ಆಕ್ಟಿಂಗ್ ಗುರು ರೋಶನ್ ತನೇಜಾ ನಿಧನ

ಮೃತರ ಅಂತ್ಯಕ್ರಿಯೆ ಶನಿವಾರ ಸಂಜೆ 4.30ಕ್ಕೆ ಸಾಂತಾಕ್ರೂಸ್ ವೆಸ್ಟ್ ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ.

Last Updated : May 11, 2019, 12:41 PM IST
ಆಕ್ಟಿಂಗ್ ಗುರು ರೋಶನ್ ತನೇಜಾ ನಿಧನ title=

ನವದೆಹಲಿ: ಬಾಲಿವುಡ್ ನ ಸಾಕಷ್ಟು ಹಿರಿಯ ನಟರಿಗೆ ನಟನೆಯ ತರಬೇತಿ ನೀಡಿದ್ದ ಗುರು ರೋಶನ್ ತನೇಜಾ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಇವರಿಗೆ 87 ವರ್ಷ ವಯಸ್ಸಾಗಿತ್ತು.

"ನನ್ನ ತಂದೆ ಕಳೆದ ರಾತ್ರಿ (ಶುಕ್ರವಾರ) 9.30ಕ್ಕೆ ನಿಧನರಾದರು. ದೀರ್ಘಕಾಲದ ಅನಾರೋಗ್ಯದ ಬಳಿಕ ಕೊನೆಯುಸಿರೆಳೆದಿದ್ದಾರೆ" ಎಂದು ರೋಶನ್ ಪುತ್ರ ರೋಹಿತ್ ತನೇಜಾ ಶನಿವಾರ ಬೆಳಿಗ್ಗೆ ಸುದ್ದಿ ಸಂಸ್ಥೆ ಐಎಎನ್ಎಸ್ ಗೆ ತಿಳಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ಶನಿವಾರ ಸಂಜೆ 4.30ಕ್ಕೆ ಸಾಂತಾಕ್ರೂಸ್ ವೆಸ್ಟ್ ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ. ಮೃತರು ಪತ್ನಿ ಮಿಥಿಕಾ ಮತ್ತು ಪುತ್ರರಾದ ರೋಹಿತ್ ಮತ್ತು ರಾಹುಲ್ ಸೇರಿದಂತೆ ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ.

ಹಿಂದಿ ಚಿತ್ರರಂಗದ ಅದ್ಭುತ ನಟರಾದ ಶಬಾನಾ ಆಜ್ಮಿ, ನಸೀರುದ್ದೀನ್ ಷಾ, ಜಯಾ ಬಚ್ಚನ್, ಅನಿಲ್ ಕಪೂರ್ ಮತ್ತು ಶತ್ರುಘ್ನ ಸಿನ್ಹಾ ಸೇರಿದಂತೆ ಅನೇಕರು ರೋಶನ್ ತನೇಜ ಅವರ ಬಳಿ ನಟನೆಯ ತರಬೇತಿ  ಪಡೆದ್ದಾರೆ.

ಭಾರತದಲ್ಲಿ 'method acting ಪ್ರವರ್ತಕ' ಎಂದು ಕರೆಯಲ್ಪಡುವ ರೋಶನ್ ತನೇಜಾ, ಹಿಂದಿ ಚಲನಚಿತ್ರೋದ್ಯಮದಲ್ಲಿ ಸುಪ್ರಸಿದ್ಧರು. 1960 ರ ದಶಕದಿಂದಲೂ ಅವರು ಪುಣೆಯಲ್ಲಿನ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ (ಎಫ್ಟಿಐಐ) ನಲ್ಲಿ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದ ಅವರು, ಬಳಿಕ ಮುಂಬೈನಲ್ಲಿ ತಮ್ಮದೇ ರೋಶನ್ ತನೇಜ ಆಕ್ಟಿಂಗ್ ಸ್ಕೂಲ್ ತೆರೆದು ಸಾಕಷ್ಟು ಜನರಿಗೆ ನಟನಾ ತರಬೇತಿ ನೀಡಿದ್ದಾರೆ.

Trending News