ರಾಮಮಂದಿರ ಶಿಲಾನ್ಯಾಸ: ಇಂದಿನಿಂದ ಅಯೋಧ್ಯೆಯಲ್ಲಿ ಕಾರ್ಯಕ್ರಮಗಳು ಆರಂಭ, ಇಲ್ಲಿದೆ ವಿವರ

ಆಗಸ್ಟ್ 5 ರಂದು ಅಭಿಜೀತ್ ಮುಹೂರ್ತದಲ್ಲಿ ಶ್ರೀ ರಾಮ್ ದೇವಾಲಯ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಸಲಿದ್ದಾರೆ. ಭೂಮಿ ಪೂಜೆ ಕಾರ್ಯಕ್ರಮ ಸತತ ಮೂರು ದಿನಗಳವರೆಗೆ ನಡೆಯುತ್ತದೆ.

Last Updated : Aug 3, 2020, 11:05 AM IST
ರಾಮಮಂದಿರ ಶಿಲಾನ್ಯಾಸ: ಇಂದಿನಿಂದ ಅಯೋಧ್ಯೆಯಲ್ಲಿ ಕಾರ್ಯಕ್ರಮಗಳು ಆರಂಭ, ಇಲ್ಲಿದೆ ವಿವರ title=

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ (Ram Mandir)  ನಿರ್ಮಾಣಕ್ಕಾಗಿ ಭೂಮಿ ಪೂಜೆ ಕಾರ್ಯಕ್ರಮವು ಇಂದು ಬೆಳಿಗ್ಗೆ 9 ಗಂಟೆಗೆ ಗಣೇಶ ದೇವರ ಆರಾಧನೆಯೊಂದಿಗೆ ಪ್ರಾರಂಭವಾಗಲಿದೆ. ಭೂಮಿ ಪೂಜೆ ಕಾರ್ಯಕ್ರಮ ಸತತ ಮೂರು ದಿನಗಳವರೆಗೆ ನಡೆಯುತ್ತದೆ. ಆಗಸ್ಟ್ 5 ರಂದು ಅಭಿಜೀತ್ ಮುಹೂರ್ತದಲ್ಲಿ ಶ್ರೀ ರಾಮ್ ದೇವಾಲಯ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಸಲಿದ್ದಾರೆ.

ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯ ಸಂಘಟಕರ ಆಹ್ವಾನದ ಮೇರೆಗೆ ಪಿಎಂ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಆಗಸ್ಟ್ 5 ರಂದು ಅಭಿಜೀತ್ ಮುಹೂರ್ತದಲ್ಲಿ ಶ್ರೀ ರಾಮ್ ದೇವಾಲಯ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಸಲಿದ್ದಾರೆ.  ಈ ವಿಶೇಷ ಮುಹೂರ್ತದಲ್ಲಿ ಭಗವಾನ್ ರಾಮ್‌ಲಾಲಾಗೆ ಹಸಿರು ಮತ್ತು ಕೇಸರಿ ಉಡುಗೆಯಿಂದ ಅಲಂಕಾರ ಮಾಡಲಾಗಿರುತ್ತದೆ. ನವರತ್ನ-ಹೊದಿಕೆಯ ಉಡುಗೆ ತುಂಬಾ ಸುಂದರವಾಗಿರುತ್ತದೆ.

ಅಯೋಧ್ಯೆ: ರಾಮಮಂದಿರದಂತೆ ಕಾಣಲಿದೆಯಂತೆ ಹೊಸ ರೈಲ್ವೆ ನಿಲ್ದಾಣ, ಇಲ್ಲಿದೆ ವೈಶಿಷ್ಟ್ಯ

ಭಗವಾತ್ ಪ್ರಸಾದ್ ಅಲಿಯಾಸ್ ಪಹಾರಿ ಟೈಲರ್, ಭಗವಾನ್ ರಾಮ್ ಲಲ್ಲಾ ಅವರ ಉಡುಪನ್ನು ಸಿದ್ಧಪಡಿಸಿದ್ದು ಈ ಉಡುಪನ್ನು ತಯಾರಿಸಲು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು. ನಮ್ಮ ಇಡೀ ಕುಟುಂಬವು ಮನಸಾರೆ ಬಹಳ ಭಕ್ತಿಯಿಂದ ಈ ಉಡುಪನ್ನು ಸಿದ್ಧಪಡಿಸಿದೆ. 

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಬಹುವರ್ಷದ ಕನಸಾಗಿದ್ದು ಈ ಕೆಲಸವನ್ನು ಮಾಡಲು ನನಗೆ ತುಂಬಾ ಸಂತೋಷವಾಗಿದೆ ಎಂದು ಪಂಡಿತ್ ಕಲ್ಕಿ ರಾಮ್ ಹೇಳಿದರು. ಕಳೆದ 6 ವರ್ಷಗಳಿಂದ ನಾನು ಭಗವಾನ್ ರಾಮಲಾಲರ ದೇವಸ್ಥಾನದಲ್ಲಿ ಧರ್ಮಧ್ವಜವನ್ನು ಪಡೆಯುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರು ದೀರ್ಘಕಾಲ ಬದುಕಬೇಕು ಮತ್ತು ಎಲ್ಲಾ ಕಾರ್ಯಗಳಲ್ಲೂ ಯಶಸ್ವಿಯಾಗಬೇಕು ಎಂಬುದು ನನ್ನ ಆಸೆ ಎಂದರು.

Trending News