Actor Prabhas : ನಟ ಪ್ರಭಾಸ್‌ ಮದುವೆ ಘೋಷಣೆ..! ವೈರಲ್‌ ಆಯ್ತು ಡಾರ್ಲಿಂಗ್‌ ಫೋಸ್ಟ್‌.. ಅನುಷ್ಕಾ ಶೆಟ್ಟಿ ಕೈ ಹಿಡಿತಾರಾ ರೆಬಲ್‌..? 

Actor Prabhas post : ಪ್ರಭಾಸ್ ಮದುವೆ ಯಾವಾಗ..? ಎನ್ನುವ ಪ್ರಶ್ನೆ ಹುಟ್ಟಿಕೊಂಡು ಹಲವಾರು ವರ್ಷಗಳೇ ಆಯ್ತು. ರೆಬಲ್‌ ಯಾವಾಗ ಡಬಲ್‌ ಆಗ್ತಾರೆ ಅಂತ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ನಟ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಲು ರೆಡಿಯಾಗಿದ್ದಾಗಿ ತಿಳಿಸಿದ್ದಾರೆ.

Written by - Krishna N K | Last Updated : May 17, 2024, 01:49 PM IST
    • ಯಂಗ್‌ ರೆಬೆಲ್‌ ಸ್ಟಾರ್‌ ಪ್ರಭಾಸ್ ಪೋಸ್ಟ್‌ ವೈರಲ್‌
    • ಮದುವೆ ಬಗ್ಗೆ ಹಿಂಟ್‌ ನೀಡಿದ್ರಾ ಪ್ರಭಾಸ್‌
    • ವಿಶೇಷ ವ್ಯಕ್ತಿಯ ಆಗಮನ ಬಗ್ಗೆ ಹಿಂಟ್‌ ನೀಡಿದ ನಟ
Actor Prabhas : ನಟ ಪ್ರಭಾಸ್‌ ಮದುವೆ ಘೋಷಣೆ..! ವೈರಲ್‌ ಆಯ್ತು ಡಾರ್ಲಿಂಗ್‌ ಫೋಸ್ಟ್‌.. ಅನುಷ್ಕಾ ಶೆಟ್ಟಿ ಕೈ ಹಿಡಿತಾರಾ ರೆಬಲ್‌..?  title=
Prabhas

Prabhas instagram post : ಯಂಗ್‌ ರೆಬೆಲ್‌ ಸ್ಟಾರ್‌ ಪ್ರಭಾಸ್ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್‌ (Kalki 2898 AD actor Prabhas shares cryptic note) ಒಂದು ಭಾರೀ ಸಂಚಲನ ಸೃಷ್ಟಿಸುತ್ತಿದೆ. ಇಷ್ಟು ದಿನ ಸಿಂಗಲ್‌ ಆಗಿದ್ದ ನಟ ಕೊನೆಗೂ ಮಿಂಗಲ್‌ ಆಗುವ ಸೂಚನೆ ನೀಡಿದ್ದು, ತಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯ ಆಗಮನ ಬಗ್ಗೆ ಹಿಂಟ್‌ ನೀಡಿದ್ದಾರೆ... ಈ ಕುರಿತು ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ..

ಹೌದು.. ಡಾರ್ಲಿಂಗ್‌ ಪ್ರಭಾಸ್‌ ಮದುವೆಯ ಬಗ್ಗೆ ಸುಳಿವು ನೀಡಿದ್ದಾರೆ. ತಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿ ಬರುತ್ತಿದ್ದಾರೆ ಅಂತ ಸ್ಟೇಟಸ್‌ ಹಾಕಿದ್ದು, ಶೀಘ್ರವೇ ನಟ ಮದುವೆಯ ಬಗ್ಗೆ ಹಾಗೂ ಮದುವೆಯಾಗಲಿರುವ ಹುಡುಗಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಅಂತ ಹೇಳಲಾಗುತ್ತಿದೆ. ಸಧ್ಯ ಯಂಗ್‌ ರೆಬಲ್‌ ಸ್ಟಾರ್‌ ಪೋಸ್ಟ್‌ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ:ಅಯೋಗ್ಯ.. ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಮಹಾಪಾಪ : ನಟ ಕಿಶೋರ್‌ 

ಪ್ರಭಾಸ್ ಮದುವೆ ಯಾವಾಗ..? ಎನ್ನುವ ಪ್ರಶ್ನೆ ಹುಟ್ಟಿಕೊಂಡು ಹಲವಾರು ವರ್ಷಗಳೇ ಆಯ್ತು. ರೆಬಲ್‌ ಯಾವಾಗ ಡಬಲ್‌ ಆಗ್ತಾರೆ ಅಂತ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಲ್ಲದೆ, ಇತ್ತೀಚಿಗೆ ಪ್ರಭಾಸ್ ಅನುಷ್ಕಾ ಜೊತೆ ಮದುವೆಯಾಗುತ್ತಿದ್ದಾರೆ (anushka shetty marriage) ಎಂದು ಹೇಳಲಾಗುತ್ತಿತ್ತು. ಇವೆಲ್ಲವೂ ವದಂತಿ ಅಂತ ಪ್ರಭಾಸ್ ತಳ್ಳಿ ಹಾಕಿದ್ದರು. 

Open photo

ಮದುವೆ ಬಗ್ಗೆ ಪ್ರಭಾಸ್ ಪ್ರತಿಕ್ರಿಯಿಸಿದ್ದು ಅಪರೂಪ. ಶೋ ಒಂದರಲ್ಲಿ ಮದುವೆಯಾಗುವ ಬಗ್ಗೆ ನಟ ಬಾಲಕೃಷ್ಣ ಕೇಳಿದಾಗ, ಸಲ್ಮಾನ್‌ ಖಾನ್‌ ಮದುವೆಯಾದ ನಂತರ ಅಂತ ಸಿಲ್ಲಿ ಉತ್ತರ ನೀಡಿ ಜಾರಿಕೊಂಡಿದ್ದರು. ಆದರೆ ಇದೀಗ ಏಕಾಏಕಿ ಸ್ಪೇಷಲ್‌ ಪೋಸ್ಟ್‌ ಹಾಕಿರುವ ಪ್ರಭಾಸ್‌ ಕೊನೆಗೂ ಸಪ್ತಪದಿ ತುಳಿಯಲು ರೆಡಿಯಾದ್ರಾ ಎನ್ನುವ ಅನುಮಾನ ಹುಟ್ಟು ಹಾಕಿದೆ.

ಇದನ್ನೂ ಓದಿ:ಜೂನ್ 14 ರಂದು ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ "chef ಚಿದಂಬರ"..! 

40 ಪ್ಲಸ್ ಆಗಿರುವ ಪ್ರಭಾಸ್ ಸಧ್ಯ  'ಡಾರ್ಲಿಂಗ್ಸ್... ಕೊನೆಗೂ ನಮ್ಮ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಬರುತ್ತಿದ್ದಾನೆ. ಸ್ವಲ್ಪ ಕಾಯಿರಿ' ಅಂತ Instagram ನಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ಶೀಘ್ರವೇ ಮದುವೆ ಬಗ್ಗೆ ಸಿಹಿ ಸುದ್ದಿ ನೀಡ್ತಾರೆ ಅಂತ ಕಾತುರರಾಗಿದ್ದಾರೆ. ಅಲ್ಲದೆ, ಕೆಲವರು ಭಾವಿ ಪತ್ನಿಯನ್ನು ಪರಿಚಯಿಸಲಿದ್ದಾರೆ ಅಂತ ಹೇಳುತ್ತಿದ್ದಾರೆ..

ಇನ್ನೂ ಕೆಲ ನೆಟ್ಟಿಗರು, ಇದು ಕಲ್ಕಿ ಚಿತ್ರದ ಪಬ್ಲಿಸಿಟಿ ಸ್ಟಂಟ್. ಸದ್ಯದಲ್ಲೇ ಕಲ್ಕಿ ಚಿತ್ರದ (Kalki 2898 AD) ಅದ್ಧೂರಿ ಪ್ರೀ ರಿಲೀಸ್ ಸಮಾರಂಭ ನಡೆಯಲಿದೆ. ಇದನ್ನು ತಿಳಿಸಲು ಪ್ರಭಾಸ್ ಈ ಪೋಸ್ಟ್ ಮಾಡಿದ್ದಾರೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಕಲ್ಕಿ ಚಿತ್ರದಲ್ಲಿ ಪಾಯಲ್ ರಜಪೂತ್ ಒಂದು ಪಾತ್ರವನ್ನು ನಿರ್ವಹಿಸಲಿದ್ದು, ಅವರನ್ನ ಪರಿಚಯ ಮಾಡಿಲು ನಟ ಈ ರೀತಿ ಪೋಸ್ಟ್‌ ಹಾಕಿರಬಹುದು ಅಂತ ನೆಟ್ಟಿಜನ್ಸ್‌ ಚರ್ಚೆ ನಡೆಸಿದ್ದಾರೆ. ಅದೇನೇ ಇರಲಿ, ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News