‘ಫೋಟೋಶೂಟ್’ ಮಾಡಿಸ್ಬೇಡ ಎಂದ ಪೋಷಕರು: ವಿದ್ಯಾರ್ಥಿನಿ ಆತ್ಮಹತ್ಯೆ..!

Student Suicide in Bengaluru: ಜಯನಗರದ ಕಮ್ಯುನಿಟಿ ಕಾಲೇಜಿನಲ್ಲಿ ವರ್ಷಿಣಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಅಲ್ಲದೇ ಕಾಲೇಜಿನಲ್ಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಪೋಷಕರ ಮಾತಿಗೆ ಬೇಸರಗೊಂಡು ಸೂಸೈಡ್ ಮಾಡಿಕೊಂಡಿದ್ದಾಳೆ.

Written by - Puttaraj K Alur | Last Updated : Jan 1, 2024, 05:47 PM IST
  • ಹೊಸ ವರ್ಷದ ಫೋಟೋಶೂಟ್‍ಗೆ ಪೋಷಕರ ನಿರಾಕರಣೆ
  • ಬೆಂಗಳೂರಲ್ಲಿ 21 ವರ್ಷದ ವಿದ್ಯಾರ್ಥಿನಿ ವರ್ಷಿಣಿ ಆತ್ಮಹತ್ಯೆ
  • ಸೂಸೈಡ್ ಮಾಡಿಕೊಂಡ ಬಿಬಿಎ ವ್ಯಾಸಂಗ ಮಾಡುತ್ತಿದ್ದ ವರ್ಷಿಣಿ
‘ಫೋಟೋಶೂಟ್’ ಮಾಡಿಸ್ಬೇಡ ಎಂದ ಪೋಷಕರು: ವಿದ್ಯಾರ್ಥಿನಿ ಆತ್ಮಹತ್ಯೆ..! title=
21 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ!

ಬೆಂಗಳೂರು: ಮಾಲ್‌ನಲ್ಲಿ ಹೊಸ ವರ್ಷದ ಮುನ್ನಾದಿನದ ಫೋಟೋಶೂಟ್ ಮಾಡಲು ಪೋಷಕರು ಅನುಮತಿ ನಿರಾಕರಿಸಿದ್ದರಿಂದ 21 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಸುಧಾಮನಗರ ನಿವಾಸಿ ಬಿಬಿಎ ವಿದ್ಯಾರ್ಥಿನಿ ವರ್ಷಿಣಿ ಭಾನುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವರ್ಷಿಣಿ ಫೋಟೋಗ್ರಫಿ ಕೋರ್ಸ್ ಮುಗಿಸಿದ್ದು, ಹೊಸ ವರ್ಷದ ಮುನ್ನಾದಿನದಂದು ಮಾಲ್‌ನಲ್ಲಿ ಫೋಟೋಶೂಟ್ ಮಾಡಲು ಪೋಷಕರಿಗೆ ಅನುಮತಿ ಕೇಳಿದ್ದಳಂತೆ. ಆದರೆ ಫೋಟೋಶೂಟ್ ಮಾಡಿಸಲು ಪೋಷಕರು ನಿರಾಕರಿಸಿದ ನಂತರ, ಆಕೆ ತನ್ನ ಕೋಣೆಗೆ ತೆರಳಿ ಸೂಸೈಡ್ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಡಿಸಿಎಂ ಡಿಕೆಶಿ ಫ್ಯಾಮಿಲಿಗೆ ಮತ್ತೆ ಸಿಬಿಐ ಸಂಕಷ್ಟ!

‘ನಮಗೆ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ, ಆದರೆ ಆತ್ಮಹತ್ಯೆಗೂ ಮೊದಲು ಯಾರಿಗಾದರೂ ಸಂದೇಶ ಕಳುಹಿಸಿದ್ದಾಳೆಯೇ ಎಂದು ತಿಳಿಯಲು ನಾವು ಆಕೆಯ ಮೊಬೈಲ್ ಫೋನ್ ಪರಿಶೀಲಿಸುತ್ತಿದ್ದೇವೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜೊತೆಗೆ ಮಾತನಾಡಿರವು ಡಿಸಿಪಿ (ಕೇಂದ್ರ) ಶೇಖರ್ ಎಚ್‌ಟಿ, ‘ಪ್ರಕರಣ ಸಂಬಂಧ ವರ್ಷಿಣಿ ಅವರ ತಂದೆ ಪೊಲೀಸ್ ಠಾಣೆಗೆ ದೂರು  ನೀಡಿದ್ದಾರೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಸವಾಲು!

ಜಯನಗರದ ಕಮ್ಯುನಿಟಿ ಕಾಲೇಜಿನಲ್ಲಿ ವರ್ಷಿಣಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಅಲ್ಲದೇ ಕಾಲೇಜಿನಲ್ಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಪೋಷಕರ ಮಾತಿಗೆ ಬೇಸರಗೊಂಡು ಸೂಸೈಡ್ ಮಾಡಿಕೊಂಡಿದ್ದಾಳೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News