ಮಗಳು ಇರಾ ಪೋಸ್ಟ್ ಮಾಡಿದ ಅಮೀರ್ ಖಾನ್ ಅವರ ಫೋಟೋ ಕಂಡು ಅಚ್ಚರಿಗೊಂಡ ಫ್ಯಾನ್ಸ್

ಅಮೀರ್ ಖಾನ್ ಮಗಳು ಇರಾ ಖಾನ್ ಫಾದರ್ಸ್ ಡೇ ವಿಶೇಷ ಸಂದರ್ಭದಲ್ಲಿ ತಂದೆಯ ವಿಶೇಷ ಫೋಟೋವನ್ನು ಹಂಚಿಕೊಂಡಿದ್ದಾರೆ.  

Last Updated : Jun 22, 2020, 01:01 PM IST
ಮಗಳು ಇರಾ ಪೋಸ್ಟ್ ಮಾಡಿದ ಅಮೀರ್ ಖಾನ್ ಅವರ ಫೋಟೋ ಕಂಡು ಅಚ್ಚರಿಗೊಂಡ ಫ್ಯಾನ್ಸ್ title=
Pic Courtesy: Instagram

ನವದೆಹಲಿ:  ಜೂನ್ 21ರಂದು ವಿಶ್ವದಾದ್ಯಂತ 2020ರ ಫಾದರ್ಸ್ ಡೇ ಆಚರಿಸಲಾಯಿತು. ಬಾಲಿವುಡ್ ತಾರೆಯರು ಕೂಡ ತಂದೆಯ ದಿನವನ್ನು ಬಹಳ ಉತ್ಸಾಹದಿಂದ ಆಚರಿಸಿದರು.  ಹಲವರು ತನ್ನ ತಂದೆಯೊಂದಿಗಿನ ಬಾಲ್ಯದ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಏತನ್ಮಧ್ಯೆ, ಅಮೀರ್ ಖಾನ್ (Amir Khan) ಅವರ ಪುತ್ರಿ ಇರಾ ಖಾನ್ (Ira Khan)  ಫಾದರ್ಸ್ ಡೇ ವಿಶೇಷ ಸಂದರ್ಭದಲ್ಲಿ ತಂದೆಯ ವಿಶೇಷ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭ ಹಾರೈಸಿದ್ದಾರೆ. ಇರಾ ತನ್ನ ಮತ್ತು ಅಮೀರ್ ಅವರ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಇರಾ ಅವರ ಈ ಚಿತ್ರವು ಅಂತರ್ಜಾಲದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ ಇರಾ ಖಾನ್, 'ತಂದೆಯ ದಿನಾಚರಣೆಯ ಶುಭಾಶಯಗಳು, ಎಲ್ಲದಕ್ಕೂ ಧನ್ಯವಾದಗಳು' ಎಂದು ಬರೆದಿದ್ದಾರೆ. ಆ ಫೋಟೋದಲ್ಲಿ ಎಲ್ಲರ ಕಣ್ಣುಗಳು ಅಮೀರ್ ಮೇಲೆ ಸಿಲುಕಿಕೊಂಡಿವೆ. ನಟನ ಹೊಸ ಲುಕ್ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ. ಅಮೀರ್ ಖಾನ್ ಅವರ ಕೂದಲು ತುಂಬಾ ಬಿಳಿ ಬಣ್ಣಕ್ಕೆ ತಿರುಗಿದೆ. ಫೋಟೋ ನೋಡಿದಾಗ ಹೇರ್ ಕಟ್ ಮಾಡಿಸಿಕೊಂಡಿರುವುದು ಕೂಡ ತಿಳಿಯುತ್ತದೆ. ಅಮೀರ್ ಅವರ ಈ ಹೊಸ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಮೀರ್ ಅವರ ಈ ಹೊಸ ನೋಟಕ್ಕೆ ಅಭಿಮಾನಿಗಳು ಮೋಜಿನ ಪ್ರತಿಕ್ರಿಯೆ ನೀಡುತ್ತಿದ್ದಾರೆ.

 
 
 
 

 
 
 
 
 
 
 
 
 

Happy Father's Day!❤🤗 Thanks for being you. . . . #fathersday #love

A post shared by Ira Khan (@khan.ira) on

ಅಮೀರ್ ಖಾನ್ ತಮ್ಮ ಮುಂಬರುವ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ. ಅಮೀರ್ ಖಾನ್ ತಮ್ಮ ಚಿತ್ರದಲ್ಲಿ ಕರೋನಾವೈರಸ್ ಯುಗದ ಬಗ್ಗೆಯೂ ಸೇರಿಸಲು ಬಯಸುತ್ತಾರೆ. ಅವರ 'ಲಾಲ್ ಸಿಂಗ್ ಚಾಧಾ' ಚಿತ್ರ ಸ್ವಾತಂತ್ರ್ಯದಿಂದ ಹಿಡಿದು ಪ್ರಸ್ತುತ ಪರಿಸ್ಥಿತಿಯವರೆಗಿನ ಘಟನೆಗಳನ್ನು ಪ್ರಸ್ತುತಪಡಿಸುತ್ತದೆ, ಇದರಲ್ಲಿ ಅವರು ಕರೋನಾವೈರಸ್ ಅನ್ನು ಸೇರಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಅಷ್ಟೇ ಅಲ್ಲ ದೇಶದ ಅತ್ಯಂತ ವಿವಾದಾತ್ಮಕ ಘಟನೆಯಾದ ಬಾಬರಿ ಮಸೀದಿ ಉರುಳಿಸುವಿಕೆಯನ್ನು ಅಮೀರ್ ಖಾನ್ ತಮ್ಮ ಚಿತ್ರದಲ್ಲಿ ತೋರಿಸಲಿದ್ದಾರೆ.

Trending News