ಜಾಹೀರಾತಿನಲ್ಲಿ ಕಾಣಿಸಿಕೊಂಡ ಡಿವೈನ್‌ ಸ್ಟಾರ್: ಪಂಚೆಯುಟ್ಟು ತುಳುನಾಡ ಸಂಸ್ಕೃತಿ ಬಿಂಬಿಸಿದ ರಿಷಬ್!

Divine Star Rishab Shetty: ಸ್ಯಾಂಡಲ್‌ವುಡ್‌ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ನಂತರ ಇದೀಗ ಜಾಹಿರಾತಿನ ಜಗತ್ತಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ನಟ ಸೋಷಿಯಲ್‌ ಮಿಡಿಯಾದಲ್ಲಿ ತಾವು ಪಂಚೆಯುಟ್ಟು ತುಳುನಾಡ ಸಂಸ್ಕೃತಿ ಬಿಂಬಿಸುವ ಜಾಹಿರಾತು ಮಾಡಿದನ್ನು ಹಂಚಿಕೊಂಡಿದ್ದಾರೆ.  

Written by - Zee Kannada News Desk | Last Updated : Jan 27, 2024, 10:40 AM IST
  • ಡಿವೈನ್‌ ಸ್ಟಾರ್‌ ಎಂದೇ ಪ್ರಖ್ಯಾತಿ ಪಡೆದಿರುವ ನಟ ರಿಷಬ್ ಶೆಟ್ಟಿ, ಅಭಿನಯ ಹಾಗೂ ನಿರ್ದೇಶನದ ಬಳಿಕ, ಇದೀಗ ಜಾಹೀರಾತಿಗೂ ಕಾಲಿಟ್ಟಿದ್ದಾರೆ.
  • ರಿಷಬ್ ಶೆಟ್ಟಿ ಎಲ್ಲೆಡೆ ತಮ್ಮ ಕಾಂತಾರದ ಮೂಲಕ ತುಳುನಾಡಿನ ಸಂಸ್ಕೃತಿ ಬಿಂಬಿಸಿದ್ದು, ಅಲ್ಲಿಯ ಪ್ರದೇಶದಲ್ಲಿರೋ ಪಂಚೆ ಧರಿಸೋ ಪದ್ಧತಿಯನ್ನು ಸದಾ ಫಾಲಿಸಿಕೊಂಡು ಬಂದಿದ್ದಾರೆ.
  • ಈ ಒಂದು ಜಾಹೀರಾತಿನಲ್ಲಿ ಮೊದಲು ರಾಕಿಂಗ್ ಸ್ಟಾರ್ ಯಶ್ ಮಾಡಿದ್ದು, ಬಳಿಕ ದರ್ಶನ್, ಕಿಚ್ಚ ಸುದೀಪ್, ಶ್ರೀಮುರಳಿ, ಪುನೀತ್ ರಾಜಕುಮಾರ್ ಹೀಗೆ ಎಲ್ಲರೂ ಕಾಣಿಸಿಕೊಂಡಿದ್ದಾರೆ.
ಜಾಹೀರಾತಿನಲ್ಲಿ ಕಾಣಿಸಿಕೊಂಡ ಡಿವೈನ್‌ ಸ್ಟಾರ್: ಪಂಚೆಯುಟ್ಟು ತುಳುನಾಡ ಸಂಸ್ಕೃತಿ ಬಿಂಬಿಸಿದ ರಿಷಬ್! title=

Rishab Shetty In Advertisement: ಚಂದನವನದಲ್ಲಿ ಡಿವೈನ್‌ ಸ್ಟಾರ್‌ ಎಂದೇ ಪ್ರಖ್ಯಾತಿ ಪಡೆದಿರುವ ನಟ ರಿಷಬ್ ಶೆಟ್ಟಿ, ಅಭಿನಯ ಹಾಗೂ ನಿರ್ದೇಶನದ ಬಳಿಕ, ಇದೀಗ  ಜಾಹೀರಾತಿಗೂ ಕಾಲಿಟ್ಟಿದ್ದಾರೆ. ರಿಷಬ್‌ ಶೆಟ್ಟಿ ಜಾಹಿರಾತಿನಲ್ಲಿ ತುಳುನಾಡ ಸಂಸ್ಕೃತಿ ಬಿಂಬಿಸೋ ಪಂಚೆಯನ್ನು ಉಟ್ಟುಕೊಂಡು ಎಲ್ಲೆಡೆ ಕಾಣಿಸಿಕೊಂಡು, ಕಲೆ-ಸಂಸ್ಕೃತಿ ಸೇರಿದಂತೆ ಭಾಷೆ ಹೀಗೆ ಹತ್ತು ಹಲವು ವಿಚಾರಗಳನ್ನ ನಿರೂಪಿಸುವುದರ ಜೊತೆಗೆ, ಹಲವು ವಿಶೇಷತೆಗಳನ್ನೂ ಕೂಡ ಈ ಜಾಹೀರಾತಿನಲ್ಲಿ ಹೇಳಿಕೊಂಡಿದ್ದಾರೆ. 

ರಿಷಬ್ ಶೆಟ್ಟಿ ಎಲ್ಲೆಡೆ ತಮ್ಮ ಕಾಂತಾರದ ಮೂಲಕ ತುಳುನಾಡಿನ ಸಂಸ್ಕೃತಿ ಬಿಂಬಿಸಿದ್ದು, ಅಲ್ಲಿಯ ಪ್ರದೇಶದಲ್ಲಿರೋ ಪಂಚೆ ಧರಿಸೋ ಪದ್ಧತಿಯನ್ನು ಸದಾ ಫಾಲಿಸಿಕೊಂಡು ಬಂದಿದ್ದಾರೆ. ಈ ಮೂಲಕ ತಮ್ಮ ಸಂಸ್ಕೃತಿಯನ್ನ ಎಲ್ಲೆಡೆ ಬಿಂಬಿಸುತ್ತಲೇ ಇದ್ದು, ಇದೀಗ ಈ ಒಂದು ಜಾಹೀರಾತಿನಲ್ಲಿ ಕಲೆ ಮತ್ತು ಸಂಸ್ಕೃತಿಯ ನಿರೂಪಣೆ ಮಾಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Rishab Shetty (@rishabshettyofficial)

ಇದನ್ನೂ ಓದಿ: Padma Awards 2024: ಒಂದಕ್ಕಿಂತ ಹೆಚ್ಚು 'ಪದ್ಮ' ಪ್ರಶಸ್ತಿಗಳನ್ನು ಪಡೆದ ಸೆಲೆಬ್ರಿಟಿಗಳು ಇವರೇ!

ಪ್ರತಿ ನೂರ ಕಿಲೋಮೀಟರ್‌ಗೆ ಭಾಷೆ ಬದಲಾಗುತ್ತದೆ, ಹಾಗೆ ಸಾಗಿದಂತೆ ಸಂಸ್ಕೃತಿ ಕೂಡ ಬದಲಾಗುತ್ತದೆ ಎಂದು ಹೇಳುತ್ತಾರೆ. ಹೀಗೆ ನಮ್ಮ ದೇಶದಲ್ಲಿರೋ ವಿವಿಧ ಭಾಷೆ ಮತ್ತು ಕಲ್ಚರ್ ಕುರಿತು ಡಿವೈನ್‌ ಸ್ಟಾರ್‌ ಹೇಳಿಕೊಂಡಿದ್ದಾರೆ. ಈ ಒಂದು ಜಾಹೀರಾತಿನಲ್ಲಿ ಮೊದಲು ರಾಕಿಂಗ್ ಸ್ಟಾರ್ ಯಶ್  ಮಾಡಿದ್ದು, ಬಳಿಕ ದರ್ಶನ್, ಕಿಚ್ಚ ಸುದೀಪ್, ಶ್ರೀಮುರಳಿ, ಪುನೀತ್ ರಾಜಕುಮಾರ್ ಹೀಗೆ ಎಲ್ಲರೂ  ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಈ ಎಲ್ಲಾ ನಟರಾದಮೇಲೆ, ಇದೀಗ ರಿಷಬ್ ಶೆಟ್ಟಿ ಈ ಒಂದು ಜಾಹೀರಾತು ಮಾಡಿ, ತಮ್ಮ ಈ ಜಾಹೀರಾತಿನ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಸದ್ಯ ಈ ನಟ ಕಾಂತಾರ ಚಾಪ್ಟರ್-1 ಕೆಲಸದಲ್ಲಿಯೇ ಬ್ಯುಸಿ ಆಗಿದ್ದು, ಮೊನ್ನೆ ಅಯೋಧ್ಯೆಗೂ ಸಹ ಭೇಟಿ ನೀಡಿ, ಬಾಲ ರಾಮನ ಪ್ರಾಣ ಪ್ರತಿಷ್ಠಾಪಣೆಯನ್ನ ಕಣ್ತುಂಬಿಕೊಂಡು ಬಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News