Solar Eclipse: ವರ್ಷದ ಮೊದಲ ರವಿವಾರ ಸಂಭವಿಸಲಿದೆ ಸೂರ್ಯಗ್ರಹಣ

ಮೊದಲ ಸೂರ್ಯ ಗ್ರಹಣವು ಜನವರಿ 6 ರಂದು ನಡೆಯುತ್ತದೆ, ನಂತರ ಇದೇ ತಿಂಗಳ 21ರಂದು ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ.

Last Updated : Jan 5, 2019, 11:04 AM IST
Solar Eclipse: ವರ್ಷದ ಮೊದಲ ರವಿವಾರ ಸಂಭವಿಸಲಿದೆ ಸೂರ್ಯಗ್ರಹಣ title=
ಸಾಂದರ್ಭಿಕ ಚಿತ್ರ

ನವದೆಹಲಿ: 2019 ರಲ್ಲಿ ಮೂರು ಸೂರ್ಯ ಗ್ರಹಣಗಳು ಮತ್ತು ಎರಡು ಚಂದ್ರ ಗ್ರಹಣಗಳು ಈ ವರ್ಷ ನಡೆಯಲಿವೆ. ಅದರಲ್ಲಿ ಮೊದಲ ತಿಂಗಳಿನಲ್ಲಿ, ಎರಡು ಗ್ರಹಣಗಳು ನಡೆಯಲಿವೆ, ಇದರಲ್ಲಿ ಮೊದಲ ಗ್ರಹಣವು ಜನವರಿ 6 ರ ಮೊದಲ ಭಾನುವಾರ ಅಂದರೆ 6ರಂದು ನಡೆಯಲಿದೆ. 

ಜನವರಿ 6 ರ ಭಾನುವಾರದಂದು ಭಾಗಶಃ ಸೂರ್ಯ ಗ್ರಹಣ ಸಂಭವಿಸುತ್ತದೆ. 2019 ರ ಜನವರಿ 6 ರಂದು ಬೆಳಿಗ್ಗೆ 4:05 ರಿಂದ 9:18 ರವರೆಗೆ ಸೌರ ಗ್ರಹಣ ಜರುಗಲಿದೆ. ಆದರೆ ಭಾರತದಲ್ಲಿ ಇದನ್ನು ನೋಡಲು ಸಾಧ್ಯವಾಗುವುದಿಲ್ಲ. ಜ್ಯೋತಿಷಿಗಳ ಪ್ರಕಾರ, ಈ ಭಾಗಶಃ ಸೌರ ಗ್ರಹಣವು ಈಶಾನ್ಯ ಏಷ್ಯಾ ಮತ್ತು ಉತ್ತರ ಪೆಸಿಫಿಕ್ ರಾಷ್ಟ್ರಗಳಲ್ಲಿ ಗೋಚರಿಸುತ್ತದೆ.

ಇದೇ ತಿಂಗಳ 21ರಂದು ಚಂದ್ರಗ್ರಹಣ:
ಸೂರ್ಯನ ಗ್ರಹಣದ ನಂತರ ಈ ತಿಂಗಳ 21 ರಂದು ಚಂದ್ರ ಗ್ರಹಣ ಜರುಗಲಿದೆ. ಜ್ಯೋತಿಶಾಸ್ತ್ರದ ಪ್ರಕಾರ, ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುವ ಸಮಯ ಜ.21ರ ರಾತ್ರಿ 9:03 ರಿಂದ 12:20 ಗಂಟೆಗಳವರೆಗೆ ಇರುತ್ತದೆ. ಸೂರ್ಯನ ಗ್ರಹಣದಂತೆ, ಚಂದ್ರ ಗ್ರಹಣವೂ ಭಾರತದಲ್ಲಿ ಗೋಚರಿಸುವುದಿಲ್ಲ.

ಗ್ರಂಥಗಳ ಪ್ರಕಾರ, ಈ ಸಮಯದಲ್ಲಿ ಯಾವುದೇ ಮಂಗಳಕರ ಕೆಲಸಕ್ಕೆ ಯಾವುದೇ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. 

Trending News