BBK10: ಟಿಕೆಟ್ ಟು ಫಿನಾಲೆ; ಒಬ್ಬೊಬ್ಬರಿಗೂ ಸವಾಲೇ!

Bigg Boss Kannada: ಫಿನಾಲೆಯ ವೇದಿಕೆ ಹತ್ತಲು ಬಿಗ್‌ಬಾಸ್‌ ಮನೆಯೊಳಗೆ ಪೈಪೋಟಿ ಜೋರಾಗಿಯೇ ನಡೆದಿದೆ. ಇದಕ್ಕೆ ಅನುಗುಣವಾಗಿ ಸ್ವತಃ ಬಿಗ್‌ಬಾಸ್‌ ಎಲ್ಲ ಸ್ಪರ್ಧಿಗಳಿಗೂ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ.   

Written by - Savita M B | Last Updated : Jan 10, 2024, 11:28 AM IST
  • ನಿನ್ನೆ ನಮೃತಾ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದ್ದರು
  • ನಮೃತಾ, ವರ್ತೂರು ಸಂತೋಷ್, ಪ್ರತಾಪ್ ಮತ್ತು ಸಂಗೀತಾ ಅವರನ್ನು ಎದುರಾಳಿಗಳನ್ನಾಗಿ ಆಯ್ದುಕೊಂಡಿದ್ದರು.
  • ಆದರೆ ಎಲ್ಲರಿಗಿಂತ ಮೊದಲು ಅವರೇ ಸ್ಪರ್ಧೆಯಿಂದ ಔಟ್ ಆಗಿದ್ದರು.
BBK10: ಟಿಕೆಟ್ ಟು ಫಿನಾಲೆ; ಒಬ್ಬೊಬ್ಬರಿಗೂ ಸವಾಲೇ! title=

BBK10: ನಿನ್ನೆ ನಮೃತಾ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದ್ದರು. ನಮೃತಾ, ವರ್ತೂರು ಸಂತೋಷ್, ಪ್ರತಾಪ್ ಮತ್ತು ಸಂಗೀತಾ ಅವರನ್ನು ಎದುರಾಳಿಗಳನ್ನಾಗಿ ಆಯ್ದುಕೊಂಡಿದ್ದರು. 

ಆದರೆ ಎಲ್ಲರಿಗಿಂತ ಮೊದಲು ಅವರೇ ಸ್ಪರ್ಧೆಯಿಂದ ಔಟ್ ಆಗಿದ್ದರು. ಈ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ಜಯಶಾಲಿಗಳಾಗಿದ್ದಾರೆ. ಎರಡನೇ ಸ್ಥಾನವನ್ನು ಪ್ರತಾಪ್ ಪಡೆದುಕೊಂಡಿದ್ದಾರೆ. ವೈಯಕ್ತಿಕ ಟಾಸ್ಕ್‌ನ ಮುಂದುವರಿದ ಭಾಗದ ಝಲಕ್ ಇಂದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. 

ಇದನ್ನೂ ಓದಿ-BBK 10: ವಿನಯ್ ‘ಅಣ್ಣ’ನಿಗೆ ತುಕಾಲಿ ಸೇವೆ ಮಾಡ್ತಿರೋದಾದ್ರೂ ಯಾಕೆ?

ಈ ಬಾರಿ ಬಿಗ್‌ಬಾಸ್‌ ತನಿಷಾ ಅವರಿಗೆ ಟಾಸ್ಕ್‌ ಕೊಟ್ಟು, ತಮ್ಮ ಎದುರಾಳಿಗಳನ್ನು ಆಯ್ದುಕೊಳ್ಳುವ ಅಧಿಕಾರನ್ನು ಕೊಟ್ಟಿದ್ದಾರೆ. ಈ ವಾರದ ನಾಮಿನೇಷನ್‌ನಲ್ಲಿ ತನಿಷಾ ಅವರನ್ನು ನಾಮಿನೇಟ್ ಮಾಡಿದ್ದ ಕಾರ್ತೀಕ್, ಈಗ ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳುವಂತೆ ತನಿಷಾ ಬಳಿ ಕನ್ವಿನ್ಸ್ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಜಗ್ಗಿಲ್ಲ. 

‘ಬೇರೆವರು ಸಜಷನ್ ಕೊಟ್ರೆ ಕೇಳಿಸ್ಕೋತೀಯಾ, ನಾನು ಮಾತಾಡೋಕೆ ಬಂದ್ರೆ ಉಲ್ಟಾ ಮಾತಾಡ್ತೀಯಾ?’ ಎಂದು ಕಾರ್ತಿಕ್ ಕೇಳಿದ್ದಾರೆ. ಅದಕ್ಕೆ ತನಿಷಾ, ‘ನನಗೂ ಬ್ರೇನ್ ಇದೆ. ನೀನು ಹೇಳ್ಕೊಟ್ಟೇ ತಿಳ್ಕೋಬೇಕಾಗಿಲ್ಲ’ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ. 

ಈ ಸೀಸನ್‌ ಆರಂಭದಿಂದಲೂ ಸ್ನೇಹಿತರಾಗಿದ್ದ, ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಂತಿದ್ದ ತನಿಷಾ ಮತ್ತು ಕಾರ್ತೀಕ್ ನಡುವೆ ಈಗ ಬಿರುಕು ಮೂಡಿದಂತಿದೆ. ಫಿನಾಲೆಗೆ ನೇರ ಪ್ರವೇಶ ಪಡೆಯುವ ಸ್ಪರ್ಧಿ ಯಾರೆಂಬುದು ಮಾತ್ರ ಇನ್ನೂ ಕುತೂಹಲಕಾರಿ ಪ್ರಶ್ನೆಯಾಗಿಯೇ ಉಳಿದಿದೆ.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ಇದನ್ನೂ ಓದಿ-ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ನಿಶ್ಚಿತಾರ್ಥ ಫಿಕ್ಸ್? ತಾರೆಯರ ತಂಡದಿಂದ ಸ್ಪಷ್ಟನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News