Bigg Boss 8: ಮನೆಗೆ ಕಾಲಿಟ್ಟ ಮೊದಲ ಸ್ಪರ್ಧಿಯಾಗಿ 'ಟಿಕ್ ಟಾಕ್ ಧನುಶ್ರೀ' ಎಂಟ್ರಿ!

ಟಿಕ್ ಟಾಕ್ ಮೂಲಕ ಡಿಜಿಟಲ್ ವೇದಿಕೆಯಲ್ಲಿ ಧನುಶ್ರೀ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.

Last Updated : Feb 28, 2021, 07:30 PM IST
  • ಟಿಕ್ ಟಾಕ್ ಮೂಲಕ ಡಿಜಿಟಲ್ ವೇದಿಕೆಯಲ್ಲಿ ಧನುಶ್ರೀ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.
  • ಟಿಕ್ ಟಾಕ್ ವಿಡಿಯೋಗಳನ್ನು ಧನುಶ್ರೀ ಮಾಡಿದ್ದಾರೆ. ಹಾಸನದ ಈ ಹುಡುಗಿ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.
  • . ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಚರ್ಮ, ಕೂದಲು, ಸೌಂದರ್ಯದ ಟಿಪ್ಸ್‌ಗಳನ್ನು ಅವರು ನೀಡುತ್ತಿರುತ್ತಾರೆ.
Bigg Boss 8: ಮನೆಗೆ ಕಾಲಿಟ್ಟ ಮೊದಲ ಸ್ಪರ್ಧಿಯಾಗಿ 'ಟಿಕ್ ಟಾಕ್ ಧನುಶ್ರೀ' ಎಂಟ್ರಿ! title=

ಬೆಂಗಳೂರು: ಟಿಕ್ ಟಾಕ್ ಮೂಲಕ ಡಿಜಿಟಲ್ ವೇದಿಕೆಯಲ್ಲಿ ಧನುಶ್ರೀ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಜ್ಯೂನಿಯರ್ ನಿತ್ಯಾ ಮೆನನ್ ಎಂದು ಅವರನ್ನು ಕರೆಯಲಾಗುವುದು. ಸಾಕಷ್ಟು ಟಿಕ್ ಟಾಕ್ ವಿಡಿಯೋಗಳನ್ನು ಧನುಶ್ರೀ ಮಾಡಿದ್ದಾರೆ. ಹಾಸನದ ಈ ಹುಡುಗಿ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.

ಇನ್ನು ವಿಧ ವಿಧವಾದ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಚರ್ಮ, ಕೂದಲು, ಸೌಂದರ್ಯದ ಟಿಪ್ಸ್‌ಗಳನ್ನು ಅವರು ನೀಡುತ್ತಿರುತ್ತಾರೆ. ಫಿಟ್‌ನೆಸ್ ಕಡೆಗೆ ಧನುಶ್ರೀ(Dhanushree) ಸಿಕ್ಕಾಪಟ್ಟೆ ಗಮನ ನೀಡುತ್ತಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಅನೇಕ ವಿಡಿಯೋಗಳನ್ನು ಧನುಶ್ರೀ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Shanvi Srivastava: ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶಾನ್ವಿ ಶ್ರೀವಾಸ್ತವ..!

ನಾಯಿಗಳೆಂದರೆ ಧನುಶ್ರೀಗೆ ತುಂಬ ಇಷ್ಟ. ಧನುಶ್ರೀಗೂ ಕೂಡ ಅಭಿಮಾನಿ ಬಳಗವಿದೆ. ಅವರ ಲಿಪ್‌ಸಿಂಕ್ ವಿಡಿಯೋ(Video)ಗಳು ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಇನ್ನು ಅವರಿಗೆ ಫೋಟೋಗಳೆಂದರೆ ತುಂಬ ಇಷ್ಟ. ಹೀಗಾಗಿ ಆಗಾಗ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ.

Chandan Shetty: ಪಬ್ ಗಳ ವಿರುದ್ಧ ಮತ್ತೆ ಗುಡುಗಿದ ‘ರ‍್ಯಾಪರ್ ಸ್ಟಾರ್ ಚಂದನ್ ಶೆಟ್ಟಿ’..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News