PSI Recruitment Scam: ಪ್ರಕರಣದ 36ನೇ ಆರೋಪಿ ಸಿದ್ದರಾಜು ಅರೆಸ್ಟ್!

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಆರೋಪಿ ಕಳೆದ 5 ತಿಂಗಳಿನಿಂದ ಸಿಐಡಿ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ.

Written by - Puttaraj K Alur | Last Updated : Sep 17, 2022, 12:46 PM IST
  • ಪಿಎಸ್‍ಐ ಅಕ್ರಮ ನೇಮಕಾತಿ ಹಗರದ 36ನೇ ಆರೋಪಿ ಸಿದ್ದರಾಜು ಅರೆಸ್ಟ್
  • ಪಿಎಸ್‍ಐಯಾಗಿ ಸೆಲೆಕ್ಟ್ ಆಗಿದ್ದ ಗಜೇಂದ್ರ, ಮನೋಜ್‍ಗೆ ಸಿದ್ದರಾಜು ಮಧ್ಯವರ್ತಿಯಾಗಿದ್ದ
  • ಕಳೆದ 5 ತಿಂಗಳಿನಿಂದ ಸಿಐಡಿ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಆರೋಪಿ
PSI Recruitment Scam: ಪ್ರಕರಣದ 36ನೇ ಆರೋಪಿ ಸಿದ್ದರಾಜು ಅರೆಸ್ಟ್! title=
36ನೇ ಆರೋಪಿ ಸಿದ್ದರಾಜು ಅರೆಸ್ಟ್!

ಬೆಂಗಳೂರು: 545 ಪಿಎಸ್‍ಐ ಹುದ್ದೆಗಳ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 36ನೇ ಆರೋಪಿ ಸಿದ್ದರಾಜು ಅರೆಸ್ಟ್ ಆಗಿದ್ದಾನೆ. ಪಿಎಸ್‍ಐ ಹಗರಣದಲ್ಲಿ ಮಧ್ಯವರ್ತಿಯಾಗಿದ್ದ ಸಿದ್ದರಾಜುವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  

ಇದನ್ನೂ ಓದಿ: "ಮತಾಂತರ ನಿಷೇಧ ವಿಧೇಯಕ ಧಾರ್ಮಿಕ ಸ್ವಾತ್ತಂತ್ರ್ಯದ ಹಕ್ಕುಗಳನ್ನು ಕಸಿಯುವ ವಿಧೇಯಕವಾಗಿದೆ"

ಪಿಎಸ್‍ಐಯಾಗಿ ಸೆಲೆಕ್ಟ್ ಆಗಿದ್ದ ಗಜೇಂದ್ರ, ಮನೋಜ್‍ಗೆ ಆರೋಪಿ ಸಿದ್ದರಾಜು ಮಧ್ಯವರ್ತಿಯಾಗಿದ್ದ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಆರೋಪಿ ಕಳೆದ 5 ತಿಂಗಳಿನಿಂದ ಸಿಐಡಿ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಆರೋಪಿಯ ಲಗ್ಗೆರೆ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಲಾಗಿತ್ತು.

ಇದನ್ನೂ ಓದಿ: ರಾಜ್ಯದ 22 ಸರಕಾರಿ ಡಿಗ್ರಿ ಕಾಲೇಜುಗಳ ಅಭಿವೃದ್ಧಿಗೆ ಉದ್ಯಮಿಪತಿಗಳ ಒಲವು

ಆರೋಪಿ ಪತ್ತೆಗೆ ಕೋರ್ಟ್‍ನಿಂದ ನಾನ್ ಬೇಲಬಲ್ ವಾರೆಂಟ್ ಇಶ್ಯೂ ಆಗಿತ್ತು. ಅಲ್ಲದೇ ಆರೋಪಿ ಸಿದ್ದರಾಜು ನಿವಾಸದಲ್ಲಿನ ಚರಾಸ್ತಿಯನ್ನು ಸಿಐಡಿ ಪೊಲೀಸರು ಜಪ್ತಿ ಮಾಡಿದ್ದರು. ಸಿದ್ದರಾಜು ಲಗ್ಗೆರೆ ನಿವಾಸದಲ್ಲಿ ಟಿವಿ, ಫ್ರಿಡ್ಜ್, ಸೋಫಾ, ಕಾರು-ಬೈಕ್ ಸೇರಿ ಚರಾಸ್ತಿಯನ್ನು ಜಫ್ತಿ ಮಾಡಲಾಗಿತ್ತು. ಶುಕ್ರವಾರ ಸಿದ್ದರಾಜು ಕೋರ್ಟ್‍ಗೆ ನೇರವಾಗಿ ಶರಣಾಗಿದ್ದಾನೆ. ಸಿದ್ದರಾಜುವನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News