ಡಿವೋರ್ಸ್ ಸುದ್ದಿ ಬೆನ್ನಲೇ ಪಬ್ಲಿಕ್’ನಲ್ಲೇ ಜಗಳವಾಡಿದ ಅಭಿಷೇಕ್-ಐಶ್ವರ್ಯಾ ರೈ!

Abhishek Bacchan-Aishwarya Rai: ಇದೀಗ ದಂಪತಿ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂಬೆಲ್ಲಾ ವದಂತಿಗಳು ಎಲ್ಲೆಡೆ ಹರಡುತ್ತಿದೆ, ಈ ಬೆನ್ನಲ್ಲೇ, 2010 ರಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಪ್ರತಿದಿನ ಜಗಳವಾಡುತ್ತಿದ್ದೆವು ಎಂದು ನೀಡಿರುವ ಹೇಳಿಕೆಯ ಸುದ್ದಿ ವೈರಲ್ ಆಗುತ್ತಿದೆ.

Written by - Bhavishya Shetty | Last Updated : Dec 23, 2023, 10:03 PM IST
    • ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಾಲಿವುಡ್‌’ನ ಅತ್ಯಂತ ಜನಪ್ರಿಯ ಜೋಡಿ
    • ಇದೀಗ ದಂಪತಿ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂಬ ವದಂತಿ ಹರಡುತ್ತಿದೆ
    • ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ 2007ರ ಏಪ್ರಿಲ್ 20 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
ಡಿವೋರ್ಸ್ ಸುದ್ದಿ ಬೆನ್ನಲೇ ಪಬ್ಲಿಕ್’ನಲ್ಲೇ ಜಗಳವಾಡಿದ ಅಭಿಷೇಕ್-ಐಶ್ವರ್ಯಾ ರೈ!  title=
abhishek-aishwarya rai fight in public

Abhishek Bacchan-Aishwarya Rai: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಾಲಿವುಡ್‌’ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಆದರೆ ಇದೀಗ ದಂಪತಿ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂಬೆಲ್ಲಾ ವದಂತಿಗಳು ಎಲ್ಲೆಡೆ ಹರಡುತ್ತಿದೆ, ಈ ಬೆನ್ನಲ್ಲೇ, 2010 ರಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಪ್ರತಿದಿನ ಜಗಳವಾಡುತ್ತಿದ್ದೆವು ಎಂದು ನೀಡಿರುವ ಹೇಳಿಕೆಯ ಸುದ್ದಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: 35 ವರ್ಷವಾದ್ರೂ ಈ ಒಂದು ಬಲವಾದ ಕಾರಣಕ್ಕಾಗಿ ಇನ್ನೂ ಮದುವೆಯಾಗಿಲ್ಲ ಅನುಶ್ರೀ!

ಅವರು ಈ ಜಗಳವನ್ನು ಐಶ್ವರ್ಯಾ ‘ಹೋರಾಟ’ ಎಂದು ಕರೆದರೆ, ಅಭಿಷೇಕ್ ‘ಭಿನ್ನಾಭಿಪ್ರಾಯ’ ಎಂದಿದ್ದರು. ಆದರೆ ಎಷ್ಟೇ ಜಗಳಗಳು ನಡೆದರು ಇವರಿಬ್ಬರು ರಾಜಿ ಮಾಡಿಕೊಳ್ಳುವ ಮೂಲಕ ಅದನ್ನು ಸರಿಪಡಿಸಿಕೊಳ್ಳುತ್ತಿದ್ದರು ಎಂದು ಸ್ವತಃ ಅವರೇ ಹೇಳಿದ್ದಾರೆ.  

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ಅವರು 2007ರ ಏಪ್ರಿಲ್ 20 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 2011ರಲ್ಲಿ, ಮಗಳು ಆರಾಧ್ಯಗೆ ದಂಪತಿ ಪೋಷಕರಾಗುತ್ತಾರೆ. ಇನ್ನು ಇವರಿಬ್ಬರು ಧೂಮ್ 2 (2006), ಗುರು (2007) ಮತ್ತು ರಾವನ್ (2010) ಸೇರಿ ಮುಂತಾದ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಇನ್ನು ಈ ಜೋಡಿ ಎಷ್ಟು ಬಾರಿ ಜಗಳವಾಡುತ್ತಾರೆ ಎಂಬ ಪ್ರಶ್ನೆಗೆ ಈ ಹಿಂದೊಮ್ಮೆ ಉತ್ತರಿಸಿದ್ದರು. "ಓಹ್, ಪ್ರತಿದಿನ" ಎಂದು ಹೇಳಿದ್ದರು. “ಆದರೆ ಅವು ಜಗಳಗಳಲ್ಲ, ಭಿನ್ನಾಭಿಪ್ರಾಯಗಳಿದ್ದಂತೆ. ಗಂಭೀರವಲ್ಲ… ಅದೊಂದು ರೀತಿಯ ಆರೋಗ್ಯಕರ ಚರ್ಚೆ ಎಂದೇ ಹೇಳಬಹುದು” ಎಂದು ಅಭಿಷೇಕ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕಪ್ಪು ಬಣ್ಣದ ಈ ಒಣಹಣ್ಣನ್ನು ನಿತ್ಯ ತಿಂದರೆ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತೆ

ಇನ್ನು ಇವಷ್ಟೇ ಅಲ್ಲದೆ, ಕೆಲವೊಂದು ಕಾರ್ಯಕ್ರಮದಲ್ಲಿ ಜೊತೆಯಾಗಿ ದಂಪತಿ ಹೋದರೆ, ಪಾಪರಾಜಿಗಳು ಐಶ್ವರ್ಯಾ ಸಿಂಗಲ್ ಆಗಿರುವ ಫೋಟೋ ಬೇಕೆಂದು ಮನವಿ ಮಾಡುತ್ತಾರೆ. ಈ ವಿಚಾರಕ್ಕೆ ಅನೇಕ ಬಾರಿ ಅಭಿಷೇಕ್ ಬಚ್ಚನ್ ಬೇಸರಗೊಂದು ಆಕೆಯ ಜೊತೆ ಜಗಳವಾಡುತ್ತಾ ಹೋಗಿರುವುದನ್ನು ಕಾಣಬಹುದು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News