ ಕೋಟ್ಯಾಂತರ ರೈಲು ಯಾತ್ರಿಗಳಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ರೇಲ್ವೆ ಇಲಾಖೆ!

ಅತಿಹೆಚ್ಚು ಮಾರಾಟವಾದ ಟಾಪ್ 10 ಕಾರುಗಳು

1. ಮಾರುತಿ ಸುಜುಕಿ ಬಲೆನೊ 18,592 ಯುನಿಟ್‌ಗಳನ್ನು (ಶೇ.48ಷ್ಟು ವಾರ್ಷಿಕ ಬೆಳವಣಿಗೆ) ಮಾರಾಟ ಮಾಡಿದ್ದರೆ, 1 ವರ್ಷದ ಹಿಂದೆ ಫೆಬ್ರವರಿ 2022ರಲ್ಲಿ 12,570 ಯುನಿಟ್‌ಗಳು ಮಾರಾಟವಾಗಿದ್ದವು. ಇದರ ಬೆಲೆ ಸುಮಾರು 6.5 ಲಕ್ಷ ರೂ.ದಿಂದ ಪ್ರಾರಂಭವಾಗುತ್ತದೆ.

2. ಮಾರುತಿ ಸುಜುಕಿ ಸ್ವಿಫ್ಟ್ 19,202 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಹೋದ ವರ್ಷಕ್ಕೆ ಹೋಲಿಸಿದರೆ 18,412 ಯುನಿಟ್‌ಗಳನ್ನು (ಶೇ.4ರಷ್ಟು ವಾರ್ಷಿಕ ಇಳಿಕೆ) ಮಾರಾಟ ಮಾಡಿದೆ.

3. ಮಾರುತಿ ಸುಜುಕಿ ಆಲ್ಟೊ 18,114 ಯುನಿಟ್‌ಗಳನ್ನು (ಶೇ.57ರಷ್ಟು ವಾರ್ಷಿಕ ಬೆಳವಣಿಗೆ) ಮಾರಾಟ ಮಾಡಿದ್ದರೆ, 1 ವರ್ಷದ ಹಿಂದೆ ಫೆಬ್ರವರಿ 2022ರಲ್ಲಿ 11,551 ಯುನಿಟ್‌ಗಳು ಮಾರಾಟವಾಗಿದ್ದವು.

4. ಮಾರುತಿ ಸುಜುಕಿ ವ್ಯಾಗನ್ಆರ್ ಫೆಬ್ರವರಿ 2022ರಲ್ಲಿ ಮಾರಾಟವಾದ 14,669 ಯುನಿಟ್‌ಗಳಿಗೆ ಹೋಲಿಸಿದರೆ, 16,889 ಯುನಿಟ್‌ಗಳನ್ನು (ಶೇ.15ರಷ್ಟು ವಾರ್ಷಿಕ ಬೆಳವಣಿಗೆ) ಮಾರಾಟ ಮಾಡಿದೆ.

5. ಮಾರುತಿ ಸುಜುಕಿ ಡಿಜೈರ್ 1 ವರ್ಷದ ಹಿಂದೆ ಫೆಬ್ರವರಿ 2022ರಲ್ಲಿ ಮಾರಾಟವಾದ 17,438 ಯುನಿಟ್‌ಗಳಿಗೆ ಹೋಲಿಸಿದರೆ, 16,798 ಯುನಿಟ್‌ಗಳನ್ನು (ಶೇ.4ರಷ್ಟು ಕುಸಿತ) ಮಾರಾಟ ಮಾಡಿದೆ.

6. ಮಾರುತಿ ಸುಜುಕಿ ಬ್ರೆಝಾ 15,787 ಯುನಿಟ್‌ಗಳನ್ನು (ಶೇ.71ರಷ್ಟು ವಾರ್ಷಿಕ ಬೆಳವಣಿಗೆ) ಮಾರಾಟ ಮಾಡಿದ್ದರ,  ಫೆಬ್ರವರಿ 2022ರಲ್ಲಿ ಕೇವಲ 9,256 ಯುನಿಟ್‌ಗಳು ಮಾರಾಟವಾಗಿದ್ದವು.

7. ಟಾಟಾ ನೆಕ್ಸಾನ್ ಕಳೆದ ವರ್ಷ ಫೆಬ್ರವರಿ 2022ರಲ್ಲಿ ಮಾರಾಟವಾದ 12,259 ಯುನಿಟ್‌ಗಳಿಗೆ ಹೋಲಿಸಿದರೆ, 13,914 ಯುನಿಟ್‌ಗಳನ್ನು (ಶೇ.14ರಷ್ಟು ವಾರ್ಷಿಕ ಬೆಳವಣಿಗೆ) ಮಾರಾಟ ಮಾಡಿದೆ.

8. ಮಾರುತಿ ಸುಜುಕಿ ಇಕೋ 11,352 ಯುನಿಟ್‌ಗಳನ್ನು (ಶೇ.24ರಷ್ಟು ವಾರ್ಷಿಕ ಬೆಳವಣಿಗೆ) ಮಾರಾಟ ಮಾಡಿದರೆ, ಫೆಬ್ರವರಿ 2022ರಲ್ಲಿ ಇದು ಒಟ್ಟು 9,190 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

9. ಟಾಟಾ ಪಂಚ್ 11,169 ಯುನಿಟ್‌ಗಳನ್ನು (ಶೇ.16ರಷ್ಟು ಕುಸಿತ) ಮಾರಾಟ ಮಾಡಿದರೆ, 1 ವರ್ಷದ ಹಿಂದೆ ಫೆಬ್ರವರಿ 2022ರಲ್ಲಿ ಒಟ್ಟು 9,592 ಯುನಿಟ್‌ಗಳು ಮಾರಾಟವಾಗಿವೆ.

10. ಹ್ಯುಂಡೈ ಕ್ರೆಟಾ 10,421 ಯುನಿಟ್‌ಗಳನ್ನು (ಶೇ.8ರಷ್ಟು ವಾರ್ಷಿಕ ಬೆಳವಣಿಗೆ) ಮಾರಾಟ ಮಾಡಿದರೆ, ಕಳೆದ ವರ್ಷ ಫೆಬ್ರವರಿ 2022ರಲ್ಲಿ 9,606 ಯುನಿಟ್‌ಗಳು ಮಾರಾಟವಾಗಿವೆ.

ಇದನ್ನೂ ಓದಿ: Good News: ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಇಳಿಕೆ, ಇಲ್ಲಿದೆ ಹೊಸ 1 ಲೀಟರ್ ಎಣ್ಣೆ ಬೆಲೆ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News