Job Alert: ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿ

UPSC Recruitment 2024: ಸೈಂಟಿಸ್ಟ್-ಬಿ- 12, ಆಂಥ್ರೋಪಾಲಜಿಸ್ಟ್​- 1, ಸ್ಪೆಷಲಿಸ್ಟ್​ ಗ್ರೇಡ್-3 ಅಸಿಸ್ಟೆಂಟ್ ಪ್ರೊಫೆಸರ್- 123, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- 4 ಮತ್ತು ಅಸಿಸ್ಟೆಂಟ್ ಡೈರೆಕ್ಟರ್- 7 ಹುದ್ದೆಗಳಿ ಖಾಲಿ ಇವೆ.

Written by - Puttaraj K Alur | Last Updated : Mar 26, 2024, 05:45 PM IST
  • ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
  • ಒಟ್ಟು 147 ಸೈಂಟಿಸ್ಟ್​-ಬಿ, ಸ್ಪೆಷಲಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಕಸ್ತರು ಅರ್ಜಿ ಸಲ್ಲಿಸಬಹುದು
  • ಏಪ್ರಿಲ್ 11 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು
Job Alert: ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿ title=
UPSC Recruitment 2024

Union Public Service Commission Recruitment 2024: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 147 ಸೈಂಟಿಸ್ಟ್​-ಬಿ, ಸ್ಪೆಷಲಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 11 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಹುದ್ದೆಯ ಮಾಹಿತಿ: ಸೈಂಟಿಸ್ಟ್-ಬಿ- 12, ಆಂಥ್ರೋಪಾಲಜಿಸ್ಟ್​- 1, ಸ್ಪೆಷಲಿಸ್ಟ್​ ಗ್ರೇಡ್-3 ಅಸಿಸ್ಟೆಂಟ್ ಪ್ರೊಫೆಸರ್- 123, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- 4 ಮತ್ತು ಅಸಿಸ್ಟೆಂಟ್ ಡೈರೆಕ್ಟರ್- 7

ಇದನ್ನೂ ಓದಿ: Daily GK Quiz: ಕೋನಾರ್ಕ್ ಸೂರ್ಯ ದೇವಾಲಯವನ್ನು ನಿರ್ಮಿಸಿದವರು ಯಾರು?

ವಿದ್ಯಾರ್ಹತೆ: ಸೈಂಟಿಸ್ಟ್-ಬಿಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ, ಆಂಥ್ರೋಪಾಲಜಿಸ್ಟ್​- ಸ್ನಾತಕೋತ್ತರ ಪದವಿ, ಸ್ಪೆಷಲಿಸ್ಟ್​ ಗ್ರೇಡ್-3 ಅಸಿಸ್ಟೆಂಟ್ ಪ್ರೊಫೆಸರ್- ಎಂಬಿಬಿಎಸ್, ಸ್ನಾತಕೋತ್ತರ ಪದವಿ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- ಡ್ರಿಲ್ಲಿಂಗ್/ಮೈನಿಂಗ್/ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಸಿವಿಲ್ ಎಂಜಿನಿಯರಿಂಗ್​ನಲ್ಲಿ ಪದವಿ ಮತ್ತು ಅಸಿಸ್ಟೆಂಟ್ ಡೈರೆಕ್ಟರ್‌ಗೆ ಸಿಎಸ್‌ಇ/ಇಸಿಇ/ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಕೆಮಿಕಲ್/ಮೆರೈನ್/ಪ್ರೊಡಕ್ಷನ್/ಇಂಡಸ್ಟ್ರಿಯಲ್/ಇನ್‌ಸ್ಟ್ರುಮೆಂಟೇಶನ್/ಸಿವಿಲ್ ಇಂಜಿನಿಯರಿಂಗ್/ಆರ್ಕಿಟೆಕ್ಚರ್/ಟೆಕ್ಸ್‌ಟೈಲ್ ಕೆಮಿಸ್ಟ್ರಿ/ಟೆಕ್ಸ್‌ಟೈಲ್ ಟೆಕ್ನಾಲಜಿಯಲ್ಲಿ ಪದವಿ ಹೊಂದಿರಬೇಕು.

ವಯೋಮಿತಿ: ಸೈಂಟಿಸ್ಟ್-ಬಿ- 40 ವರ್ಷ, ಆಂಥ್ರೋಪಾಲಜಿಸ್ಟ್​- 38 ವರ್ಷ, ಸ್ಪೆಷಲಿಸ್ಟ್​ ಗ್ರೇಡ್-3 ಅಸಿಸ್ಟೆಂಟ್ ಪ್ರೊಫೆಸರ್- 40 ವರ್ಷ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- 35 ವರ್ಷ ಮತ್ತು ಅಸಿಸ್ಟೆಂಟ್ ಡೈರೆಕ್ಟರ್- 35 ವರ್ಷ

ವಯೋಮಿತಿ ಸಡಿಲಿಕೆ: OBC ಅಭ್ಯರ್ಥಿಗೆ 3 ವರ್ಷ, SC/ST ಅಭ್ಯರ್ಥಿಗೆ 5 ವರ್ಷ ಮತ್ತು PwBD ಅಭ್ಯರ್ಥಿಗಳಿಗೆ 10 ವರ್ಷಗಳು

ಅರ್ಜಿ ಶುಲ್ಕ: SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ, ಇತರ ಎಲ್ಲಾ ಅಭ್ಯರ್ಥಿಗಳು 25 ರೂ. ಅರ್ಜಿ ಶುಲ್ಕ ಪಾವತಿಸಬೇಕು. 

ಉದ್ಯೋಗದ ಸ್ಥಳ: ಕರ್ನಾಟಕ ಸೇರಿದಂತೆ ಭಾರತದಾದ್ಯಂತ 

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ https://upsconline.nic.in/upsc/OTRP/index.php ಗೆ ನೇರವಾಗಿ ಬೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಇದನ್ನೂ ಓದಿ: Lok Sabha Election 2024: ಚುನಾವಣೆ ವೇಳೆ ಜಪ್ತಿ ಮಾಡಿದ ಮದ್ಯ, ಹಣ ಎಲ್ಲಿಗೆ ಹೋಗುತ್ತದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News