Article 370 : ʼಆರ್ಟಿಕಲ್‌ 370ʼ ಸಿನಿಮಾ ಮೊದಲ ವಾರಾಂತ್ಯದ ಕಲೆಕ್ಷನ್‌ ಎಷ್ಟು ಗೊತ್ತಾ..!

Article 370 1st Weekend Collections: ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ಕೇಂದ್ರವು ರದ್ದುಗೊಳಿಸಿತು. ಈ ಹಿನ್ನಲೆಯಲ್ಲಿ ಬಾಲಿವುಡ್ ನಲ್ಲಿ ‘ಆರ್ಟಿಕಲ್ 370’ ಎಂಬ ಸಿನಿಮಾ ತೆರೆಗೆ ಬಂದಿದ್ದು, ಇದೇ ಶುಕ್ರವಾರ ತೆರೆಕಂಡ ಚಿತ್ರಕ್ಕೆ ಒಳ್ಳೆಯ ವಿಮರ್ಶೆಗಳು ಕೇಳಿ ಬರುತ್ತಿವೆ. 

Written by - Zee Kannada News Desk | Last Updated : Feb 26, 2024, 04:38 PM IST
  • ‘ಆರ್ಟಿಕಲ್ 370’ ಎಂಬ ಸಿನಿಮಾ ಶುಕ್ರವಾರ 23 ರಂದು ತೆರೆಗೆ ಬಂದಿದ್ದು, ಚಿತ್ರಕ್ಕೆ ಒಳ್ಳೆಯ ವಿಮರ್ಶೆಗಳು ಕೇಳಿ ಬರುತ್ತಿವೆ.
  • ʼಯೂರಿ ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರವನ್ನು ನಿರ್ದೇಶಿಸಿದ್ದ ಆದಿತ್ಯ ಧರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
  • ಈ ಚಿತ್ರದಲ್ಲಿ ಅರುಣ್ ಗೋವಿಲ್ ಜೊತೆಗೆ ಯಾಮಿ ಗೌತಮ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Article 370 : ʼಆರ್ಟಿಕಲ್‌ 370ʼ ಸಿನಿಮಾ ಮೊದಲ ವಾರಾಂತ್ಯದ  ಕಲೆಕ್ಷನ್‌ ಎಷ್ಟು ಗೊತ್ತಾ..! title=

Article 370 1st Weekend Collections : ನಿಜ ಜೀವನದ ಘಟನೆಗಳನ್ನು ಆಧರಿಸಿದ ಚಲನಚಿತ್ರಗಳು ಪ್ರಸ್ತುತ ಚಲನಚಿತ್ರೋದ್ಯಮದಲ್ಲಿ ಉತ್ತಮ ಬೇಡಿಕೆಯಲ್ಲಿವೆ. ಈ ವರ್ಗದ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಗಳಿಸುತ್ತಿವೆ. ಮತ್ತು ನಮ್ಮ ದೇಶದಲ್ಲಿ, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ಕೇಂದ್ರವು ರದ್ದುಗೊಳಿಸಿತು. ಈ ಹಿನ್ನಲೆಯಲ್ಲಿ ಬಾಲಿವುಡ್ ನಲ್ಲಿ ‘ಆರ್ಟಿಕಲ್ 370’ ಎಂಬ ಸಿನಿಮಾ ತೆರೆಗೆ ಬಂದಿದ್ದು, ಇದೇ ಶುಕ್ರವಾರ ತೆರೆಕಂಡ ಚಿತ್ರಕ್ಕೆ ಒಳ್ಳೆಯ ವಿಮರ್ಶೆಗಳು ಕೇಳಿ ಬರುತ್ತಿವೆ. 

ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರವನ್ನು ಹಲವು ವರ್ಷಗಳಿಂದ ದೇಶದಿಂದ ಬೇರ್ಪಡಿಸುವ 370 ನೇ ವಿಧಿಯನ್ನು ಆಗಸ್ಟ್ 5, 2019 ರಂದು ತೆಗೆದುಹಾಕಿತ್ತು. ಇದಲ್ಲದೆ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಸಂಸತ್ತಿನಲ್ಲಿ ಅಂಗೀಕರಿಸಿದ ನಂತರ ಎರಡು ಕೇಂದ್ರಾಡಳಿತ ಪ್ರದೇಶಗಳು 31 ಅಕ್ಟೋಬರ್ 2019 ರಂದು ಸರ್ಧಾರ್ ಪಟೇಲ್ ಜಯಂತಿಯಂದು ಜಾರಿಗೆ ಬಂದವು. ಅಲ್ಲಿಯವರೆಗೂ ಆ ಭಾಗದ ಜನ ಒಂದಿಲ್ಲೊಂದು ರೀತಿಯ ಸಂಘರ್ಷದಲ್ಲಿ ತೊಡಗುತ್ತಿದ್ದರು. ಯಾವಾಗ 370ನೇ ವಿಧಿ ರದ್ದತಿ ಆಯಿತು ಇದರ ನಂತರ ಆ ಪ್ರದೇಶದಲ್ಲಿ ಹಾಗೂ ಜನರಲ್ಲಿ ದೊಡ್ಡ ಬದಲಾವಣೆಗಳಾಗಿವೆ.

ಇದನ್ನೂ ಓದಿ: Yuva:ಯುವ ಚಿತ್ರದ ಫಸ್ಟ್‌ ಸಾಂಗ್‌ಗೆ ಡೇಟ್‌ ಫಿಕ್ಸ್‌!

ನರೇಂದ್ರ ಮೋದಿ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಮಾಡುತ್ತಿರುವ ಅಭಿವೃದ್ಧಿಯನ್ನು ಕಂಡು ನೆರೆಯ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದ ಜನರೂ ಪಿಒಜೆಕೆಯನ್ನು ನಮ್ಮ ದೇಶದಲ್ಲಿ ವಿಲೀನಗೊಳಿಸುವಂತೆ ಚಳವಳಿಗಳನ್ನು ಮಾಡುತ್ತಿದ್ದಾರೆ ಎಂಬುದು ಗೊತ್ತಿರುವ ಸಂಗತಿ. ಅದೂ ಅಲ್ಲದೆ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಹಿನ್ನೆಲೆಯಲ್ಲಿ ಸಿನಿಮಾ ಮಾಡಲಾಗಿದೆ.

'ಯೂರಿ ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರವನ್ನು ನಿರ್ದೇಶಿಸಿದ್ದ ಆದಿತ್ಯ ಧರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರೊಂದಿಗೆ ಲೋಕೇಶ್ ಧರ್ ಮತ್ತು ಜ್ಯೋತಿ ದೇಶಪಾಂಡೆ ಈ ಚಿತ್ರದ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆದಿತ್ಯ ಜಾಂಬಳೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅರುಣ್ ಗೋವಿಲ್ ಜೊತೆಗೆ ಯಾಮಿ ಗೌತಮ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಫೆಬ್ರವರಿ 23 ರಂದು ಬಿಡುಗಡೆಯಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ಕಾಣುತ್ತಿದೆ.

ಇದನ್ನೂ ಓದಿ: ಸೆಟ್ಟೇರಿತು ’ನಿದ್ರಾದೇವಿ Next Door’: ಪ್ರವೀರ್ ಶೆಟ್ಟಿ-ಶೈನ್ ಶೆಟ್ಟಿ ಹೊಸ ಚಿತ್ರಕ್ಕೆ ಕ್ರೇಜಿಸ್ಟಾರ್ ಕ್ಲಾಪ್

ಈ ಸಿನಿಮಾದ ಮೊದಲ ದಿನ ಅಂದರೆ ಶುಕ್ರವಾರ ರೂ. 6.12 ಕೋಟಿ, ಶನಿವಾರ ವಾರ ರೂ. 9.08 ಕೋಟಿ,  ಭಾನುವಾರ 10.25 ಕೋಟಿ ಒಟ್ಟು  ನಮ್ಮ ದೇಶದಲ್ಲಿ 25.45 ಕೋಟಿ ನಿವ್ವಳ ಕಲೆಕ್ಷನ್ ಆಗಿದೆ ಎಂದು ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಬಹಿರಂಗಪಡಿಸಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾದ ಕಲೆಕ್ಷನ್ ಮೊದಲ ದಿನಕ್ಕಿಂತ ಎರಡು ಮತ್ತು ಮೂರನೇ ದಿನ ಬಾಯಿ ಮಾತಿನಲ್ಲಿ ಹೆಚ್ಚಿದೆ. ಇನ್ನೂ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡುತ್ತೆ ಎಂದು ಕಾದು ನೋಡಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News