ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಅನುಪಮ್ ಖೇರ್ ಟ್ವೀಟ್

ಸಾಮಾಜಿಕ ಮಾಧ್ಯಮಗಳಲ್ಲಿ ಟ್ವೀಟ್ ಮಾಡಿರುವ ಅನುಪಮ್ ಖೇರ್ "ಲೆಹರೋ ಕೋ ಖಾಮೊಶ್ ದೆಖಕರ್, ಎ ನಾ ಸಮಝನಾ ಕಿ ಸಮಂದರ್ ಮೇ ರವಾನಿ ನಹಿ ಹೈ, ಹಮ್ ಜಬ್ ಭಿ ಉಠೇಂಗೆ ತೂಫಾನ್ ಬನ್ ಕರ್ ಉಠೇಂಗೆ, ಬಸ್ ಉಠನೇ ಕಿ ಅಭಿ ಠಾನಿ ನಹಿ ಹೈ" ಎಂದು ಬರೆದುಕೊಂಡಿದ್ದಾರೆ.

Last Updated : Feb 3, 2020, 02:30 PM IST
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಅನುಪಮ್ ಖೇರ್ ಟ್ವೀಟ್ title=

ನವದೆಹಲಿ: ಖ್ಯಾತ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯರಾಗಿರುತ್ತಾರೆ ಹಾಗೂ ಹಲವು ವಿಷಯಗಳ ಮೇಲೆ ಹಿಜರಿಯದೆ ತಮ್ಮ ಅಭಿಪ್ರಾಯ ಕೂಡ ಮಂಡಿಸುತ್ತಾರೆ. ಇತ್ತೀಚಿಗೆ ಅವರು ಮಾಡಿರುವ ಒಂದು ಟ್ವೀಟ್ ಭಾರಿ ವೈರಲ್ ಆಗಿದ್ದು, ಈ ಟ್ವೀಟ್ ನಲ್ಲಿ ಅವರು ಶಾಯರಿ ಹೇಳಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅನುಪಮ್ ಖೇರ್, "ಝೂಠ ಇಸ್ಲಿಯೇ ಬಿಕ್ ಜಾತಾ ಹೈ, ಕ್ಯೋಂಕಿ ಸಚ್ ಕೋ ಖರೀದನೆ ಕಿ, ಸಬ್ ಕಿ ಔಕಾತ್ ನಹಿ ಹೋತಿ" ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಅನುಪಮ್ ಖೇರ್, "ಲೆಹರೋ ಕೋ ಖಾಮೊಶ್ ದೆಖಕರ್, ಎ ನಾ ಸಮಝನಾ ಕಿ ಸಮಂದರ್ ಮೇ ರವಾನಿ ನಹಿ ಹೈ, ಹಮ್ ಜಬ್ ಭಿ ಉಠೇಂಗೆ ತೂಫಾನ್ ಬನ್ ಕರ್ ಉಠೇಂಗೆ, ಬಸ್ ಉಠನೇ ಕಿ ಅಭಿ ಠಾನಿ ನಹಿ ಹೈ" ಎಂದು ಬರೆದುಕೊಂಡಿದ್ದರು. ಆದರೆ, ಇದರಲ್ಲಿ ಅವರು ಯಾರ ಹೆಸರನ್ನೂ ಸಹ ಉಲ್ಲೇಖಿಸಿರಲಿಲ್ಲ. ಆದರೆ, ಅವರ ಈ ಟ್ವೀಟ್ ಗೆ ಕಾಮೆಂಟ್ ಮಾಡಿದವರು ಅನುಪಮ್ ಮಾಡಿರುವ ಈ ಶಾಯರಿಗಳು ದೇಶದಲ್ಲಿನ ಸದ್ಯದ ವಾತಾವರಣ ಮೇಲಿನ ಕಟಾಕ್ಷ ಎಂದು ತಿಳಿದುಕೊಂಡಿದ್ದಾರೆ.

लहरोंकोख़ामोशदेखकर, येनासमझना,
किसमंदरमेंरवानीनहींहै,
हमजबभीउठेंगे,
तूफ़ानबनकरउठेंगे,
बसउठनेकीअभी, ठानीनहींहै। :)

— AnupamKher(@AnupamPKher) February 2, 2020

ಇತ್ತೀಚೆಗಷ್ಟೇ ಬಾಲಿವುಡ್ ನ ಮತ್ತೋರ್ವ ಹಿರಿಯ ನಟ ನಾಸಿರುದ್ದೀನ್ ಶಾ, ಅನುಪಮ್ ಖೇರ್ ಅವರನ್ನು 'ಜೋಕರ್' ಎಂದು ಸಂಬೋಧಿಸಿದ್ದರು. ಇದಕ್ಕೆ ಉತ್ತರಿಸಿದ್ದ ಅನುಪಮ್ ಖೇರ್, "ಜನಾಬ್ ನಾಸಿರುದ್ದೀನ್ ಶಾ ಸಾಬ್ ಅವರಿಗೆ ನನ್ನ ಪ್ರೀತಿಯ ಸಂದೇಶ!!! ಅವರು ನನಗಿಂತ ದೊಡ್ಡವರು. ವಯಸ್ಸಿನಲ್ಲಿಯೂ ದೊಡ್ಡವರು, ಅನುಭವದಲ್ಲಿಯೂ ದೊಡ್ಡವರು. ನಾನು ಯಾವಾಗಲು ಅವರ ಕಲೆಯನ್ನು ಗೌರವಿಸಿದ್ದೇನೆ ಮತ್ತು ಮುಂದೆಯೂ ಸಹ ಗೌರವಿಸುವೆ. ಆದರೆ ಕೆಲವೊಮ್ಮೆ ಕೆಲ ಹೇಳಿಕೆಗಳಿಗೆ ಉತ್ತರ ನೀಡುವುದು ಅನಿವಾರ್ಯ. ಇಲ್ಲಿದೆ ನನ್ನ ಉತ್ತರ" ಎಂದಿದ್ದರು.

ಈ ಕುರಿತು ವಿಡಿಯೋ ಸಂದೇಶ ಹಂಚಿಕೊಂಡಿದ್ದ ಅನುಪಮ್ ಖೇರ್, "ಜನಾಬ್! ನಾಸೀರುದ್ದೀನ್ ಶಾ ಸಾಬ್ ನನ್ನ ಬಗ್ಗೆ ನೀವು ನೀಡಿರುವ ಸಂದರ್ಶನ ವಿಕ್ಷೀಸಿದ್ದೇನೆ. ನನ್ನ ಕುರಿತು ನೀವು ಆಡಿರುವ ಹೊಗಳಿಕೆಯ ಮಾತುಗಳಲ್ಲಿ ನಾನೊಬ್ಬ 'ಕ್ಲಾವುನ್' ಆಗಿದ್ದು, ನನ್ನನ್ನು ಯಾರು ಗಂಭೀರವಾಗಿ ಪರಿಗಣಿಸಬಾರದು, ನಾನೊಬ್ಬ ಸೈಕೋಫ್ಯಾನ್ ಆಗಿದ್ದು, ಅದು ನನ್ನ ರಕ್ತದಲ್ಲಿದೆ ಇತ್ಯಾದಿ. ನಿಮ್ಮ ಈ ಹೊಗಳಿಕೆಯ ಮಾತುಗಳಿಗೆ ನಾನು ಆಭಾರಿಯಾಗಿದ್ದೇನೆ. ಆದರೆ, ನಾನು ನಿಮ್ಮನ್ನಾಗಲಿ ಅಥವಾ ನಿಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ, ನಾನು ನಿಮ್ಮ ಬಗ್ಗೆ ಎಂದಿಗೂ ಕೆಟ್ಟ ಮಾತುಗಳನ್ನು ಆಡಿಲ್ಲ. ಆದರೆ, ಇದೀಗ ನಾನು ನಿಮಗೆ ಉತ್ತರಿಸಲು ಬಯಸುವೆ. ನಿಮ್ಮ ಇಡೀ ಜೀವನದಲ್ಲಿ ನಿಮಗೆ ಯಶಸ್ಸು ಸಿಕ್ಕರೂ ಕೂಡ ನೀವು ನಿಮ್ಮ ಜೀವನವನ್ನು ಹತಾಶೆಯಲ್ಲಿ ಕಳೆದಿದ್ದೀರಿ. ಒಂದು ವೇಳೆ ನೀವು ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ ಶಾರುಕ್ ಖಾನ್ ಹಾಗೂ ವಿರಾಟ್ ಕೊಹ್ಲಿ ಅವರ ಬಗ್ಗೆ ವಿಮರ್ಶೆ ಮಾಡುವುದಾದರೆ, ಐ ಎಮ್ ಶ್ಯೂರ್, ಐ ಎಮ್ ಇನ್ ಎ ಗ್ರೇಟ್ ಕಂಪನಿ" ಎಂದಿದ್ದರು.

ಇದಕ್ಕೂ ಒಂದು ಹೆಜ್ಜೆ ಮುಂದಿಟ್ಟ ಖೇರ್, "ಇವರಲ್ಲಿ ಯಾರೂ ನಿಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಏಕೆಂದರೆ, ಹಲವಾರು ವರ್ಷಗಳಿಂದ ನೀವು ಸೇವಿಸುತ್ತಿರುವ ಪದಾರ್ಥದಿಂದ ನಿಮಗೆ ಸರಿ ಮತ್ತು ತಪ್ಪುಗಳ ನಡುವಿನ ಅಂತರ ನಿಮಗೆ ತಿಳಿಯುವುದಿಲ್ಲ. ಒಂದು ವೇಳೆ ನನ್ನ ಬಗ್ಗೆ ಕೆಟ್ಟ ಮಾತುಗಳನ್ನು ಆಡಿ ನಿಮಗೆ ಖುಷಿ ಸಿಗುತ್ತಿದ್ದರೆ, ನಾನು ಆ ಖುಷಿಯನ್ನು ನಿಮಗೆ ಕೊಡುಗೆಯಾಗಿ ನೀಡುವೆ, ದೇವರು ನಿಮಗೆ ಒಳ್ಳೆಯದನ್ನು ಮಾಡಲಿ, ನಿಮ್ಮ ಹಿತಚಿಂತಕ, ಅನುಪಮ್. ನನ್ನ ರಕ್ತದಲ್ಲಿ ಏನಿದೆ ನಿಮಗೆ ತಿಳಿದಿದೆ. ನನ್ನ ರಕ್ತದಲ್ಲಿ ಹಿಂದೂಸ್ತಾನ್ ಇದೆ. ಇದನ್ನು ತಿಳಿದುಕೊಳ್ಳಿ ಅಷ್ಟೇ" ಎಂದು ಹೇಳಿದ್ದರು.

ನಾಸೀರುದ್ದೀನ್ ಶಾ ನೀಡಿರುವ ಒಂದು ಸಂದರ್ಶನದಿಂದ ಈ ವಿವಾದ ಭುಗಿಲೆದ್ದಿತ್ತು. ಈ ಸಂದರ್ಶನದಲ್ಲಿ CAA ಹಾಗೂ NRCಯನ್ನು ವಿರೋಧ ವ್ಯಕ್ತಪಡಿಸಿದ್ದ ಶಾ, ಅನುಪಮ್ ಖೇರ್ ಅವರ ಮೇಲೆ ತೀಕ್ಷ ವಾಗ್ದಾಳಿ ನಡೆಸಿದ್ದರು. ಸಂದರ್ಶನದಲ್ಲಿ ಮಾತನಾಡಿದ್ದ ಶಾ, "ಈ ವಿಷಯದಲ್ಲಿ ಅನುಪಮ್ ಖೇರ್ ತುಂಬಾ ಮೂರ್ಖರಾಗಿದ್ದಾರೆ, ಆದರೆ, ಅವರನ್ನು ಗಂಭೀರವಾಗಿ ಪರಿಗಣಿಸಬೇಕು ಅಂತ ನನಗೆ ಅನಿಸುವುದಿಲ್ಲ. ಅವರೊಬ್ಬ ಜೋಕರ್ ಆಗಿದ್ದಾರೆ. NSD ಹಾಗೂ FTII ನಲ್ಲಿ ಅವರ ಸಮಕಾಲೀನರಾಗಿದ್ದ ಜನರು ಅನುಪಮ್ ಅವರ ಸೈಕೋಫಾಂಟ್ ಸ್ವಭಾವದ ಬಗ್ಗೆ ನಿಮಗೆ ಹೇಳಬಲ್ಲರು. ಅದು ಅವರ ರಕ್ತದಲ್ಲಿದೆ ಆದರೆ, ಇದರಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಆದರೆ, ಇಂತವರನ್ನು ಬೆಂಬಲಿಸುವವರು, ನಾವು ಯಾವುದಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂಬುದನ್ನು ತಿಳಿಯಬೇಕಾಗಿರುವುದು ಅಗತ್ಯವಾಗಿದೆ" ಎಂದಿದ್ದರು.

Trending News