ಸದ್ದಿಲ್ಲದೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಮನೆ ಸೇರಿದ ಸ್ಪರ್ಧಿಗಳು ಇವರೇ..!

Bigg Boss 10 Contestants : ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಶೂಟಿಂಗ್‌ ಈಗಾಗಲೇ ಆರಂಭವಾಗಿದೆ. ಈ ಸಲ ಇನೋವೇಟಿವ್ ಫಿಲ್ಮ್ ಸಿಟಿ ಬಿಟ್ಟು ದೊಡ್ಡ ಆಲದ ಮರದ ಬಳಿ ಬಿಗ್‌ ಬಾಸ್‌ ಮನೆಯ ಸೆಟ್ ಹಾಕಲಾಗಿದೆ.   

Written by - Chetana Devarmani | Last Updated : Oct 8, 2023, 08:03 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಗ್ರ್ಯಾಂಡ್ ಪ್ರೀಮಿಯರ್
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಸ್ಪರ್ಧಿಗಳ ಲಿಸ್ಟ್‌
  • ದೊಡ್ಡ ಆಲದ ಮರದ ಬಳಿ ಬಿಗ್‌ ಬಾಸ್‌ ಮನೆಯ ಸೆಟ್
ಸದ್ದಿಲ್ಲದೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಮನೆ ಸೇರಿದ ಸ್ಪರ್ಧಿಗಳು ಇವರೇ..!  title=
Bigg Boss Kannada Season 10

Bigg Boss Kannada Season 10 Contestants: ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಇಂದು ಹಬ್ಬ. ಇಂದಿನಿಂದ ಬಹುನೀರಿಕ್ಷಿತ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶುರುವಾಗಲಿದೆ. ಬಿಗ್‌ ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಶೂಟಿಂಗ್‌ ಈಗಾಗಲೇ ಆರಂಭವಾಗಿದೆ. ಈ ಬೆನ್ನಲ್ಲೇ ಮನೆಯೊಳಗೆ ಎಂಟ್ರಿ ಕೊಟ್ಟ ಕೆಲವರ ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

ಈ ಬಾರಿ ಹತ್ತನೇ ಸೀಸನ್‌ ಆದ ಕಾರಣ ಒಂದು ವಿಶೇಷವಿದೆ ಎಂದು ಬಿಗ್‌ ಬಾಸ್‌ ತಂಡ ತಿಳಿಸಿತ್ತು. ಹಾಗೆಯೇ ಈ ಸಲ ಇನೋವೇಟಿವ್ ಫಿಲ್ಮ್ ಸಿಟಿ ಬಿಟ್ಟು ದೊಡ್ಡ ಆಲದ ಮರದ ಬಳಿ ಬಿಗ್‌ ಬಾಸ್‌ ಮನೆಯ ಸೆಟ್ ಹಾಕಲಾಗಿದೆ. ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ಬೃಹತ್ ಮನೆ ನಿರ್ಮಾಣವಾಗಿದ್ದು, ಅಲ್ಲಿಯೇ ಬಿಗ್‌ ಬಾಸ್‌ ನಡೆಯಲಿದೆ

ಇದನ್ನೂ ಓದಿ : Prabhas Anushka : ಹೆಂಡತಿ ಮಕ್ಕಳೊಂದಿಗಿನ ಪ್ರಭಾಸ್ ಫೋಟೋ ವೈರಲ್..! 

ಬಿಗ್‌ ಬಾಸ್‌ ಮನೆಯೊಳಗೆ ಬಲಗಾಲಿಟ್ಟು ಕೆಲವರು ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ಶ್ವಾನ ಚಾರ್ಲಿ ಬಿಗ್‌ಬಾಸ್ ಮನೆಗೆ ಹೋಗುತ್ತೆ ಎಂಬ ವಿಚಾರ ಕೆಲ ದಿನಗಳ ಹಿಂದಷ್ಟೇ ರಿವೀಲ್ ಆಗಿತ್ತು. ಮೈಸೂರಿನ ಖ್ಯಾತ ಉರಗ ರಕ್ಷಕ ಸ್ನೇಕ್ ಶ್ಯಾಮ್ ಬಿಗ್‌ ಹೌಸ್‌ಗೆ ಎಂಟ್ರಿ ಕೊಟ್ಟಿದ್ದಾರಂತೆ. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ನಾಗಿಣಿ ಧಾರಾವಾಹಿ ಖ್ಯಾತಿಯ ನಟಿ ನಮ್ರತಾ ಗೌಡ ಸಹ ಮನೆಯೊಳಗೆ ಹೋಗಿದ್ದಾರೆ ಎನ್ನಲಾಗಿದೆ.   

ಹರ ಹರ ಮಹಾದೇವ್ ಧಾರಾವಾಹಿ ನಟ ವಿಜಯ್ ಗೌಡ, ಮಂಗಳಮುಖಿ ನೀತು ವನಜಾಕ್ಷಿ ಸಹ ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ. ಇನ್ನೂ ಹಾಸ್ಯ ನಟ ಕೋಮಲ್, ರ್ಯಾಪರ್ ಎಶಾನಿ, ನಿರೂಪಕ ಗೌರೀಶ್ ಅಕ್ಕಿ, ಬಿಗ್‌ಬಾಸ್ ಮಿನಿ ಸೀಸನ್ ಸ್ಪರ್ಧಿ ತ್ರಿವಿಕ್ರಮ್ ಬಿಗ್‌ ಬಾಸ್‌ ಮನೆ ಸೇರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊಬಿದ್ದಿಲ್ಲ. 

ಇಂದು ಸಂಜೆ 6 ಗಂಟೆಗೆ ಬಿಗ್‌ಬಾಸ್ ಕನ್ನಡ ಸೀಸನ್ 10ರ ಗ್ರ್ಯಾಂಡ್ ಪ್ರೀಮಿಯರ್ ಆರಂಭವಾಗಲಿದೆ. ಆ ಬಳಿಕ ಯಾರೆಲ್ಲ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ ಎಂಬ ಖಚಿತ ಮಾಹಿತಿ ಸಿಗಲಿದೆ. ಸೋಮವಾರದಿಂದ 100 ದಿನಗಳ ಅಸಲಿ ಆಟ ಶುರುವಾಗಲಿದೆ. 

ಇದನ್ನೂ ಓದಿ : ಶ್ರೀದೇವಿ ಮದುವೆಗೂ ಮೊದಲೇ ಗರ್ಭಿಣಿಯಾಗಿದ್ರಾ? ಬೋನಿ ಕಪೂರ್‌ ಶಾಕಿಂಗ್‌ ಹೇಳಿಕೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News