ಸರಳತೆಯ ಸಾಕಾರಮೂರ್ತಿ ಲಾಲ್ ಬಹದೂರ್ ಶಾಸ್ತ್ರಿ

   

Manjunath Naragund Manjunath Naragund | Updated: Jan 11, 2018 , 04:43 PM IST
ಸರಳತೆಯ ಸಾಕಾರಮೂರ್ತಿ ಲಾಲ್ ಬಹದೂರ್ ಶಾಸ್ತ್ರಿ

ಭಾರತದ ಪ್ರಧಾನಿಗಳಲ್ಲಿ ಲಾಲ್ ಬಹದೂರ್ ಶಾಸ್ತ್ರಿ ಅಚ್ಚಳಿಯದ ಹೆಸರು,ತಮ್ಮ ಕಡಿಮೆ ಅವಧಿಯ ಆಳ್ವಿಕೆಯಲ್ಲಿ ದೇಶದ ಆಧುನಿಕ ಇತಿಹಾಸದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ್ದಾರೆ. ಇಂದು ಇಂತಹ ಮಹಾನ್ ನಾಯಕನ ಪುಣ್ಯಸ್ಮರಣೆಯ ದಿನ.

1902 ಅಕ್ಟೋಬರ್ 2 ರಂದು ಇಂದಿನ ಉತ್ತರಪ್ರದೇಶದ  ಮುಘಲ ಸರಾಯಿನ ಕಾಯಸ್ತ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೂ ಗಾಂಧೀಜಿಯವರ ವಿಚಾರಗಳಿಂದ ಪ್ರಭಾವಿತರಾದ  ಶಾಸ್ತ್ರಿಯವರು ಮುಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರರಲ್ಲದೆ ಆ ಮೂಲಕ ತಮ್ಮ ಜೀವನದಲ್ಲಿ ಸರಳ ಜೀವನ ಮಾರ್ಗದಿಂದಾಗಿ ಎಲ್ಲರ ಮನದಲ್ಲಿ ನೆಲೆಯೂರಿದ್ದಾರೆ. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಶಾಸ್ತ್ರಿಜಿಯವರು ತಮ್ಮ ನಿಷ್ಕಳಂಕ ವ್ಯಕ್ತಿತ್ವದಿಂದಾಗಿ ಗಮನ ಸೆಳೆದವರು.

ಶಾಸ್ತ್ರಿಯವರು 1966 ರಲ್ಲಿ ತಾಷ್ಕೆಂಟ್ ಒಪ್ಪಂದಕ್ಕಾಗಿ ತೆರಳಿದ್ದ ಶಾಸ್ತ್ರಿಯವರು ಹೃದಯಾಘಾತದಿಂದ ಮೃತಪಟ್ಟರು. ನೆಹರು ರವರ ಕಾಲಾವಧಿಯಲ್ಲಿ ಪ್ರಥಮ ಕೇಂದ್ರ ರೈಲ್ವೆ ಮಂತ್ರಿಗಳಾಗಿದ್ದ ಶಾಸ್ತ್ರೀಯವರು 1964ರಲ್ಲಿ ನೆಹರು ಮರಣದ ನಂತರ ಪ್ರಧಾನಿ ಹುದ್ದೆಗೆ ಏರಿದ ಅವರು ನಂತರ ಪಾಕಿಸ್ತಾನದ ವಿರುದ್ದದ ಯುದ್ದದಲ್ಲಿ ಜಯಭೇರಿ ಬಾರಿಸಿದರು. ಆ ಮೂಲಕ  ಶಾಸ್ತ್ರಿ ತಮ್ಮ ದಕ್ಷ ಆಡಳಿತದ ಹೆಗ್ಗುರುತನ್ನು ಮೂಡಿಸಿದರು. ಜೈ ಜವಾನ್ ಜೈ ಕಿಸಾನ್ ಎನ್ನುವ ಮೂಲಕ ಸಶಕ್ತ ಭಾರತಕ್ಕಾಗಿ ಕರೆ ನೀಡಿದರು. 

ಇಂತಹ ಮಹಾನ್ ವ್ಯಕ್ತಿ ಭಾರತ ಮತ್ತು ಪಾಕಿಸ್ತಾನದ ವಿಚಾರವಾಗಿ ತಾಸ್ಕೆಂಟ್ ಒಪ್ಪಂದಕ್ಕೆ ತೆರಳಿದಾಗ ಜನವರಿ 11 1966 ರಲ್ಲಿ ತಮ್ಮ ಕೊನೆಯುಸಿರೆಳೆದರು.

By continuing to use the site, you agree to the use of cookies. You can find out more by clicking this link

Close