'ಜಾನಪದ ಜಂಗಮ' ಕಂಬಾರರಿಗೆ ಹುಟ್ಟುಹಬ್ಬದ ಸಂಭ್ರಮ

     

Updated: Jan 2, 2018 , 06:45 PM IST
 'ಜಾನಪದ ಜಂಗಮ' ಕಂಬಾರರಿಗೆ ಹುಟ್ಟುಹಬ್ಬದ ಸಂಭ್ರಮ
ಫೋಟೋ:ಯುಟ್ಯೂಬ್

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಚಂದ್ರಶೇಖರ್ ಕಂಬಾರರಿಗೆ ವಿಶಿಷ್ಟ ಹೆಸರು.ಕವಿ,ನಾಟಕಗಾರ, ಚಲನಚಿತ್ರ ನಿರ್ದೇಶಕ ಹೀಗೆ ಹಲವು ಆಯಾಮಗಳಲ್ಲಿ ಕಾರ್ಯ ನಿರ್ವಹಿಸಿರುವ ಕಂಬಾರರು ತಮ್ಮ ಸಾಹಿತ್ಯ ಕೃಷಿಯ ಕೊಡುಗೆಗಾಗಿ ಪ್ರತಿಷ್ಟಿತ ಜ್ಞಾನಪೀಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತಹ ಮೇರು ಸಾಹಿತ್ಯ ಪರ್ವತ ವ್ಯಕ್ತಿತ್ವಕ್ಕೆ ಇಂದು 80ನೇ ಹುಟ್ಟುಹಬ್ಬದ ಸಂಭ್ರಮ.

ಶ್ರೀಯುತರು ಬೆಳಗಾವಿ ಜಿಲ್ಲೆಯ ಗೋಡಘೇರಿ ಯಲ್ಲಿ ಜನೆವರಿ 1937 ರಂದು ಜನಿಸಿದರು. ಕಂಬಾರ ಸಾಹಿತ್ಯ ಕೃತಿಗಳು ಬಹು ಮುಖ್ಯವಾಗಿ ಪುರಾಣ ಜಾನಪದದಂತಹ ಕಥೆಗಳಿಂದ ಸ್ಪೂರ್ತಿ ಪಡೆದಂತವುಗಳಾಗಿವೆ. ಕನ್ನಡ ಸಾಹಿತ್ಯದಲ್ಲಿ ಕುಮಾರವ್ಯಾಸ, ಬಸವಣ್ಣ, ಕುವೆಂಪು, ಗೋಪಾಲಕೃಷ್ಣ ಅಡಿಗ, ಹಾಗೂ ದ.ರಾ,ಬೇಂದ್ರೆಯವರಿಂದ ಪ್ರಭಾವಿತರಾಗಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದು ಉತ್ತರ ಕರ್ನಾಟಕದ ರಂಗಭೂಮಿ ಕುರಿತು ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.

ಹಲವು ವರ್ಷಗಳ ಕಾಲ ಬೆಂಗಳೂರು ವಿವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಲ್ಲದೆ ಹಂಪಿ ಕನ್ನಡ ವಿವಿಯ ಸಂಸ್ಥಾಪಕ ಕುಲಪತಿ,ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ,ಹೀಗೆ ವಿವಿಧ ರೀತಿಯ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. 

ಕಾವ್ಯಗಳು:

ಮುಗುಳು 
ಹೇಳತೇನ ಕೇಳ 
ತಕರಾರಿನವರು  (ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ)
ಸಾವಿರಾರು ನೆರಳು  (ಕುಮಾರ ಆಶನ್ ಪ್ರಶಸ್ತಿ 
ಬೆಳ್ಳಿ ಮೀನು 
ಅಕ್ಕಕ್ಕು ಹಾಡುಗಳೆ 
ಈ ವರೆಗಿನ ಹೇಳತೇನ ಕೇಳ 
ಹಂಪಿಯ ಕಲ್ಲುಗಳು
ಎಲ್ಲಿದೆ ಶಿವಪುರಂ 

ನಾಟಕಗಳು

ಬೆಂಬತ್ತಿದ ಕಣ್ಣು 
ನಾರ್ಸಿಸ್ಸ್ 
ಋಷ್ಯಶೃಂಗ 
ಜೋಕುಮಾರಸ್ವಾಮಿ 
ಚಾಲೇಶ 
ಸಂಗ್ಯಾಬಾಳ್ಯಾ ಅನ್ಬೇಕೊ ನಾಡೊಳಗ 
ಕಿಟ್ಟಿಯ ಕಥೆ 
ಜೈಸಿದ್ದನಾಯಕ 
ಆಲಿಬಾಬ 
ಕಾಡುಕುದುರೆ 
ನಾಯಿಕಥೆ 
ಖಾರೋಖಾರ 
ಮತಾಂತರ 
ಹರಕೆಯ ಕುರಿ
ಸಾಂಬಶಿವ ಪ್ರಹಸನ 
ಸಿರಿಸಂಪಿಗೆ ( ನವದೆಹಲಿಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ)
ಹುಲಿಯ ನೆರಳು 
ಬೋಳೆ ಶಂಕರ
ಪುಷ್ಪರಾಣಿ 
ತಿರುಕನ ಕನಸು 
ಮಹಾಮಾಯಿ 
ನೆಲಸಂಪಿಗೆ  (ಈ ಪುಸ್ತಕವನ್ನು ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರ ಪ್ರಕಟ ಮಾಡಿದೆ)
ಜಕ್ಕಣ 
ಶಿವರಾತ್ರಿ 

 

ಪ್ರಶಸ್ತಿಗಳು ಮತ್ತು ಸನ್ಮಾನಗಳು:

ಜ್ಞಾನಪೀಠ ಪ್ರಶಸ್ತಿ 
ದೇವರಾಜ ಅರಸ್ ಪ್ರಶಸ್ತಿ 
ಜೋಶು ಸಾಹಿತ್ಯ ಪುರಸ್ಕಾರಂ 
ನಾಡೋಜ ಪ್ರಶಸ್ತಿ  (ಹಂಪಿ ಕನ್ನಡ ವಿಶ್ವವಿದ್ಯಾಲಯ)
ಪಂಪ ಪ್ರಶಸ್ತಿ 
ಸಂತ ಕಬೀರ್ ಪ್ರಶಸ್ತಿ 
ಪದ್ಮಶ್ರೀ ಪ್ರಶಸ್ತಿ
ಮಾಸ್ತಿ ಪ್ರಶಸ್ತಿ (ಕರ್ನಾಟಕ ಸರಕಾರ)
ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ
ಸಿರಿಸಂಪಿಗೆ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ