Bigg Boss 10 : ಡ್ರೋನ್‌ ವಿಚಾರವಾಗಿ ಪ್ರತಾಪ್‌ - ಸ್ನೇಹಿತ್‌ ನಡುವೆ ಬಿಗ್‌ ಫೈಟ್‌.!

Bigg Boss Kannada Season 10 : ದಿನಕಳೆದಂತೆ ಬಿಗ್‌ ಬಾಸ್‌ ಮನೆಯ ವಾತಾವರಣ ಹಾಳಾಗಲು ಆರಂಭಿಸಿದೆ. ಮೊದಲ ವಾರವೇ ಮನೆ ಹೊತ್ತಿ ಉರಿಯುತ್ತಿದೆ.

Written by - Chetana Devarmani | Last Updated : Oct 12, 2023, 08:18 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್ 10
  • ಮೊದಲ ವಾರವೇ ಮನೆ ಹೊತ್ತಿ ಉರಿದ ಮನೆ
  • ಡ್ರೋನ್‌ ಪ್ರತಾಪ್‌ - ಸ್ನೇಹಿತ್‌ ನಡುವೆ ಜಗಳ
Bigg Boss 10 : ಡ್ರೋನ್‌ ವಿಚಾರವಾಗಿ ಪ್ರತಾಪ್‌ - ಸ್ನೇಹಿತ್‌ ನಡುವೆ ಬಿಗ್‌ ಫೈಟ್‌.!  title=
Drone Prathap

Bigg Boss 10 : ಬಿಗ್​ ಬಾಸ್​ ಮನೆಯಲ್ಲಿ ಡ್ರೋನ್ ಪ್ರತಾಪ್, ಹಳ್ಳಿಕಾರ್ ಸಂತೋಶ್, ತುಕಾಲಿ ಸಂತೋಶ್, ಸ್ನೇಹಿತ್, ರಕ್ಷಕ್ ಇನ್ನಿತರರು ಕುಳಿತು ಮಾತನಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಡ್ರೋನ್‌​ ಪ್ರತಾಪ್ ಅವರ ಕಾಲೆಳೆಯುತ್ತಿರುತ್ತಾರೆ. ಆಗ ಅಲ್ಲಿ ಡ್ರೋನ್‌ ವಿಚಾರ ಚರ್ಚೆ ಆಗುತ್ತಿರುತ್ತದೆ. ತುಕಾಲಿ ಸಂತು ಅವರು ಪ್ರತಾಪ್‌ ಅವರಿಗೆ ತಮಾಷೆಯಾಗಿ, ಇವರು ಡ್ರೋಣ್​ ಮಾಡಿರೋದಲ್ಲ ಅಂಗಡಿಯಿಂದ ತಂದು ನಂತರ ಔಷಧ ಹೊಡಿಸೋದು ಎಂದು ಹೇಳುತ್ತಾರೆ. ಪ್ರತಾಪ್ ಇದೆಲ್ಲಾ ಕೇಳುತ್ತ ಸುಮ್ಮನೆ ಕೂತಿರುತ್ತಾರೆ. 

ಹೀಗೆ ಡ್ರೋನ್‌ ವಿಚಾರವಾಗಿ ತಮ್ಮ ಕಾಲೆಳೆದಿದ್ದು ಪ್ರತಾಪ್‌ ಅವರ ಕೋಪಕ್ಕೆ ಕಾರಣವಾಗುತ್ತದೆ. ಬ್ಯುಸಿನೆಸ್​ ಬಗ್ಗೆ ಮಾತಾಡೋದಿದ್ದರೆ ಆಫೀಸ್‌ಗೆ ಬನ್ನಿ ಇಲ್ಲಿ ಬೇಡ ಎನ್ನುತ್ತಾರೆ. ನೀವೇ ತಾನೆ ಒಂದೆಕರೆ ಜಾಗಕ್ಕೆ ಔಷಧಿ ಹೊಡಿತಿನಿ ಎಂದಿದ್ದು ಎನ್ನುತ್ತಾ ವಾದ ಶುರುವಾಗುತ್ತೆ.  

 

 

ಈ ಜಗಳದ ಮಧ್ಯೆ ಸ್ನೇಹಿತ್​ ಡ್ರೋನ್‌ ಮಾತು ಅತಿರೇಕಕ್ಕೆ ಹೋಗಿದೆ.​ ಜೆನ್ಯುನ್​ ಆಗಿ ಕೇಳಿರುವ ಮಾತಿಗೆ ಈ ರೀತಿ ಉತ್ತರ ಕೊಡಬೇಡ. ಡೋಂಗಿ ಮಾಡಬೇಡ ಎಂದು ಸ್ನೇಹಿತ್‌ ಹೇಳುತ್ತಾರೆ. ಡೋಂಗಿ ಮಾಡ್ತಾ ಇರೋದು ಯಾರು ಎಂದು ಪ್ರತಾಪ್ ಮತ್ತೆ ಪ್ರಶ್ನೆ ಮಾಡುತ್ತಾರೆ. ಹೀಗೆ ಡ್ರೋನ್‌ ವಿಚಾರವಾಗಿ ಬಿಗ್‌ ಬಾಸ್‌ ಮನೆಯಲ್ಲಿ ಒಂದು ಬಿಗ್‌ ಫೈಟ್‌ ನಡೆದು ಹೋಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News