Free Medical Course College: ಈ ಮೆಡಿಕಲ್ ಕಾಲೇಜಿನಲ್ಲಿ ಫ್ರೀ ಆಗಿ ಸಿಗುತ್ತೆ ವೈದ್ಯಕೀಯ ಕೋರ್ಸ್, ಇಲ್ಲಿದೆ ಮಾಹಿತಿ

Free Medical Course College: ವೈದ್ಯಕೀಯ ಕೋರ್ಸ್ ಮಾಡಲು ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಶುಭ ಸುದ್ದಿ. ವೈದ್ಯಕೀಯ ಕೋರ್ಸ್‌ಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುವ ಮೆಡಿಕಲ್ ಕಾಲೇಜಿನ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ. 

Written by - Yashaswini V | Last Updated : Mar 1, 2024, 02:58 PM IST
  • ಭಾರತದಲ್ಲಿ ವೈದ್ಯಕೀಯ ಕೋರ್ಸ್‌ಗಳಿಗಾಗಿ NEET ಪರೀಕ್ಷೆಯನ್ನು ಪರಿಚಯಿಸಲಾಗಿದೆ.
  • ಇದರ ಅಡಿಯಲ್ಲಿ, ರ್ಯಾಂಕ್ ಆಧಾರದ ಮೇಲೆ ವಿಧ್ಯಾರ್ಥಿಗಳು ಕಡಿಮೆ ಶುಲ್ಕದಲ್ಲಿ ಉನ್ನತ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು.
  • ಆದರೆ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ ರೂ. ಶುಲ್ಕ ಪಾವತಿಸಬೇಕಾಗುತ್ತದೆ.
Free Medical Course College: ಈ ಮೆಡಿಕಲ್ ಕಾಲೇಜಿನಲ್ಲಿ ಫ್ರೀ ಆಗಿ ಸಿಗುತ್ತೆ ವೈದ್ಯಕೀಯ ಕೋರ್ಸ್, ಇಲ್ಲಿದೆ ಮಾಹಿತಿ  title=

Free Medical Course College: ಪ್ರಸ್ತುತ, ವಿಶ್ವದಾದ್ಯಂತ ವೈದ್ಯಕೀಯ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ.  ಭಾರತದಲ್ಲಿ ವೈದ್ಯಕೀಯ ಕೋರ್ಸ್‌ಗಳಿಗಾಗಿ NEET ಪರೀಕ್ಷೆಯನ್ನು ಪರಿಚಯಿಸಲಾಗಿದೆ. ಇದರ ಅಡಿಯಲ್ಲಿ, ರ್ಯಾಂಕ್ ಆಧಾರದ ಮೇಲೆ ವಿಧ್ಯಾರ್ಥಿಗಳು ಕಡಿಮೆ ಶುಲ್ಕದಲ್ಲಿ ಉನ್ನತ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು. ಆದರೆ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ಅಭ್ಯರ್ಥಿಗಳು  ವೈದ್ಯಕೀಯ ಕೋರ್ಸ್‌ಗಳಿಗೆ  ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಹಾಗಾಗಿ, ಲಕ್ಷಾಂತರ ರೂ. ಹಣ ಹೊಂದಿಸಲಾಗದೆ ಕೆಲವರ ವೈದ್ಯರಾಗುವ ಕನಸು ಕನಸಾಗಿಯೇ ಉಳಿಯುತ್ತದೆ. 

ಈ ಮಧ್ಯೆ ವೈದ್ಯಕೀಯ ಕೋರ್ಸ್‌ಗಳನ್ನು ಮಾಡಲು ಇಚ್ಛಿಸುವ ಆರ್ಥಿಕವಾಗಿ ಹಿಂದುಳಿದ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಒಂದಿದೆ. ನೀವು ಯಾವುದೇ ರೀತಿಯ ಶುಲ್ಕವನ್ನು ಪಾವತಿಸದೆ ಉಚಿತವಾಗಿ ವೈದ್ಯಕೀಯ ಕೋರ್ಸ್‌ಗಳಿಗೆ ಅನುವು ಮಾಡಿಕೊಡುವ ವೈದ್ಯಕೀಯ ಕಾಲೇಜಿನ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ.  ಅಲ್ಲಿ ವೈದ್ಯಕೀಯ ಕೋರ್ಸ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ. ಯಾವುದಾ ಕಾಲೇಜು? ಉಚಿತ ವೈದ್ಯಕೀಯ ಕೋರ್ಸ್ ಬಗ್ಗೆ ಕಾಲೇಜು ಹೇಳಿರುವುದೇನು ಎಂದು ತಿಳಿಯೋಣ... 

ಇದನ್ನೂ ಓದಿ- ಸಾಂದೀಪನಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಕೆ: ಮಾರ್ಚ್ 1ರವರೆಗೆ ದಿನಾಂಕ ವಿಸ್ತರಣೆ

ಈ ಮೆಡಿಕಲ್ ಕಾಲೇಜಿನಲ್ಲಿ ಫ್ರೀ ಆಗಿ ಸಿಗುತ್ತೆ ವೈದ್ಯಕೀಯ ಕೋರ್ಸ್!
ಆಲ್ಬರ್ಟ್ ಐನ್‌ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್ ಈ ಕುರಿತಂತೆ ಮಾಹಿತಿ ನೀಡಿದ್ದು, ಇಲ್ಲಿ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್‌ಗೆ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಹೇಳಿದೆ. ನ್ಯೂಯಾರ್ಕ್ ನ ಶ್ರೀಮಂತರೊಬ್ಬರು ವೈದ್ಯಕೀಯ ಕಾಲೇಜಿಗೆ 7,500 ಕೋಟಿ ರೂ.  ದೇಣಿಗೆ ನೀಡಿದ್ದು, ಆ ಬಳಿಕ ಈ ಕಾಲೇಜು ಶುಲ್ಕದಲ್ಲಿ ಸಡಿಲಿಕೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. 

ವರದಿಯ ಪ್ರಕಾರ, ಈ ದೇಣಿಗೆ ಅಮೆರಿಕದಲ್ಲಿ ಇದುವರೆಗೆ ಯಾವುದೇ ಒಂದು  ಶಿಕ್ಷಣ ಸಂಸ್ಥೆಯೊಂದು ಸ್ವೀಕರಿಸಿದ ಅತಿದೊಡ್ಡ ದೇಣಿಗೆಯಾಗಿದೆ. ಇದರ ಅಡಿಯಲ್ಲಿ, 49 ಲಕ್ಷದವರೆಗಿನ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ಇರುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ- ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳ ನೇರ ಸಂದರ್ಶನಕ್ಕಾಗಿ ಅರ್ಜಿ ಆಹ್ವಾನ

ಉಚಿತ ಮೆಡಿಕಲ್ ಕೋರ್ಸ್ ಬಗ್ಗೆ ಕಾಲೇಜು ಹೇಳಿದ್ದೇನು? 
ಈ ನಿಟ್ಟಿನಲ್ಲಿ, ಫೆಬ್ರವರಿ 26, 2024 ರಂದು, ಆಲ್ಬರ್ಟ್ ಐನ್ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್ ಅನ್ನು ಐನ್‌ಸ್ಟೈನ್ ಬೋರ್ಡ್ ಆಫ್ ಟ್ರಸ್ಟಿಗಳ ಅಧ್ಯಕ್ಷರು ಮತ್ತು ಮಾಂಟೆಫಿಯೋರ್ ಹೆಲ್ತ್ ಸಿಸ್ಟಮ್ ಬೋರ್ಡ್ ಸದಸ್ಯರಾದ ರುತ್ ಎಲ್ ಗಾಟ್ಸ್‌ಮನ್, ಎಡ್.ಡಿ. ಅವರಿಂದ ದೇಣಿಗೆ ಪಡೆಯಲಾಗಿದೆ. ಈ ದೇಣಿಗೆ ವೈದ್ಯಕೀಯ ಕ್ಷೇತ್ರ ಸೇರಿದಂತೆ ಇತರ ಎಲ್ಲಾ ಶೈಕ್ಷಣಿಕ ಕ್ಷೇತ್ರಗಳಲ್ಲಿ ಇದುವರೆಗೆ ಪಡೆದ ದೊಡ್ಡ ದೇಣಿಗೆ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ಆ ಕಾಲೇಜಿನ ವಿದ್ಯಾರ್ಥಿಗಳು ಶುಲ್ಕ ಪಾವತಿಸಬೇಕಾಗಿಲ್ಲ. ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಹಾಗೂ ಬರುವ ಎಲ್ಲ ವಿದ್ಯಾರ್ಥಿಗಳ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಕಾಲೇಜು ತಿಳಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News