ʼSapta Sagardaache elloʼ : ಅಕ್ಟೋಬರ್‌ 20 ರಂದು ತೆರೆ ಕಾಣಬೇಕಿದ್ದ ಸೈಡ್‌-B ದಿನಾಂಕದಲ್ಲಿ ಬದಲಾವಣೆ

Sapta Sagardaache ello : ಅಕ್ಟೋಬರ್‌ 20ರಂದು ರಿಲೀಸ್‌ ಆಗಲಿದ್ದ  ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್‌-ಬಿ ಈಗ ದಿನಾಂಕ ಬದಲಾವಣೆಯೊಂದಿಗೆ ಅಕ್ಟೋಬರ್‌ 27 ರಂದು ರಿಲೀಸ್‌ ಆಗಲಿದೆ ಎಂದು ಸಿನಿಮಾ ತಂಡ ತಿಳಿಸಿದೆ.

Written by - Zee Kannada News Desk | Last Updated : Sep 29, 2023, 12:36 PM IST
  • ಅಕ್ಟೋಬರ್‌ 27 ರಂದು ರಿಲೀಸ್‌ ಆಗಲಿದೆ ಎಂದು ಸಿನಿಮಾ ತಂಡ ತಿಳಿಸಿದೆ.
  • ಸಿನಿಮಾ ತಂಡ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಜನರಲ್ಲಿ ನಿರಾಸೆಯನ್ನುಂಟು ಮಾಡಿದೆ.
  • ರಕ್ಷಿತ್‌ ಶೆಟ್ಟಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ʼSapta Sagardaache elloʼ : ಅಕ್ಟೋಬರ್‌ 20 ರಂದು ತೆರೆ ಕಾಣಬೇಕಿದ್ದ ಸೈಡ್‌-B ದಿನಾಂಕದಲ್ಲಿ ಬದಲಾವಣೆ title=

Sapta Sagardaache ello ʼSide-Bʼ : ಸೆಪ್ಟೆಂಬರ್‌ 1ರಂದು ತೆರೆ ಕಂಡಿದ್ದ ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್-ಎ ‌ತನ್ನ ಎರಡನೇ ಭಾಗ ಸೈಡ್‌-ಬಿ ಯನ್ನು ಅಕ್ಟೋಬರ್‌ 20ರಂದು ರಿಲೀಸ್‌ ಮಾಡಲಿದೆಯೆಂದು ಚಿತ್ರ ತಂಡ ದಿನಾಂಕವನ್ನು ಘೋಷಣೆ ಮಾಡಿತ್ತು. ಆದರೆ ಈಗ ಚಿತ್ರ ತಂಡ ತನ್ನ ನಿರ್ಧಾರವನ್ನು ಬದಲಿಸಿ ರಿಲೀಸ್‌ ದಿನಾಂಕವನ್ನು ಬದಲಾವಣೆ ಮಾಡಿದೆ.

ಹೇಮಂತ್‌ ರಾವ್‌ ನಿರ್ದೇಶನದ  ʼಸಪ್ತ ಸಾಗರದಾಚೆ ಎಲ್ಲೋʼ ರಕ್ಷಿತ್‌ ಶೆಟ್ಟಿ ನಿರ್ಮಾಣ ಹಾಗೂ ನಟನೆಯಲ್ಲಿ ತಯಾರಾಗಿದ್ದು, ರುಕ್ಮಿಣಿ ವಸಂತ್‌ ನಾಯಕಿಯಾಗಿ ಅಭಿನಯಸಿದ್ದಾರೆ.

ಇದನ್ನು ಓದಿ : ಬಹುನಿರೀಕ್ಷಿತ ಜಗ್ಗೇಶ್‌ ನಟನೆಯ ʼತೋತಾಪುರಿ 2ʼ ನಿನ್ನೆ ರಿಲೀಸ್‌ : ಹೇಗಿದೆ ಸಿನಿಮಾ

ಈಗಾಗಲೇ ತೆರೆ ಕಂಡ ಸೈಡ್‌-ಎ ಯಶಸ್ಸನ್ನು ಕಂಡಿದ್ದು, ಪ್ರೇಕ್ಷಕರಿಗೆ ಸೈಡ್‌-ಬಿ ಯಲ್ಲಿ ಏನಾಗಬಹುದು ಎಂಬ ಕೂತುಹಲವನ್ನು ಸೃಷ್ಟಿಮಾಡಿತ್ತು ಮತ್ತು ಅಭಿಮಾನಿ ವರ್ಗವು ಸೈಡ್‌-ಬಿ ರಿಲೀಸ್‌ಗೆಂದು ಕಾದುಕುಳಿತ ಸಂದರ್ಭದಲ್ಲಿ ಸಿನಿಮಾ ತಂಡ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಜನರಲ್ಲಿ ನಿರಾಸೆಯನ್ನುಂಟು ಮಾಡಿದೆ. 

ಚಿತ್ರ ತಂಡ ಈ ಕುರಿತು ನಿರ್ಧಾರವನ್ನು ತೆಗೆದುಕೊಂಡಿರುವುದರ ಕುರಿತು ರಕ್ಷಿತ್‌ ಶೆಟ್ಟಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, "ನಮ್ಮ ಪ್ರಯಾಣದಲ್ಲಿ ಸ್ವಲ್ಪ ಅಡ್ಡದಾರಿಯಿದೆ, ಆದರೆ ತಲುಪುವ ದಾರಿ ಒಂದೇ ಆಗಿರುತ್ತದೆ! ʼಸಪ್ತ ಸಾಗರದಾಚೆ ಎಲ್ಲೋ - ಸೈಡ್ ಬಿʼ ಅಕ್ಟೋಬರ್ 27 ರಂದು ನಿಮ್ಮದಾಗಲಿದೆ. ನೀವು ಮುಂದಿನ ಅಧ್ಯಾಯವನ್ನು ಅಷ್ಟೇ ಪ್ರೀತಿ ಮತ್ತು ಬೆಂಬಲದೊಂದಿಗೆ ಸ್ವೀಕರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. ಎಂದು ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News