Sarkari Naukri: ಎನ್‌ಸಿ‌ಇಆರ್‌ಟಿಯಲ್ಲಿ ಪರೀಕ್ಷೆಯಿಲ್ಲದೆ ಸಿಗುತ್ತೆ ಸರ್ಕಾರಿ ಉದ್ಯೋಗ

Sarkari Naukri: ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಎನ್‌ಸಿಇಆರ್‌ಟಿಯಲ್ಲಿ ಭರ್ಜರಿ ಉದ್ಯೋಗಾವಕಾಶವಿದೆ. ಅದೂ ಸಹ ಯಾವುದೇ ಪರೀಕ್ಷೆಯಿಲ್ಲದೆ ಎನ್‌ಸಿಇಆರ್‌ಟಿಯಲ್ಲಿ ಉದ್ಯೋಗ ಪಡೆಯುವ ಅವಕಾಶವಿದೆ. ಇದಕ್ಕಾಗಿ ಅರ್ಹತಾ ಮಾನದಂಡಗಳೇನು? ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಯೋಣ... 

Written by - Yashaswini V | Last Updated : May 2, 2024, 12:00 PM IST
  • ಯಾವುದೇ ಪರೀಕ್ಷೆಯಿಲ್ಲದೆ ಎನ್‌ಸಿಇಆರ್‌ಟಿಯಲ್ಲಿ ಉದ್ಯೋಗ ಪಡೆಯುವ ಅವಕಾಶವಿದೆ.
  • ಅರ್ಜಿ ಸಲ್ಲಿಸಲು ಮೇ 10, 2024 ಕೊನೆಯ ದಿನಾಂಕ
Sarkari Naukri: ಎನ್‌ಸಿ‌ಇಆರ್‌ಟಿಯಲ್ಲಿ ಪರೀಕ್ಷೆಯಿಲ್ಲದೆ ಸಿಗುತ್ತೆ ಸರ್ಕಾರಿ ಉದ್ಯೋಗ  title=

Sarkari Naukri: ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗಾಗಿ  ಎನ್‌ಸಿಇಆರ್‌ಟಿಯಲ್ಲಿ ಬಂಪರ್ ಉದ್ಯೋಗಾವಕಾಶವಿದೆ. ಅದೂ ಸಹ ಯಾವುದೇ ಪರೀಕ್ಷೆ ಇಲ್ಲದೆ, ಎನ್‌ಸಿಇಆರ್‌ಟಿಯಲ್ಲಿ ಉದ್ಯೋಗ (Job Opportunity in NCERT)  ಪಡೆಯಲು ಸುವರ್ಣಾವಕಾಶವಿದೆ. 

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ನಲ್ಲಿ ಶೈಕ್ಷಣಿಕ ಸಲಹೆಗಾರ, ದ್ವಿಭಾಷಾ ಭಾಷಾಂತರಕಾರ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ncert.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು . 

ಅರ್ಜಿ ಸಲ್ಲಿಸಲು ಮೇ 10, 2024 ಕೊನೆಯ ದಿನಾಂಕವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಕಡ್ಡಾಯ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಹುದ್ದೆಗಳ ವಿವರ ಇತ್ಯಾದಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಯುವುದನ್ನು ಖಚಿತಪಡಿಸಿಕೊಳ್ಳಿ. 

ಇದನ್ನೂ ಓದಿ- Indian Army Recruitment 2024: ತಿಂಗಳಿಗೆ 2.50 ಲಕ್ಷ ಸಂಬಳ ನೀಡುವ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿ

ಹುದ್ದೆಗಳ ವಿವರ: 
ಈ  ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ ಒಟ್ಟು 30 ಹುದ್ದೆಗಳಿಗೆ (Jobs) ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. 
>> ಶೈಕ್ಷಣಿಕ ಸಲಹೆಗಾರ- 3 ಹುದ್ದೆಗಳು
>> ದ್ವಿಭಾಷಾ ಅನುವಾದಕ- 23 ಹುದ್ದೆಗಳು
>> ಜೂನಿಯರ್ ಪ್ರಾಜೆಕ್ಟ್ ಫೆಲೋ- 4 ಹುದ್ದೆಗಳು

ಶೈಕ್ಷಣಿಕ ಅರ್ಹತೆ: 
ಶೈಕ್ಷಣಿಕ ಸಲಹೆಗಾರ ಹುದ್ದೆಗೆ ಶೈಕ್ಷಣಿಕ ಅರ್ಹತೆ: 

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಪಿಎಚ್‌ಡಿ ಪದವಿಯನ್ನು ಹೊಂದಿರಬೇಕು.

ದ್ವಿಭಾಷಾ ಅನುವಾದಕ ಹುದ್ದೆಗೆ ವಿದ್ಯಾರ್ಹತೆ: 
ದ್ವಿಭಾಷಾ ಭಾಷಾಂತರಕಾರ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. 

ಜೂನಿಯರ್ ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅಗತ್ಯ ವಿದ್ಯಾರ್ಹತೆ: 
ಜೂನಿಯರ್ ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು. 

ಇದನ್ನೂ ಓದಿ- Sarkari Naukri 2024: 10-12ನೇ ತರಗತಿ ಉತ್ತೀರ್ಣರಾದವರಿಗೆ ಸರ್ಕಾರದ ಈ ಇಲಾಖೆಯಲ್ಲಿ ನೇರ ನೇಮಕಾತಿ ಅವಕಾಶ

ವಯೋಮಿತಿ: 
>> ಶೈಕ್ಷಣಿಕ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ- 45 ವರ್ಷಗಳು 
>> ದ್ವಿಭಾಷಾ ಅನುವಾದಕ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ- 45 ವರ್ಷಗಳು
>> ಜೂನಿಯರ್ ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ- 40 ವರ್ಷಗಳು

ನೇಮಕ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಯಾವುದೇ ಪರೀಕ್ಷೆಯನ್ನು ಆಯೋಜಿಸುವುದಿಲ್ಲ.

ವೇತನ: 
ಶೈಕ್ಷಣಿಕ ಸಲಹೆಗಾರ ಹುದ್ದೆಗೆ ಮಾಸಿಕ ವೇತನ - 60,000 ರೂ.
ದ್ವಿಭಾಷಾ ಅನುವಾದಕ ಹುದ್ದೆಗೆ ಮಾಸಿಕ ವೇತನ- 30,000 ರೂ.
ಜೂನಿಯರ್ ಪ್ರಾಜೆಕ್ಟ್ ಫೆಲೋ ಹುದ್ದೆಗೆ ಮಾಸಿಕ ವೇತನ -  31,000 ರೂ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News