ಬಿಗ್‌ ಬಾಸ್‌ ನಲ್ಲಿ ಈ ವಾರ ನಾಮಿನೇಟ್‌ ಆದ ಸ್ಪರ್ಧಿಗಳಿವರು... ಇವರೇ ಮನೆಯಿಂದ ಔಟ್‌.!?

Bigg Boss Kannada 10 Nomination : ಬಿಗ್‌ ಬಾಸ್‌ ಫಿನಾಲೆ ವೀಕ್‌ಗೆ ಡೈರೆಕ್ಟ್‌ ಎಂಟ್ರಿ ಪಡೆದಿರುವ ಸಂಗೀತಾ ಹೊರತುಪಡಿಸಿ ಉಳಿದ ಸದಸ್ಯರಲ್ಲಿ ಇಬ್ಬರ ಹೆಸರನ್ನು ಸ್ಪರ್ಧಿಗಳು ಹೇಳಬೇಕಿತ್ತು. 

Written by - Chetana Devarmani | Last Updated : Jan 16, 2024, 10:56 PM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ಈ ವಾರ ನಾಮಿನೇಟ್‌ ಆದವರು ಯಾರು?
  • ಬಿಗ್‌ ಬಾಸ್‌ ಫಿನಾಲೆಗೆ ಒಂದೇ ವಾರ ಬಾಕಿ
ಬಿಗ್‌ ಬಾಸ್‌ ನಲ್ಲಿ ಈ ವಾರ ನಾಮಿನೇಟ್‌ ಆದ ಸ್ಪರ್ಧಿಗಳಿವರು... ಇವರೇ ಮನೆಯಿಂದ ಔಟ್‌.!? title=

Bigg Boss Kannada 10 : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಕೊನೆಯ ನಾಮಿನೇಷನ್‌ ಮಂಗಳವಾರ ನಡೆದಿದೆ. ಕಳೆದ ವಾರ ಮನೆಯಿಂದ ಯಾರೂ ಹೊರಬರದೆ 8 ಜನರು ಉಳಿದುಕೊಂಡಿದ್ದರು. ಮನೆಯ ಕ್ಯಾಪ್ಟನ್‌ ಹಾಗೂ ಬಿಗ್‌ ಬಾಸ್‌ ಫಿನಾಲೆ ವೀಕ್‌ಗೆ ಡೈರೆಕ್ಟ್‌ ಎಂಟ್ರಿ ಪಡೆದಿರುವ ಸಂಗೀತಾ ಹೊರತುಪಡಿಸಿ ಉಳಿದ ಸದಸ್ಯರಲ್ಲಿ ಇಬ್ಬರ ಹೆಸರನ್ನು ಸ್ಪರ್ಧಿಗಳು ಹೇಳಬೇಕಿತ್ತು. 

ಇದನ್ನೂ ಓದಿ: Bigg Boss ಶೋನಲ್ಲಿ ಖ್ಯಾತ ಕಿರುತೆರೆ ನಟಿಯ ಸಂಸಾರದ ಗುಟ್ಟು ರಟ್ಟು.! 

ಬಿಗ್‌ ಬಾಸ್‌ ಫಿನಾಲೆಗೆ ಇನ್ನೊಂದು ವಾರ ಮಾತ್ರ ಬಾಕಿ ಉಳಿದಿದೆ. ಈ ವಾರ ಕೆಲವು ಅಚ್ಚರಿಯ ನಾಮಿನೇಷನ್​ ಆಗಿದೆ. ಈ ವಾರ ಫಿನಾಲೆ ವೀಕ್‌ ತಲುಪಲು ಅರ್ಹರಲ್ಲ ಎನಿಸುವ ಸ್ಪರ್ಧಿಯನ್ನು ನಾಮಿನೇಟ್ ಮಾಡಬೇಕಿತ್ತು. ಯಾರನ್ನು ನಾಮಿನೇಟ್‌ ಮಾಡಲು ಬಯಸುತ್ತಾರೋ ಅವರ ಫೋಟೊವನ್ನು ಉರಿಯುತ್ತಿರುವ ಬೆಂಕಿಗೆ ಹಾಕಬೇಕಿತ್ತು. ವಿನಯ್ ಅವರು ವರ್ತೂರು ಸಂತು ಹಾಗೂ ಪ್ರತಾಪ್ ಹೆಸರು ಹೇಳಿದರು. ವರ್ತೂರು ಸಂತೋಷ್ ಅವರು ನಮ್ರತಾ ಹಾಗೂ ವಿನಯ್ ಅವರ ಫೋಟೋ ಸುಟ್ಟರು. ಡ್ರೋನ್ ಪ್ರತಾಪ್ ಅವರು ತುಕಾಲಿ ಸಂತು ಹಾಗೂ ವಿನಯ್ ಅವರ ಹೆಸರನ್ನು ಹೇಳಿದರು. 

ತನಿಷಾ ಅವರು ಕಾರ್ತಿಕ್ ಹಾಗೂ ನಮ್ರತಾ ಅವರನ್ನು ನಾಮಿನೇಟ್‌ ಮಾಡಿದರು. ತನಿಷಾ ಹಾಗೂ ವರ್ತೂರು ಹೆಸರನ್ನು ನಮ್ರತಾ ಹೇಳಿದರು. ಮನೆಯ ಕ್ಯಾಪ್ಟನ್‌ ಸಂಗೀತಾ ಅವರು ಡ್ರೋನ್ ಪ್ರತಾಪ್​ರ ಹೆಸರನ್ನು ಹೇಳಿದರು. ಒಟ್ಟಾರೆ ಈ ವಾರ ಮನೆಯಿಂದ ಹೊರ ಹೋಗಲು ಪ್ರತಾಪ್‌, ಸಂತೋಷ್‌, ತನಿಷಾ, ವಿನಯ್‌, ನಮ್ರತಾ, ಕಾರ್ತಿಕ್ ನಾಮಿನೇಟ್‌ ಆಗಿದ್ದಾರೆ. ಇದರಲ್ಲಿ ಈ ವಾರ ತನಿಷಾ ಅಥವಾ ಸಂತೋಷ್‌ ಎಲಿಮಿನೇಟ್‌ ಆಗಬಹುದು ಎನ್ನಲಾಗಿದೆ. 

ಇದನ್ನೂ ಓದಿ: BBK10: ಬಿಗ್‌ಬಾಸ್ ಮನೆಯೊಳಗೆ ಹಾರರ್ ಸರ್ಪೈಸ್! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News