ನಟ ಚಿರಂಜೀವಿ ಕಾಲಿಗೆ ಶಸ್ತ್ರಚಿಕಿತ್ಸೆ..! ದಿಢೀರನೆ ಎನಾಯ್ತು ಮೆಗಾಸ್ಟಾರ್‌ಗೆ..? 

Chiranjeevi leg surgery : ಕೆಲ ದಿನಗಳ ಹಿಂದೆಯೇ ಚಿರಂಜೀವಿ ಅಮೆರಿಕಕ್ಕೆ ಹೋಗಿದ್ದಾರೆ. ಈ ಕುರಿತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ... ಎಲ್ಲರೂ ಅವರು ರಜೆಯನ್ನು ಎಂಜಾಯ್‌ ಮಾಡೋಕೆ ಹೋಗಿದ್ದಾರೆ ಅಂತ ಅಂದುಕೊಂಡಿದ್ದರು. ಆದ್ರೆ ಆ ಪ್ರಯಾಣದ ಹಿಂದಿನ ಕಥೆ ಇದೀಗ ಬಹಿರಂಗವಾಗಿದೆ.

Written by - Krishna N K | Last Updated : Jul 25, 2023, 10:07 PM IST
  • ಕೆಲ ದಿನಗಳ ಹಿಂದೆಯೇ ಚಿರಂಜೀವಿ ಅಮೆರಿಕಕ್ಕೆ ಹೋಗಿದ್ದಾರೆ.
  • ಈ ಕುರಿತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
  • ಚಿರು ಯುಎಸ್‌ಎ ಪ್ರಯಾಣದ ಹಿಂದಿನ ಕಥೆ ಇದೀಗ ಬಹಿರಂಗವಾಗಿದೆ.
ನಟ ಚಿರಂಜೀವಿ ಕಾಲಿಗೆ ಶಸ್ತ್ರಚಿಕಿತ್ಸೆ..! ದಿಢೀರನೆ ಎನಾಯ್ತು ಮೆಗಾಸ್ಟಾರ್‌ಗೆ..?  title=

Chiranjeevi health news : ʼಭೋಲಾ ಶಂಕರ್‌ʼ ಚಿತ್ರೀಕರಣ ಮುಗಿಸಿ ಮೆಗಾಸ್ಟಾರ್ ಚಿರಂಜೀವಿ ಅವರು ಅಮೇರಿಕಾ ಪ್ರವಾಸಕ್ಕೆ ಹೋಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ, ತಮ್ಮ ಪತ್ನಿ ಸುರೇಖಾ ಜೊತೆ ವಿಮಾನದಲ್ಲಿರುವ ಕೆಲವೊಂದಿಷ್ಟು ಫೋಟೋಗಳನ್ನು ಚಿರು ಹಂಚಿಕೊಂಡಿದ್ದರು. ಆದ್ರೆ, ಅವರು ಆರೋಗ್ಯ ಸಮಸ್ಯೆ ನಿಮಿತ್ತ ಯುಎಸ್‌ಎಗೆ ಹೋಗಿದ್ದಾಗಿ ಇದೀಗ ತಿಳಿದು ಬಂದಿದೆ. 

ಹೌದು.. ಚಿರಂಜೀವಿ ಅವರು ಕೆಲವು ದಿನಗಳಿಂದ ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಅವರು ಚಿಕಿತ್ಸೆಗೆಂದು ಅಮೆರಿಕಕ್ಕೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿ ಮೆಗಾಸ್ಟಾರ್ ಅವರ ಕಾಲಿಗೆ ಶಸ್ತ್ರಚಿಕಿತ್ಸೆಗೆ ಮಾಡಲಾಗಿದ್ದು, ಈ ವಿಷಯವನ್ನು ಆರಂಭದಲ್ಲಿ ಗೌಪ್ಯವಾಗಿಟ್ಟಿದ್ದರೂ ಸಹ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ನನ್ನ ಎದೆ ನೋಡಿ, ಗಾತ್ರ ಎಷ್ಟು.. ಮುಟ್ಟಬಹುದೇ..? ಅಂತ ಕೇಳಿದ ಆ ನಿರ್ದೇಶಕ

ಎನಾಯ್ತು ಚಿರಂಜೀವಿಗೆ ಕಾಲಿಗೆ : ಚಿರಂಜೀವಿ ಅವರ ಕಾಲಿಗೆ ಎನಾಗಿದೆ ಎಂದು ಇನ್ನೂ ಬಹಿರಂಗವಾಗಿಲ್ಲ ಆದರೆ... ಆತಂಕ ಪಡುವಂತಹ ವಿಚಾರವಿಲ್ಲ ಎಂದು ಹೇಳಲಾಗಿದೆ. ಚಿರು ಕಾಲಿಗೆ ನಡೆದಿರುವುದು ಸಣ್ಣ ಶಸ್ತ್ರಚಿಕಿತ್ಸೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎನ್ನುತ್ತಾರೆ ಚಿರಂಜೀವಿ ಆಪ್ತರು. 

ಅಮೆರಿಕದಿಂದ ಚಿರಂಜೀವಿ ವಾಪಸಾದ ಬಳಿಕ ಹೊಸ ಸಿನಿಮಾ ಶುರು ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಸುಶ್ಮಿತಾ ಕೊನಿಡೇಲಾ ಅವರ ಗೋಲ್ಡ್ ಬಾಕ್ಸ್ ಎಂಟರ್‌ಟೈನ್‌ಮೆಂಟ್ಸ್ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾದ ಎಲ್ಲಾ ಸ್ಕ್ರಿಪ್ಟ್ ವರ್ಕ್ ಈಗಾಗಲೇ ಕಂಪ್ಲೀಟ್ ಆಗಿದ್ದು, ಚಿರು ಮಲಯಾಳಂ 'ಬ್ರೋ ಡ್ಯಾಡಿ' ಚಿತ್ರದ ರೀಮೇಕ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಅದ್ಭುತ ಮೈಲೇಜ್ ನೀಡುವ ಈ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯ!

ಇನ್ನು ಚಿರಂಜೀವಿ ಅಮೆರಿಕದಿಂದ ವಾಪಸಾದ ಬಳಿಕ ‘ಭೋಲಾ ಶಂಕರ್’ ಚಿತ್ರದ ಪ್ರಚಾರ ಆರಂಭಿಸಲಿದ್ದಾರೆ. ಈ ಚಿತ್ರ ಆಗಸ್ಟ್ 11 ರಂದು ತೆರೆಗೆ ಬರಲಿದೆ. ತಮನ್ನಾ ಭಾಟಿಯಾ ಇದರಲ್ಲಿ ಚಿರು ಜೋಡಿಯಾಗಿ ನಟಿಸಿದ್ದಾರೆ. ಕೀರ್ತಿ ಸುರೇಶ್, ಸುಶಾಂತ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಮೆಹರ್ ರಮೇಶ್ ನಿರ್ದೇಶಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News