ಅವರು ನನ್ನ ಸಿನಿಮಾದ ರೇಟಿಂಗ್ ಬದಲಿಸಬಹುದು ಹೊರತು, ನನ್ನ ಮನಸ್ಸನ್ನಲ್ಲ - ದೀಪಿಕಾ ಪಡುಕೋಣೆ ಖಡಕ್ ಮಾತು

ಇತ್ತೀಚಿಗೆ ಐಎಮ್‌ಡಿಬಿಯಲ್ಲಿ ತಮ್ಮ ಛಪಾಕ್ ಸಿನಿಮಾದ ರೇಟಿಂಗ್ ಕಡಿಮೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ದೀಪಿಕಾ ಪಡುಕೋಣೆ ಖಡಕ್ ಉತ್ತರ ನೀಡಿದ್ದಾರೆ.

Last Updated : Feb 1, 2020, 09:26 AM IST
ಅವರು ನನ್ನ ಸಿನಿಮಾದ ರೇಟಿಂಗ್ ಬದಲಿಸಬಹುದು ಹೊರತು, ನನ್ನ ಮನಸ್ಸನ್ನಲ್ಲ - ದೀಪಿಕಾ ಪಡುಕೋಣೆ ಖಡಕ್ ಮಾತು  title=

ನವದೆಹಲಿ: ಇತ್ತೀಚಿಗೆ ಐಎಮ್‌ಡಿಬಿಯಲ್ಲಿ ತಮ್ಮ ಛಪಾಕ್ ಸಿನಿಮಾದ ರೇಟಿಂಗ್ ಕಡಿಮೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ದೀಪಿಕಾ ಪಡುಕೋಣೆ ಖಡಕ್ ಉತ್ತರ ನೀಡಿದ್ದಾರೆ.

ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ದೀಪಿಕಾ ಅವರು 'ಅವರು ನನ್ನ ಸಿನಿಮಾದ ಐಎಂಡಿಬಿ ರೇಟಿಂಗ್ ಬದಲಾಯಿಸಬಹುದು ಹೊರತು ನನ್ನ ಮನಸ್ಸನ್ನಲ್ಲ' ಎಂದು ದೀಪಿಕಾ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಕ್ಕೆ ಭೇಟಿ ನೀಡಿ ಅಲ್ಲಿ ಹಲ್ಲೆಗೋಳಗಾದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. ಇದೇ ಸಂದರ್ಭದಲ್ಲಿ ಆಸಿಡ್ ದಾಳಿಗೆ ಒಳಗಾದ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಛಪಾಕ್ ಸಿನಿಮಾ ಕೂಡ ಬಿಡುಗಡೆಯಾಯಿತು.

ಹಲವರು ಈ ಈ ಚಿತ್ರವನ್ನು ಬಹಿಷ್ಕರಿಸಲು ಕರೆ ನೀಡಿದರೆ ಹಲವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಲ್ಲದೆ ದೀಪಿಕಾ ಪರವಾಗಿ ನಿಂತರು. ಇದರ  ತರುವಾಯ, ಚಿತ್ರದ ಋಣಾತ್ಮಕ ವಿಮರ್ಶೆಗಳು ಮತ್ತು ಐಎಮ್‌ಡಿಬಿ ರೇಟಿಂಗ್ ತಕ್ಷಣ ಕಡಿಮೆಯಾಯಿತು.ಸದ್ಯ ಐಎಂಡಿಬಿಯಲ್ಲಿ ಛಪಾಕ್ ಶೇ 56 ರಷ್ಟು 1-ಸ್ಟಾರ್ ರೇಟಿಂಗ್ಸ್ ಮತ್ತು 31 ಶೇಕಡಾ 10-ಸ್ಟಾರ್ ರೇಟಿಂಗ್ ಹೊಂದಿದೆ.

ಜನವರಿ 7 ರಂದು, ದೀಪಿಕಾ ಪಡುಕೋಣೆ ಜೆಎನ್‌ಯುಗೆ ಭೇಟಿ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಆ ಸಂದರ್ಭದಲ್ಲಿ ಕ್ಯಾಂಪಸ್‌ನಲ್ಲಿ ಮುಖವಾಡಧಾರಿಗಳಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಂತರು. ವಿದ್ಯಾರ್ಥಿ ಮುಖಂಡರಾದ ಐಶೆ ಘೋಷ್ ಮತ್ತು ಇತರರೊಂದಿಗೆ ದೀಪಿಕಾ ನಿಂತಿರುವ ಚಿತ್ರಗಳು ವೈರಲ್ ಆಗುತ್ತಿದ್ದಂತೆ, ಅವರ ಪರ ಮತ್ತು ವಿರೋಧ ಹ್ಯಾಶ್ ಟ್ಯಾಗ್ ಗಳು ಕೇಳಿ ಬಂದವು.

 

Trending News