ಮತಾಂತರಗೊಂಡಿದ್ದ ಮಹಿಳೆ ಬುರ್ಖಾ ಧರಿಸಿಲ್ಲ ಅಂತ ಚಾಕುವಿನಿಂದ ಚುಚ್ಚಿ ಕೊಲೆಗೈದ ಪತಿ!

36 ವರ್ಷದ ಟ್ಯಾಕ್ಸಿ ಡ್ರೈವರ್ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. 2019ರಲ್ಲಿ ಹಿಂದೂ ಮಹಿಳೆ ರೂಪಾಲಿ ಎಂಬಾಕೆ ಮುಸ್ಲಿಂ ಇಕ್ಬಾಲ್ ಶೇಖ್ ಎಂಬಾತನನ್ನು ವಿವಾಹವಾಗಿದ್ದಳು. ಆ ಬಳಿಕ ಹೆಸರನ್ನು ಜೌರಾ ಎಂದು ಬದಲಾಯಿಸಿಕೊಂಡಿದ್ದಳು. ಈ ದಂಪತಿಗೆ ಒಬ್ಬ ಮಗನೂ ಇದ್ದಾನೆ.

Written by - Bhavishya Shetty | Last Updated : Sep 27, 2022, 04:55 PM IST
    • ಬುರ್ಖಾ ಧರಿಸಿಲ್ಲ ಎಂದು ಕೋಪಗೊಂಡ ಪತಿ
    • ವಿಚ್ಛೇದಿತ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ
    • 2019ರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಮಹಿಳೆ
ಮತಾಂತರಗೊಂಡಿದ್ದ ಮಹಿಳೆ ಬುರ್ಖಾ ಧರಿಸಿಲ್ಲ ಅಂತ ಚಾಕುವಿನಿಂದ ಚುಚ್ಚಿ ಕೊಲೆಗೈದ ಪತಿ!  title=
Woman Murder

ಬುರ್ಖಾ ಧರಿಸಿಲ್ಲ ಮತ್ತು ಸಾಂಪ್ರದಾಯಿಕ ಮುಸ್ಲಿಂ ಸಂಪ್ರದಾಯಗಳನ್ನು ಅನುಸರಿಸಿಲ್ಲ ಎಂದು ಕೋಪಗೊಂಡ ಪತಿ ತನ್ನ ವಿಚ್ಛೇದಿತ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. 

ಇದನ್ನೂ ಓದಿ:  Hero Bikes: ಈ ಹಬ್ಬಗಳಲ್ಲಿ ಹೀರೋ 8 ಹೊಸ ಸ್ಕೂಟರ್ ಮತ್ತು ಬೈಕ್ ಬಿಡುಗಡೆ ಮಾಡಲಿದೆ!

36 ವರ್ಷದ ಟ್ಯಾಕ್ಸಿ ಡ್ರೈವರ್ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. 2019ರಲ್ಲಿ ಹಿಂದೂ ಮಹಿಳೆ ರೂಪಾಲಿ ಎಂಬಾಕೆ ಮುಸ್ಲಿಂ ಇಕ್ಬಾಲ್ ಶೇಖ್ ಎಂಬಾತನನ್ನು ವಿವಾಹವಾಗಿದ್ದಳು. ಆ ಬಳಿಕ ಹೆಸರನ್ನು ಜೌರಾ ಎಂದು ಬದಲಾಯಿಸಿಕೊಂಡಿದ್ದಳು. ಈ ದಂಪತಿಗೆ ಒಬ್ಬ ಮಗನೂ ಇದ್ದಾನೆ.

“ಕಳೆದ ಕೆಲವು ತಿಂಗಳುಗಳಿಂದ ಇಕ್ಬಾಲ್ ಶೇಖ್ ಅವರ ಕುಟುಂಬವು ಬುರ್ಖಾ ಧರಿಸುವಂತೆ ಒತ್ತಡ ಹೇರುತ್ತಿದ್ದ ಕಾರಣ ಆಕೆ ತನ್ನ ಮಗನೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ಆಕೆಯ ಕುಟುಂಬ ಮಾಹಿತಿ ನೀಡಿದೆ. ಸದ್ಯ ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ಉಸ್ತುವಾರಿ ಸಚಿವ ವಿಲಾಸ್ ರಾಥೋಡ್ ಹೇಳಿದರು. 

ಇದನ್ನೂ ಓದಿ: ‘ವಕ್ಫ್ ಗೆ ನೀಡಿರುವುದು ಕಾಂಗ್ರೆಸ್ ಆಸ್ತಿಯಲ್ಲ, ದೇಶದ ಆಸ್ತಿಯನ್ನು ಮರಳಿ ಪಡೆಯುತ್ತೇವೆ’

ಸೆಪ್ಟೆಂಬರ್ 26 ರಂದು, ವಿಚ್ಛೇದನದ ಕುರಿತು ಮಾತುಕತೆ ನಡೆಸಲು ಕರೆದಿದ್ದ ಇಕ್ಬಾಲ್, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸದ್ಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News