ಆಲಿಯಾ ಭಟ್‌ಗೆ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಲು ಸಾಧ್ಯವಿಲ್ಲವಂತೆ! ಯಾಕೆ ಗೊತ್ತಾ?

ಬಾಲಿವುಡ್ ನಟಿ ಆಲಿಯಾ ಭಟ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Last Updated : Apr 15, 2019, 04:52 PM IST
ಆಲಿಯಾ  ಭಟ್‌ಗೆ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಲು ಸಾಧ್ಯವಿಲ್ಲವಂತೆ! ಯಾಕೆ ಗೊತ್ತಾ? title=

ನವದೆಹಲಿ: ಬಾಲಿವುಡ್ ನಟಿ ಆಲಿಯಾ ಭಟ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ, ವರುಣ್ ಧವನ್, ಆದಿತ್ಯ ರಾಯ್ ಕಪೂರ್, ಸೋನಾಕ್ಷಿ ಮತ್ತು ಅಲಿಯಾ ಅವರನ್ನು ನಿಮ್ಮ ಮೇಲೆ ಚುನಾವಣೆ ಹೇಗೆ ಪರಿಣಾಮ ಬೀರಲಿದೆ ಎಂಬ ಪ್ರಶ್ನೆ ಕೇಳಲಾಯಿತು. ಅದಕ್ಕೆ "ಮತದಾನದ ಮೂಲಕ" ಎಂದು ಎಲ್ಲರೂ ಉತ್ತರಿಸಿದರೆ, ಆಲಿಯಾ ಮಾತ್ರ ಮತದಾನ ಮಾಡಲು ಸಾಧ್ಯವಿಲ್ಲ ಎಂದರಲ್ಲದೆ ಅದಕ್ಕೆ ತಮ್ಮ ಪಾಸ್ ಪೋರ್ಟ್ ಕಾರಣ ಎಂದು ಬಹಿರಂಗಪಡಿಸಿದ್ದಾರೆ.

2014 ರಲ್ಲಿ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಸಹ ತಾವು ಮತ ಚಲಾಯಿಸಲು ಸಾಧ್ಯವಾಗದ ಬಗ್ಗೆ ಆಲಿಯಾ ತನ್ನ ಕಳವಳ ವ್ಯಕ್ತಪಡಿಸಿದ್ದರು. "ದುರದೃಷ್ಟವಶಾತ್, ನಾನು ಮತ ಚಲಾಯಿಸಲು ಸಾಧ್ಯವಿಲ್ಲ. ಏಕೆಂದರೆ ನಾನು ಬ್ರಿಟಿಷ್ ಪಾಸ್ಪೋರ್ಟ್ ಹೊಂದಿದ್ದೇನೆ. ಈಗಾಗಲೇ ಸಮಯ ಮೀರಿದೆ. ದ್ವಿಪೌರತ್ವ ಹೊಂದಿದ ಬಳಿಕ ಮುಂದಿನ ಚುನಾವಣೆ ಹೊತ್ತಿಗೆ ಮತದಾರರ ಪತ್ರಕ್ಕೆ ಅರ್ಜಿ ಸಲ್ಲಿಸುತ್ತೇನೆ" ಎಂದಿದ್ದರು. ಆದರೆ 2019ರ ಲೋಕಸಭಾ ಚುನಾವಣೆ ಬಂದರೂ ಸಹ ಆಲಿಯಾ ಮತದಾರರ ಕಾರ್ಡ್ ಹೊಂದಲು ಸಾಧ್ಯವಾಗಿಲ್ಲ.

Trending News