Bigg Boss : ಬಿಗ್‌ ಟ್ವಿಸ್ಟ್‌.. ಮನೆಯೊಳಗೆ ಹೋಗಲು ಸಹ ಟಾಸ್ಕ್‌ ಪಾಸ್‌ ಆಗ್ಬೇಕು ಸ್ಪರ್ಧಿಗಳು!!

Bigg Boss Kannada Season 10 contestants: ಈ ಸಲ ಬಿಗ್ ಬಾಸ್ ವೇದಿಕೆಯಲ್ಲಿಯೇ ವೋಟಿಂಗ್​ ಅಪೀಲ್‌ ಮಾಡಬೇಕಿತ್ತು. ಕಡಿಮೆ ಮತಗಳನ್ನು ಪಡೆದವರು ವೇಟಿಂಗ್‌ ರೂಮ್‌ನಲ್ಲಿ ಇರಬೇಕು. 

Written by - Chetana Devarmani | Last Updated : Oct 9, 2023, 08:06 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಗೆ ಶುಭಾರಂಭ
  • ಮನೆ ಜೊತೆ ಆಟದ ನಿಯಮ ಕೂಡ ಚೇಂಜ್‌
  • ಮನೆಯೊಳಗೆ ಹೋಗಲು ಸಹ ಟಾಸ್ಕ್‌ ಪಾಸ್‌ ಆಗ್ಬೇಕು
Bigg Boss : ಬಿಗ್‌ ಟ್ವಿಸ್ಟ್‌.. ಮನೆಯೊಳಗೆ ಹೋಗಲು ಸಹ ಟಾಸ್ಕ್‌ ಪಾಸ್‌ ಆಗ್ಬೇಕು ಸ್ಪರ್ಧಿಗಳು!!  title=

Bigg Boss Kannada Season 10: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ನಿನ್ನೆಯಿಂದ ಆರಂಭವಾಗಿದೆ. ಈ ಬಾರಿ ಹತ್ತನೇ ವರ್ಷದ ಸಂಭ್ರಮದಲ್ಲಿರುವ ಬಿಗ್‌ ಬಾಸ್‌ ತಂಡ ಆಟದ ರೀತಿಯಲ್ಲಿ ಕೊಂಚ ಬದಲಾವಣೆ ಮಾಡಿದೆ. 100 ದಿನಗಳ ಕಿರುತೆರೆ ಹಬ್ಬ ಶುರುವಾಗಿದೆ. ಈ ಬಾರಿ 11 ಜನ ಸ್ಪರ್ಧಿಗಳೂ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ. 

ಇದನ್ನೂ ಓದಿ : ಬಿಗ್‌ಬಾಸ್‌ ಮನೆಗೆ ಡ್ರೋನ್‌ ಪ್ರತಾಪ್‌ ಎಂಟ್ರಿ..! ಗೆದ್ದು ಬಾ ಎನ್ನುತ್ತಿದ್ದಾರೆ ಫ್ಯಾನ್ಸ್‌ 

ಪ್ರತಿಸಲ ವಾರದ ಕೊನೆಯಲ್ಲಿ ಪ್ರೇಕ್ಷಕರ ವೋಟಿಂಗ್‌ ಕೇಳುತ್ತಿದ್ದ ಸ್ಪರ್ಧಿಗಳು. ಈ ಸಲ ಬಿಗ್ ಬಾಸ್ ವೇದಿಕೆಯಲ್ಲಿಯೇ ವೋಟಿಂಗ್​ ಅಪೀಲ್‌ ಮಾಡಬೇಕಿತ್ತು. ಕಡಿಮೆ ಮತಗಳನ್ನು ಪಡೆದವರು ವೇಟಿಂಗ್‌ ರೂಮ್‌ನಲ್ಲಿ ಇರಬೇಕು. ಪ್ರೇಕ್ಷಕ ಒಪ್ಪಿಕೊಂಡವರು ಮಾತ್ರ ಬಿಗ್‌ ಬಾಸ್‌ ಮನೆಗೆ ಪ್ರವೇಶ ಪಡೆಯೋದು. 

ನಟಿ ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ನಟಿ ತನಿಷಾ ಕುಪ್ಪಂಡ, ರೈತ ವರ್ತೂರ್ ಸಂತೋಷ್​, ನಟ ಕಾರ್ತಿಕ್ ಮಹೇಶ್ ಮತ್ತು ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್‌ ಕಡಿಮೆ ಮತ ಪಡೆದು ವೇಟಿಂಗ್ ರೂಮ್‌ನಲ್ಲಿದ್ದರು. ಆದ್ರೂ ಇವರಿಗೆಲ್ಲಾ ಬಿಗ್​ ಬಾಸ್​ ಮನೆಗೆ ಎಂಟ್ರಿ ಸಿಕ್ಕಿದೆ.

11 ಮಂದಿ ಸ್ಪರ್ಧಿಗಳಲ್ಲಿ 6 ಮಂದಿಗೆ ಬಿಗ್​ ಬಾಸ್​  ಸ್ಪೆಷಲ್​ ಟಾಸ್ಕ್​ ಕೊಟ್ಟು ಆಯ್ಕೆ ಮಾಡಲಿದ್ದಾರೆ. ಸ್ಪೆಷಲ್ ಟಾಸ್ಕ್​ ಮೂಲಕ ಇವರ ಆಯ್ಕೆ ನಡೆಯುತ್ತೆ. 1 ವಾರದ ಬಳಿಕ ಮನೆಯಲ್ಲಿ ಯಾರು ಉಳಿದುಕೊಳ್ತಾರೆ, ಯಾರು ಹೊರಗೆ ಬರ್ತಾರೆ ಎಂಬುದು ನಿರ್ಧಾರವಾಗಲಿದೆ.   ​ 

ಇದನ್ನೂ ಓದಿ : ಇಂದಿನಿಂದ ಶುರುವಾಗ್ತಿದೆ ಬಿಗ್‌ ಬಾಸ್‌ ಕನ್ನಡ 10: JioCinema ದಲ್ಲಿವೆ ಹತ್ತು ಹಲವು ವಿಶೇಷಗಳು!  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News