ನಟಿ ಅನಸೂಯಾ ಕೇವಲ 500 ರೂಪಾಯಿಗಾಗಿ ಇಂಥ ಕೆಲಸ ಮಾಡಿದ್ದರಂತೆ !!

Anasuya Bharadwaj Life Story: ಅನಸೂಯಾ ಭಾರದ್ವಾಜ್ ಸದ್ಯ ಸಿನಿರಂಗದಲ್ಲಿ ಸಖತ್ ಬ್ಯುಸಿ ನಟಿ. ಕೋಟಿಗಟ್ಟಲೆ ಸಂಪಾದಿಸುವ ಅನಸೂಯಾ ಕೇವಲ‌ 500 ರೂಪಾಯಿಗಾಗಿ ಮಾಡಿದ ಕೆಲಸ ಕೇಳಿದ್ರೆ ಶಾಕ್‌ ಆಗ್ತೀರಾ. 

Written by - Chetana Devarmani | Last Updated : May 12, 2024, 08:42 AM IST
  • ಅನಸೂಯಾ ಭಾರದ್ವಾಜ್ ಸಂಭಾವನೆ
  • ಅನಸೂಯ ಭಾರದ್ವಾಜ್ ಸಿನಿ ಪಯಣ
  • ಅನಸೂಯ ಭಾರದ್ವಾಜ್ ಮೊದಲ ಸಿನಿಮಾ
ನಟಿ ಅನಸೂಯಾ ಕೇವಲ 500 ರೂಪಾಯಿಗಾಗಿ ಇಂಥ ಕೆಲಸ ಮಾಡಿದ್ದರಂತೆ !! title=

Anasuya Bharadwaj First Movie: ಅನಸೂಯಾ ಟಾಲಿವುಡ್‌ನ ಫೇಮಸ್‌ ನಟಿ. ಜಬರ್ದಸ್ತ್ ವೇದಿಕೆಯ ಮೂಲಕ ನಟಿ ಅನಸೂಯಾ ಜನಪ್ರಿಯತೆಯನ್ನು ಗಳಿಸಿದರು. 2013 ರಲ್ಲಿ ಆರಂಭವಾದ ಕಾಮಿಡಿ ಶೋ ಜಬರ್ದಸ್ತ್ ಭಾರೀ ಹಿಟ್ ಆಗಿತ್ತು. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಅನಸೂಯಾ ಅವರ ಪಾತ್ರ ಬಹಳ ಮುಖ್ಯ. ತೆಲುಗು ಆಂಕರಿಂಗ್‌ಗೆ ಗ್ಲಾಮರ್ ಕೋನವನ್ನು ಪರಿಚಯಿಸುವ ಮೂಲಕ ಅನಸೂಯಾ ಟ್ರೆಂಡ್ ಸೆಟ್ಟರ್ ಆದರು.

ಶಾರ್ಟ್ಸ್ ನಲ್ಲಿ ಅನಸೂಯಾ ಫೋಟೋಗಳಿಗೆ ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಯಿತು. ಎಷ್ಟೇ ಟೀಕೆಗಳು ಬಂದರೂ ಅನಸೂಯಾ ಹಿಂದೆ ಸರಿಯಲಿಲ್ಲ. ಅದು ತನ್ನ ವೃತ್ತಿ ಜೀವನಕ್ಕೆ ಅಗತ್ಯ ಎಂಬ ಆತ್ಮಸ್ಥೈರ್ಯದಿಂದ ಮುನ್ನಡೆದರು. ಜಬರ್ದಸ್ತ್‌ನಿಂದ ಬಂದ ಖ್ಯಾತಿಯಿಂದ ನಟಿಯಾದರು. ಈಗ ಆಕೆಯ ವೃತ್ತಿಜೀವನ ಯಶಸ್ವಿಯಾಗಿದೆ.

ಇದನ್ನೂ ಓದಿ: Jyothi Rai: ತಾಕತ್ತಿದ್ರೆ ಇದನ್ನು ವೈರಲ್‌ ಮಾಡಿ.. ಹೊಸ ವಿಡಿಯೋ ಪೋಸ್ಟ್‌ ಮಾಡಿದ ನಟಿ ಜ್ಯೋತಿ ರೈ !

ಅನಸೂಯಾ ವೃತ್ತಿಜೀವನ ನಟಿಯಾಗಿ ಪ್ರಾರಂಭವಾಯಿತು. ಮೊದಲು ನಟಿ ಅನಸೂಯಾಗೆ ಒಂದು ಸಣ್ಣ ಪಾತ್ರ ಮಾಡುವ ಅವಕಾಶ ಸಿಕ್ಕಿತು. ತೆಲುಗಿನ ನಾಗ ಸಿನಿಮಾದಲ್ಲಿ ಅನಸೂಯಾ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ. ಈ ಇಡೀ ಸಿನಿಮಾದಲ್ಲಿ ಅವರಿಗೆ ಒಂದೇ ಒಂದು ಡೈಲಾಗ್‌ ಇರಲಿಲ್ಲ. ಒಂದು ದೃಶ್ಯದಲ್ಲಿ ಸುನಿಲ್ ಮಾತನಾಡುವಾಗ ಹಿಂದೆ ಅನಸೂಯಾ ಕಾಣಿಸುತ್ತಾರೆ. ಈ ಪಾತ್ರ ಮಾಡುವಾಗ ಅನಸೂಯಾ ಅವರಿಗೆ ಕೇವಲ 19 ವರ್ಷ. 

ನಾಗ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದ ಅನಸೂಯಾ ಪಡೆದ ಸಂಭಾವನೆ ಕೇವಲ 500 ರೂಪಾಯಿ. ಅದು ಆ ಕಾಲದಲ್ಲಿ ಜೂನಿಯರ್ ಆರ್ಟಿಸ್ಟ್ ಗೆ ಕೊಡುತ್ತಿದ್ದ ಸಂಭಾವನೆ. ಆದರೆ ಇಂದು ಅನಸೂಯಾ ದಿನಕ್ಕೆ ಲಕ್ಷಗಟ್ಟಲೆ ಸಂಪಾದಿಸುತ್ತಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅನಸೂಯಾ ಇಂದು ಬಹು ಎತ್ತರಕ್ಕೆ ಬೆಳೆದಿದ್ದಾರೆ. ಹೈದರಾಬಾದ್‌ನಲ್ಲಿ ಐಷಾರಾಮಿ ಮನೆ ಇದೆ. ಐಷಾರಾಮಿ ಕಾರುಗಳಿವೆ.  

ಇದನ್ನೂ ಓದಿ: ಚಿಕ್ಕಪ್ಪನ ಪರ ಬರ್ಜರಿ ಪ್ರಚಾರ ನಡೆಸಿದ ರಾಮ್‌ ಚರಣ್‌..! ಪಿಠಾಪುರದಲ್ಲಿ ಮೆಗಾ ಪವರ್‌ ಸ್ಟಾರ್‌..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News