ವಿಶ್ವ ತಾಯಂದಿರ ದಿನಕ್ಕೆ 'ಅಮ್ಮ ಐ ಲವ್ ಯೂ' ಚಿತ್ರದ ಟೀಸರ್ ಬಿಡುಗಡೆ

ವಿಶ್ವ ಅಮ್ಮಂದಿರ ದಿಂದ ಹಿನ್ನೆಲೆಯಲ್ಲಿ ನಟ ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಚಿತ್ರದ ಟೀಸರ್ ಭಾನುವಾರ ಬಿಡುಗಡೆಯಾಗಿದೆ.   

Last Updated : May 14, 2018, 11:36 AM IST
ವಿಶ್ವ ತಾಯಂದಿರ ದಿನಕ್ಕೆ 'ಅಮ್ಮ ಐ ಲವ್ ಯೂ' ಚಿತ್ರದ ಟೀಸರ್ ಬಿಡುಗಡೆ title=

ಬೆಂಗಳೂರು : ವಿಶ್ವ ಅಮ್ಮಂದಿರ ದಿಂದ ಹಿನ್ನೆಲೆಯಲ್ಲಿ ನಟ ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಚಿತ್ರದ ಟೀಸರ್ ಭಾನುವಾರ ಬಿಡುಗಡೆಯಾಗಿದೆ. 

ದ್ವಾರಕೀಶ್‌ ಚಿತ್ರ ಬ್ಯಾನರ್‌ನಡಿ ತಯಾರಾಗುತ್ತಿರುವ 51 ಚಿತ್ರ ಇದಾಗಿದ್ದು, ಕೆ.ಎಂ.ಚೈತನ್ಯ ಚಿತ್ರ ನಿರ್ದೇಶಿಸಿದ್ದಾರೆ. ಈ ಟೀಸರ್ ಗೆ ಧೃವ ಸರ್ಜಾ ಹಿನ್ನಲೆ ಧ್ವನಿ ನೀಡಿದ್ದಾರೆ. ಟೀಸರ್ ನಲ್ಲಿ ತಾಯಿಯ ಮಹತ್ವ, ಆಕೆಯ ಮೇಲೆ ಎಲ್ಲರೂ ಎಷ್ಟು ಅವಲಂಬಿತವಾಗಿದ್ದೇವೆ ಎಂಬುದನ್ನು ಬಹಳ ಅಚ್ಚುಕಟ್ಟಾಗಿ ಈ ಟೀಸರ್'ನಲ್ಲಿ ಬಿಡುಗಡೆ ಮಾಡಲಾಗಿದೆ. 

ಈ ಆಡಿಯೋದಲ್ಲಿ ತಾಯಿಯಿಂದ ನಾವು ಏನು ಬಯಸುತ್ತೇವೆ? ಮತ್ತು ಆಕೆಗೆ ಪ್ರತಿಫಲವಾಗಿ ಏನನ್ನು ನೀಡುತ್ತೇವೆ ಎಂಬ ಅಂಶ ಇದೆಯಂತೆ. ಅಲ್ಲದೇ ತಂದೆಯಾಗಲು ಒಂದು ಕ್ಷಣ ಸಾಕು, ತಾಯಿಯಾಗಲು ಒಂದು ಜೀವನ ಬೇಕು ಎಂಬ ಸಂದೇಶ ಈ ಆಡಿಯೋದಲ್ಲಿದೆ.

ಈ ಚಿತ್ರದಲ್ಲಿ ಚಿರು ತಾಯಿ ಪಾತ್ರದಲ್ಲಿ ಬಹುಭಾಷಾ ನಟಿ ಸಿತಾರಾ ಅಭಿನಯಿಸಿದ್ದಾರೆ. ನಿಶ್ವಿಕಾ ನಾಯ್ಡು, ರವಿಕಾಳೆ ಸೇರಿದಂತೆ ಬಹಳಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಾಯಂದಿರ ದಿಂದ ಅಂಗವಾಗಿ ಈ ಟೀಸರ್ ಬಿಡುಗಡೆ ಮಾಡಲಾಗಿದ್ದು, ಎಲ್ಲಾ ತಾಯಂದಿರಿಗೂ ಅರ್ಪಿಸಲಾಗಿದೆ. 

Trending News