ಲಾಕ್ ಡೌನ್ ನಲ್ಲಿ ಹೇರ ಕಟ್ ಮಾಡಿದ 'ಬಹುಮುಖ ಪ್ರತಿಭೆ' ಹೆಸರು ಬಹಿರಂಗಪಡಿಸದ ಅಲಿಯಾ ಭಟ್..!

ದೇಶಾದ್ಯಂತ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಈಗ ಜೀವನ ಸ್ಥಬ್ದಗೊಂಡಿದೆ. ಇದು ನಟ ನಟಿಯರ ಮೇಲೆಯೂ ಕೂಡ ಪ್ರಭಾವ ಬಿರಿದೆ. ವಿಷಯ ಏನಪ್ಪಾ ಅಂದರೆ ಬಾಲಿವುಡ್ ನಟಿ ಇತ್ತೀಚಿಗೆ ತಮ್ಮ ಹೇರ್ ಕಟಿಂಗ್ ಮಾಡಿಸಿಕೊಂಡಿರುವ ಕುರಿತಾಗಿ ಇನ್ಸಾಗ್ರಾಂ ನಲ್ಲಿ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ.

Last Updated : May 17, 2020, 04:12 PM IST
ಲಾಕ್ ಡೌನ್ ನಲ್ಲಿ ಹೇರ ಕಟ್ ಮಾಡಿದ 'ಬಹುಮುಖ ಪ್ರತಿಭೆ' ಹೆಸರು ಬಹಿರಂಗಪಡಿಸದ ಅಲಿಯಾ ಭಟ್..! title=
Photo Courtsey : Instagram

ನವದೆಹಲಿ: ದೇಶಾದ್ಯಂತ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಈಗ ಜೀವನ ಸ್ಥಬ್ದಗೊಂಡಿದೆ. ಇದು ನಟ ನಟಿಯರ ಮೇಲೆಯೂ ಕೂಡ ಪ್ರಭಾವ ಬಿರಿದೆ. ವಿಷಯ ಏನಪ್ಪಾ ಅಂದರೆ ಬಾಲಿವುಡ್ ನಟಿ ಇತ್ತೀಚಿಗೆ ತಮ್ಮ ಹೇರ್ ಕಟಿಂಗ್ ಮಾಡಿಸಿಕೊಂಡಿರುವ ಕುರಿತಾಗಿ ಇನ್ಸಾಗ್ರಾಂ ನಲ್ಲಿ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಆದರೆ ಅವರು ತಮ್ಮ ಪೋಸ್ಟ್ ನಲ್ಲಿ ತಮ್ಮ ಪ್ರೀತಿ ಪಾತ್ರ ಬಹುಮುಖ ವ್ಯಕ್ತಿಯೊಬ್ಬರು ತಮ್ಮ ಹೇರ್ ಕಟಿಂಗ್ ಮಾಡಿರುವುದನ್ನು ಉಲ್ಲೇಖಿಸಿದ್ದಾರೆ. ಆದರೆ ಆ ವ್ಯಕ್ತಿ ಯಾರು ಎನ್ನುವ ವಿಚಾರವನ್ನು ಅವರು ಬಹಿರಂಗಪಡಿಸದೆ ಕೇವಲ ಸುಳಿವನ್ನು ನೀಡಿದ್ದಾರೆ.

ಅವರು ಹೆಸರು ಬಹಿರಂಗಪಡಿಸದೇ ಇದ್ದರು ಕೂಡ ಬಹುತೇಕ ಅಭಿಮಾನಿಗಳು ಆಲಿಯಾ ಪ್ರಿಯತಮ ರಣಬೀರ್ ಕಪೂರ್ ಈಗ ಕಟಿಂಗ್ ಮಾಡಿರುವುದು ಎಂದು ಭಾವಿಸಿದ್ದಾರೆ. ಏಕೆಂದರೆ ಈ ಇಬ್ಬರು ಜೋಡಿಗಳು ಡೇಟಿಂಗ್ ಮಾಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಮತ್ತು ಬಹುತೇಕರು ಈ ಇಬ್ಬರು ಜೋಡಿಗಳು ಶೀಘ್ರದಲ್ಲೇ ಮದುವೆ ಕೂಡ ಆಗಲಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ.

ಆಲಿಯಾ ಭಾನುವಾರ ತನ್ನ ಮನೆಯ ಜಿಮ್‌ನಿಂದ ಕನ್ನಡಿಯ ಸೆಲ್ಫಿ ಹಂಚಿಕೊಂಡಿದ್ದು, ಪೋಟೋದಲ್ಲಿ ಅವರು ನೂತನ ಹೇರ್ ಕಟಿಂಗ್ ನಿಂದಾಗಿ ಕಂಗೊಳಿಸುತ್ತಿದ್ದಾರೆ. ಅಲ್ಲದೆ ಲಾಕ್ ಡೌನ್ ಸಮಯದಲ್ಲಿ ಫಿಟ್ನೆಸ್ ಮಂತ್ರವನ್ನು ಅವು ಜಪಿಸಿದ್ದಾರೆ. ಇನ್ನೊಂದೆಡೆ ಅಭಿಮಾನಿಗಳು ಅಲಿಯಾ ಭಟ್ ಹೇರ್ ಸ್ಟೈಲ್ ಗೆ ಮಾರು ಹೋಗಿದ್ದಾರೆ.

ರಣಬೀರ್ ಅವರ ತಂದೆ ಮತ್ತು ಹಿರಿಯ ನಟ ರಿಷಿ ಕಪೂರ್ ಅವರ ಇತ್ತೀಚಿನ ಸಾವಿನ ನಂತರ ಈ ನಟ ಸ್ವಲ್ಪ ಸಮಯದವರೆಗೆ ಇನ್ಸ್ಟಾಗ್ರಾಮ್ ನಲ್ಲಿ ಅಷ್ಟು ಆಕ್ಟಿವ್ ಇಲ್ಲ.

Trending News