BBK 10 : ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10 ಗೆದ್ದವರಿಗೆ ಸಿಗುವ ಹಣ ಎಷ್ಟು?

Bigg Boss Kannada season 10 prize amount : ಕಾರ್ಯಕ್ರಮವು ಹೊಸ ಸೆಟ್ ಅನ್ನು ಸಹ ಒಳಗೊಂಡಿರುತ್ತದೆ. ಇದು ಹಿಂದೆಂದಿಗಿಂತಲೂ ಹೆಚ್ಚು ಐಷಾರಾಮಿ ಎಂದು ಹೇಳಲಾಗುತ್ತಿದೆ.   

Written by - Chetana Devarmani | Last Updated : Oct 5, 2023, 02:22 PM IST
  • ಕಿರುತೆರೆಯ ಅಚ್ಚು ಮೆಚ್ಚನ ರಿಯಾಲಿಟಿ ಶೋ ಬಿಗ್ ಬಾಸ್
  • ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭಕ್ಕೆ ದಿನಗಣನೆ ಶುರು
  • ಬಿಗ್ ಬಾಸ್ ಕನ್ನಡ ಸೀಸನ್ 10 ಗೆದ್ದವರಿಗೆ ಸಿಗುವ ಬಹುಮಾನ ಏನು?
BBK 10 : ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10 ಗೆದ್ದವರಿಗೆ ಸಿಗುವ ಹಣ ಎಷ್ಟು? title=
Bigg Boss

Bigg Boss Kannada season 10 : ಕಿರುತೆರೆಯ ಅಚ್ಚು ಮೆಚ್ಚನ ರಿಯಾಲಿಟಿ ಶೋ ಬಿಗ್ ಬಾಸ್ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ಗಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ಈ ಬಾರಿ 10 ನೇ ಸೀಸನ್‌ ಆದ ಕಾರಣ ಕೆಲವು ವೈಶಿಷ್ಟ್ಯಗಳಿವೆ. ಕಾರ್ಯಕ್ರಮವು ಹೊಸ ಸೆಟ್ ಅನ್ನು ಸಹ ಒಳಗೊಂಡಿರುತ್ತದೆ. ಇದು ಹಿಂದೆಂದಿಗಿಂತಲೂ ಹೆಚ್ಚು ಐಷಾರಾಮಿ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : ಕರಾವಳಿ ಭಾಗದ ಕಥಾಹಂದರ ಹೊಂದಿರುವ "ಕುದ್ರು" ಚಿತ್ರ ಅಕ್ಟೋಬರ್ 13 ರಂದು ತೆರೆಗೆ 

ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ 8 ಅಕ್ಟೋಬರ್ 2023 ರಿಂದ ಶುರುವಾಗಲಿದೆ. ಎಂದಿನಂತೆಯೇ ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. ಈ ಎಲ್ಲ ವಿಚಾರಗಳ ಮಧ್ಯೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೂ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. 

ಪ್ರತಿ ಬಾರಿಯಂತೆ ಬಿಗ್‌ ಬಾಸ್‌ 100 ದಿನದ ಆಟವನ್ನು ಗೆದ್ದವರು ವಿನ್ನರ್‌ ಟ್ರೋಫಿ ಜೊತೆಗೆ ಕ್ಯಾಶ್‌ ಪ್ರೈಸ್‌ ಪಡೆಯುತ್ತಾರೆ. ಪ್ರತಿ ಸೀಸನ್‌ನಲ್ಲಿ ನೀಡುವಂತೆ ಈ ಬಾರಿಯೂ ಬಿಗ್​ ಬಾಸ್ ಗೆದ್ದವರಿಗೆ 50 ಲಕ್ಷ ಪ್ರೈಸ್ ಮನಿ ಸಿಗಲಿದೆ. ಅಲ್ಲದೇ ಟಾಸ್ಕ್‌ ಗೆದ್ದವರಿಗೂ ಸಹ ಹಣವನ್ನು ಬಹುಮಾನವಾಘಿ ನೀಡುತ್ತಿದ್ದಾರೆ. 

ಇನ್ನೇನೂ ಕೆಲವೇ ದಿನಗಳಲ್ಲಿ ಶುರುವಾಗುವ ಬಿಗ್‌ ಬಾಸ್‌ ಕನ್ನಡ ಸೀಸನ್ 10 ಹಲವು ವಿಶೇಷತೆಗಳಿಂದ ಕೂಡಿರಲಿದೆ. ಈ ಬಾರಿ ಹೊಸದಾಗಿ ಬಿಗ್ ಬಾಸ್​ ಮನೆ ನಿರ್ಮಾಣವಾಗಿದೆ. ಹೊಸ ಮನೆಯಲ್ಲಿ ಹೊಸ ಆಟ ಹೊಸ ಸ್ಪರ್ಧಿಗಳು ಕಿರುತೆರೆಯ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದ್ದಾರೆ.

ಇದನ್ನೂ ಓದಿ : ಕೋಪಗೊಂಡು ವೇದಿಕೆಯಿಂದಲೇ ಕೆಳಗಿಳಿದು ಬಂದ ಸುದೀಪ್‌..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News